ಕಡಲ ತೀರದಲ್ಲಿ ಚಿರ ಯವ್ವನೆಅಂತೆ ಕಂಗೊಳಿಸಿದ ರಾಧಿಕಾ ಕುಮಾರಸ್ವಾಮಿ :ವಾವ್ ಎಂದ ನೆಟ್ಟಿಗರು

ಕಡಲ ತೀರದಲ್ಲಿ ಚಿರ ಯವ್ವನೆಅಂತೆ ಕಂಗೊಳಿಸಿದ ರಾಧಿಕಾ ಕುಮಾರಸ್ವಾಮಿ :ವಾವ್ ಎಂದ ನೆಟ್ಟಿಗರು

ನಟಿ ರಾಧಿಕಾ ಕುಮಾರಸ್ವಾಮಿ ಜಾಲಿ ಮೂಡ್‌ನಲ್ಲಿದ್ದಾರೆ. ಸೋಶಿಯಲ್‌ ಮೀಡಿಯಾದಲ್ಲಿ ಎರಡು ದಿನದ ಹಿಂದೆ ಅವರು ಬೀಚ್‌ನಲ್ಲಿ ತಾವು ಸಂಭ್ರಮಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ.

ಹೆಚ್ಚಿನವರು ರಾಧಿಕಾ ಕುಮಾರಸ್ವಾಮಿಯ ಅವರ ಬ್ಯೂಟಿಯನ್ನು ಹೊಗಳಿದ್ದಾರೆ. ನಾನು ಚಿಕ್ಕವಯಸ್ಸಿನಲ್ಲಿ ನಿಮ್ಮನ್ನು ಹೇಗೆ ನೋಡಿದ್ದೆನೋ, ಈಗಲೂ ಕೂಡ ಅದೇ ರೀತಿಯಲ್ಲಿದ್ದೀರಿ ಎಂದಿದ್ದಾರೆ.

ಇತ್ತೀಚೆಗೆ ರಾಧಿಕಾ ಕುಮಾರಸ್ವಾಮಿ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಇದರಲ್ಲಿ ಅವರು ಹಾಗೂ ಆಕೆಯ ಪ್ರೀತಿಯ ನಾಯಿಯ ಹೊರತಾಗಿ ಮತ್ಯಾರೂ ಇದ್ದಿರಲಿಲ್ಲ. ರಾಧಿಕಾ ಕುಮಾರಸ್ವಾಮಿ ಈಗ ಏಕಾಂಗಿಯಾಗಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿದ್ದವು.

ಇನ್ನೂ ಕೆಲವರು ರಾಧಿಕಾ ಕುಮಾರಸ್ವಾಮಿ ಈ ವಿಡಿಯೋಗೆ ಬಳಸಿರುವ ಹಾಡನ್ನು ಕೇಳಿ ಸಖತ್‌ ಟ್ರೋಲ್‌ ಮಾಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಸಿನಿಮಾದ 'ಕಡಲನು..' ಹಾಡನ್ನು ಅವರು ವಿಡಿಯೋಗೆ ಬಳಸಿಕೊಂಡಿದ್ದಾರೆ.