ಮದುವೆಯ ಸೂಚನೆ ಕೊಟ್ಟ ಸ್ಯಾಂಡಲ್ ವುಡ್ ಡಿಂಪಲ್ ಕ್ವಿನ್!

ಮದುವೆಯ ಸೂಚನೆ ಕೊಟ್ಟ ಸ್ಯಾಂಡಲ್ ವುಡ್ ಡಿಂಪಲ್ ಕ್ವಿನ್!

ರಚಿತಾ ರಾಮ್ ನಮ್ಮ ಕನ್ನಡ ಚಿತ್ರರಂಗದ ಪ್ರಮುಖ ನಟಿಯರಲ್ಲಿ ಒಬ್ಬರು ಎಂದರೆ ತಪ್ಪಾಗಲಾರದು.  ಅವರು ಹಲವು ಜನಪ್ರಿಯ ಚಿತ್ರಗಳಲ್ಲಿ ಅಭಿನಯಿಸಿ ಹೆಸರು ಗಳಿಸಿದ್ದಾರೆ. ಈಗ ಸದ್ಯದಲ್ಲಿ ಹೆಚ್ಚು ಬ್ಯುಸಿ ಆಗಿರುವ ಸ್ಯಾಂಡಲ್ ವುಡ್ ನಟಿ ಎಂದು ಕೊಡ ಗುರುತಿಸಿಕೊಂಡಿದ್ದಾರೆ. ಆದರೆ ಕೊಂಚ ಕಳೆದ ವರ್ಷಗಳಿಂದ ಕೊಡ ಇವರ ಸಿನಿಮಾಗಳು ಮಿಂಚಿನ ರೀತಿಯಲ್ಲಿ ಹಿಟ್ ಪಟ್ಟಿಗೆ ಸೇರ್ಪಡೆ ಆಗುತ್ತಿಲ್ಲ ಇನ್ನೂ ಈ ಕಾರಣದಿಂದ ಕಿರುತೆರೆಯತ್ತ ಮುಖ ಮಾಡಿದ್ದಾರೆ ಎಂದು ಊಹೆಗಳು ಕೊಡ ಹುಟ್ಟಿಕೊಂಡಿವೆ. ಮೊದಲಿಗೆ ಮಹಾಭಾರತ ಎಂಬ ಕಾಮಿಡಿ ಶೋ ಮೂಲಕ ಕಿರುತೆರೆಗೆ ಎಂಟ್ರಿ ಕೊಟ್ಟರು ಅದಾದ ಬಳಿಕ ಈಗ ಡ್ರಾಮಾ ಜೂನಿಯರ್ಸ್ ನಲ್ಲಿ ಕೊಡ ಜಡ್ಜ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಇನ್ನು ರಚಿತಾ ರಾಮ್ ಜ. 3 ಅಕ್ಟೋಬರ್ 1992 ಅವರು ಜನಿಸಿದ ಹೆಸರು ಬಿಂದು ಮಧವಿ. ಅವರು  ನೃತ್ಯಕಾರ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದರು. ತಂದೆ ರಾಮ್ ಕೂಡಾ ಹೊಟೆಲುದಾರನಾಗಿ ಮತ್ತು ನೃತ್ಯಗಾರನಾಗಿದ್ದರು. ಆಕೆಯ ಅಕ್ಕ ನಿಖಿತಾ ರಾಮ್, ಕೂಡಾ ನಟಿ. ರಚಿತಾ ತಾವು 2007ರಲ್ಲಿ ತಿರುಪತಿ ಶ್ರೀ ವಿದ್ಯಾಲಯದಿಂದ ವಿದ್ಯಾಭ್ಯಾಸ ಪೂರ್ಣಗೊಳಿಸಿದರು. ಮೊದಲಿಗೆ ಜಿ ಕನ್ನಡದ ಅರಸಿ ಮೂಲಕ ನಾಯಕ ನಟಿಯಾಗಿ ಗುರುತಿಸಿಕೊಂಡ ಇವರು  ತಮ್ಮ ಸಿನೆಮಾ ವೃತ್ತಿಯನ್ನು 2013ರಲ್ಲಿ "ಬುಲ್ಬುಲ್" ಚಿತ್ರದಿಂದ ಪ್ರಾರಂಭಿಸಿದರು. ಈ ಚಿತ್ರದ ಯಶಸ್ಸಿನಿಂದ ಕನ್ನಡ ಚಿತ್ರರಂಗದಲ್ಲಿ ತಾರೆಯಾಗಿ ಹೊರಹೊಮ್ಮಿದರು. ಇದಾದ ನಂತರ "ಅಂಬರೀಷ", "ರನ್ನ", "ಭಾರ್ಜರಿ" ಮತ್ತು "ನಟಸಾರ್ವಭೌಮ" ಸೇರಿದಂತೆ ಅನೇಕ ಯಶಸ್ವಿ ಚಿತ್ರಗಳಲ್ಲಿ ನಟಿಸಿದರು.

ಇದೀಗ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ನಟಿ ರಚಿತಾ ರಾಮ್ ಈಗ ತಮ್ಮ ಮದುವೆಯ ವಿಚಾರದಲ್ಲಿ ಸದ್ದು ಮಾಡುತ್ತಿದ್ದಾರೆ. 32 ವರ್ಷ ಆಗಿದ್ದರು ಕೊಡ ತಮ್ಮ ಮದುವೆಯ ವಿಚಾರದಲ್ಲಿ ಯಾವ ಸೂಚನೆ ನೀಡದಿರುವ ಕಾರಣ ಹೋದಲ್ಲಿ ಬಂದಲ್ಲಿ ಪ್ರಶ್ನೆ ಮಾಡುತ್ತಲೇ ಬಂದಿದ್ದರು.

ಇದೀಗ ಈ ಹಿಂದೆ ಡ್ರಾಮಾ ಜೂನಿಯರ್ಸ್ ಹಾಗೂ ಸರಿಗಮಪ ಮಹಾಸಂಗಮದಲ್ಲಿ ಜಸ್ಕರಣ್ ಸಿಂಗ್ ಮತ್ತು ಅಮೂಲ್ಯ ಅವರು ರಚಿತಾ ರಾಮ್ ಅಭಿಯನದ ಒಂದು ಹಾಡುಗಳನ್ನು ಫರ್ಫಾಮ್ ಮಾಡಿದ್ದರು. ಈ ಹಾಡುಗಳನ್ನು ಕೇಳಿ ಸಂತೋಷ ವ್ಯಕ್ತಪಡಿಸಿದ್ದ ರಚಿತಾ ರಾಮ್, ಹಿಂದಿಯ ಏ ರಾತೇ ಮೌಸಮ್ ಹಾಡು ಹೇಳುವಂತೆ ಮನವಿ ಮಾಡಿಕೊಂಡರು. ಆಗ ರಾಣಿ ರಾಜನನ್ನೇ ಮದುವೆಯಾಗಬೇಕು ಅಂತೇನಿಲ್ಲ ರಾಣಿತರ  ನೋಡಿಕೊಳ್ಳುವನನ್ನು ಮದುವೆಯಾಗಬೇಕು ಎಂದಾಗ ರವಿಚಂದ್ರನ್ ನಕ್ಕು "ಇದು ಸರಿಯಾದ ಸಮಯ ಅಲ್ಲ, ರಾಂಗ್ ಟೈಮ್" ಅಂದಿದ್ದಾರೆ. ಇಷ್ಟು ಹೇಳುತ್ತಿದ್ದಂತೆ ಜೋರಾಗಿ ನಕ್ಕ ರಚಿತಾ ರಾಮ್, ಶೀಘ್ರದಲ್ಲಿಯೇ ಉತ್ತರ ಕೊಡುತ್ತೇನೆ ಎಂದಿದ್ದಾರೆ.  ಇದಕ್ಕೆ ಇದು ಮದುವೆಯ ಮುನ್ಸೂಚನೆ ಇರಬಹುದಾ ಎಂದು ಹಲವರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.