ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದ ರಚಿತಾ ರಾಮ್ ; ಏನಾಯ್ತು ನೋಡಿ ; ವಿಡಿಯೋ ವೈರಲ್

ಶೂಟಿಂಗ್ ವೇಳೆ ಕಾಲು ಜಾರಿ ಬಿದ್ದ ರಚಿತಾ ರಾಮ್ ; ಏನಾಯ್ತು ನೋಡಿ ; ವಿಡಿಯೋ ವೈರಲ್

ಸ್ಯಾಂಡಲ್‌ವುಡ್‌ ಬುಲ್ ಬುಲ್ ರಚಿತಾ ರಾಮ್ ಸದ್ಯಕ್ಕೆ ಬೇಡಿಯ ಲಿಸ್ಟ್‌ನಲ್ಲಿ ಮೊದಲ ಸ್ಥಾನ ಪಡೆದಿರುವ ನಟಿ. ಕೈ ತುಂಬಾ ಆಫರ್‌ಗಳಿದೆ ಶೂಟಿಂಗ್ ಮಾಡಲು ಸಮಯವಿಲ್ಲ. ಎಲ್ಲರಿಗೂ ಕಾಲ್ ಶೀಟ್‌ನಲ್ಲಿ ಡೇಟ್ ಕೊಟ್ಟು ಕೊಟ್ಟು ಸಿನಿಮಾ ಸಹಿ ಮಾಡಿ ಮಾಡಿ ಒಟ್ನಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದ್ದಾರೆ. ರಚ್ಚು ಅಭಿಮಾನಿಗಳು ಎಷ್ಟು ಜನ ಇದ್ದಾರೆ ನೋಡಬೇಕು ಅಂದ್ರೆ ವೀಕೆಂಡ್‌ನಲ್ಲಿ ಅವರ ಮನೆ ಬಳಿ ಹೋಗಬೇಕು ಇಲ್ಲ ಅಂದ್ರೆ ಹುಟ್ಟುಹಬ್ಬಕ್ಕೆ ಕೇಕ್ ಮತ್ತು ಹಾರ ಹಿಡಿದುಕೊಂಡು ಬರ್ತಾರೆ ಆಗ ನೋಡಬೇಕು.

ಜನವೋ ಜನ ಹೌದು ನಟಿ ರಚಿತಾ ರಾಮ್ ಜನ ಮೆಚ್ಚಿದ ನಟಿ.ಸಂಜು ಮತ್ತು ಗೀತಾ’ ಆಗಿ ಈ ಬಾರಿ ಶ್ರೀನಗರ ಕಿಟ್ಟಿ ಮತ್ತು ಡಿಂಪಲ್ ಬೆಡಗಿ ರಚಿತಾ ರಾಮ್ ಕಾಣಿಸಿಕೊಳ್ತಿದ್ದಾರೆ. ಇದೀಗ ಸಂಜು ವೆಡ್ಸ್ ಗೀತಾ​ 2’ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್​​ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ.ಹೌದು ಅವರು ಸಂಜು ವೆಡ್ಸ್ ಗೀತಾ​ 2 ಚಿತ್ರದಲ್ಲಿ ಶ್ರೀಗರ ಕಿಟ್ಟಿಗೆ ಜೊತೆಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.ಈ ಚಿತ್ರದ ಫೋಟೋಶೂಟ್ ನಡೆದಿದೆ. ಪೊಟೋಶೂಟ್​​ಗೆ ಇಟ್ಟಿದ್ದ ಬೆಂಚ್ ಹತ್ತಲು ಸರ್ಕಸ್ ಮಾಡಿದ್ದಾರೆ ರಚಿತಾ. ಆಗ ಅವರು ಜಾರಿದ್ದಾರೆ. ಅಲ್ಲಿದ್ದವರು ರಚಿತಾನ ಹಿಡಿದುಕೊಂಡಿದ್ದಾರೆ. ರಚಿತಾ ಜೊತೆ ಶ್ರೀನಗರ ಕಿಟ್ಟಿ ಕೂಡ ಭಾಗಿ ಆಗಿದ್ದಾರೆ. ನಾಗಶೇಖರ್ ‘ಸಂಜು ವೆಡ್ಸ್ ಗೀತ’ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದರು. ಸೀಕ್ವೆಲ್​ಗೂ ಅವರೇ ನಿರ್ದೇಶನ ಮಾಡುತ್ತಿದ್ದಾರೆ.   

ಸಂಜು ವೆಡ್ಸ್ ಗೀತಾ 2 ಸಿನಿಮಾವನ್ನು ಘೋಷಿಸಿದ್ದ ನಾಗಶೇಖರ್ ಸದ್ಯ ಚಿತ್ರದ ಲಾಂಚ್ ದಿನಾಂಕವನ್ನು ಹಂಚಿಕೊಂಡಿದ್ದಾರೆ.ಇದೇ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಗಸ್ಟ್ 15 ರಂದು ಬೆಂಗಳೂರಿನ ಲಲಿತ್ ಅಶೋಕ್ ಹೋಟೆಲ್‌ನಲ್ಲಿ ಶ್ರೀನಗರ ಕಿಟ್ಟಿ- ರಚಿತಾ ಸಿನಿಮಾ ಲಾಂಚ್ ಆಗಲಿದೆ. ಈ ಕರ‍್ಯಕ್ರಮಕ್ಕೆ ವಿಶೇಷವಾದ ಆಮಂತ್ರಣವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಒಟ್ಟಿನಲ್ಲಿ ರಮ್ಯಾ ಜಾಗದಲ್ಲಿ ನಾವು ರಚಿತಾ ರಾಮ್ ನೋಡಬಹುದಾಗಿದೆ (video credit : namma KFI