ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?

ಲಾಯರ್ ಜಗದೀಶ್ ಹೇಳಿಕೆಗೆ ಖಡಕ್ ಉತ್ತರ ಕೊಟ್ಟ ರಚಿತಾ ರಾಮ್! ಹೇಳಿದ್ದೇನು ಗೊತ್ತಾ?

ರಚಿತಾ ರಾಮ್ ಅವರು ತಮ್ಮ ಕೆಲವು ಹೇಳಿಕೆಗಳಿಂದ ವಿವಾದಗಳಿಗೆ ಗುರಿಯಾಗುತ್ತಾ ಇರುತ್ತಾರೆ. 2023ರಲ್ಲಿ 'ಕ್ರಾಂತಿ' ಚಿತ್ರದ ಪ್ರಚಾರದ ವೇಳೆ, ಅವರು "ಇಷ್ಟು ವರ್ಷ ಜನವರಿ 26 ಅಂದರೆ ಗಣರಾಜ್ಯೋತ್ಸವ. ಆದರೆ ಈ ವರ್ಷ ಕ್ರಾಂತಿ ಉತ್ಸವ ಮಾತ್ರ" ಎಂದು ಹೇಳಿದ್ದರು. ಈ ಹೇಳಿಕೆ ದೇಶಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಯಿತು, ಮತ್ತು ಮಂಡ್ಯ ಜಿಲ್ಲೆಯ ಮದ್ದೂರು ಪೊಲೀಸ್ ಠಾಣೆಯಲ್ಲಿ ಅವರ ವಿರುದ್ಧ ದೂರು ದಾಖಲಾಗಿತ್ತು. 
ಇದಕ್ಕೂ ಮುನ್ನ, 'ಐ ಲವ್ ಯೂ' ಚಿತ್ರದ ಹಾಡೊಂದರಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಕ್ಕಾಗಿ, ಮತ್ತು ನಂತರ 'ಲವ್ ಯೂ ರಚ್ಚು' ಚಿತ್ರದ ಪ್ರಚಾರದ ವೇಳೆ "ಮದುವೆಯಾದ ದಂಪತಿ ಏನು ಮಾಡುತ್ತಾರೋ ಅದನ್ನೇ ಈ ಸಿನಿಮಾದಲ್ಲಿ ಮಾಡಿರುವುದು" ಎಂಬ ಹೇಳಿಕೆ ನೀಡಿದ್ದಕ್ಕಾಗಿ, ರಚಿತಾ ರಾಮ್ ವಿವಾದಕ್ಕೆ ಸಿಲುಕಿದ್ದರು. 

ಈ ಹೇಳಿಕೆಗಳು ಕನ್ನಡ ಕ್ರಾಂತಿ ದಳದ ಆಕ್ರೋಶಕ್ಕೆ ಕಾರಣವಾಗಿದ್ದು, ಅವರು ಚಿತ್ರದ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ವಿವಾದಗಳ ನಂತರ, ರಚಿತಾ ರಾಮ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆಯಾಚಿಸಿದ್ದರು. ಇದಾದ ಬಳಿಕ ಸಣ್ಣ ಪುಟ್ಟ ವಿವಾದಗಳನ್ನು ಎದುರಿಸುತ್ತಲೇ ಇದಿತ್ತಾರೇ. ಇನ್ನು ಈ ಟೀಕೆಗಳ ಬಗ್ಗೆ ಮಾಧ್ಯಮದವರು ಪ್ರಶ್ನೆ ಮಾಡಿದಾಗ ಅವರು ನಾನು ನನ್ನ ಕೆಲಸದ ಕಡೆ ಮಾತ್ರ ಗಮನ ನೀಡುತ್ತೇವೆ ಈ ರೀತಿಯ ಟೀಕೆಯ ಮಾತುಗಳಿಗೆ ನಾನು ತಲೆ ಕೊಡುವುದಿಲ್ಲ ಎಂದಿದ್ದಾರೆ. ಏಕೆಂದ್ರೆ ನಮ್ಮವರಿಗೆ  ನಾವೇನೆಂದು ಅರ್ಥ ಮಾಡಿಸಬೇಕಿಲ್ಲ. ಅರ್ಥ ಮಾಡಿಸಬೇಕು ಎಂದವರು ನಮ್ಮವರಲ್ಲ ಎಂದು ಉತ್ತರ ನೀಡಿದ್ದರು.


ಇದೀಗ ಸಂಜು ಮತ್ತು ಗೀತಾ 2 ಸಿನಿಮಾ ಪ್ರಚಾರದಲ್ಲಿ ಹಾಗೂ ಇನ್ನಿತರ ಸಿನಿಮಾದಲ್ಲಿ ಬ್ಯುಸಿ ಆಗಿರುವ ರಚಿತಾ ರಾಮ್ ಗೆ ದೊಡ್ಡ ಆಘಾತವೇ ಎದುರಿಯಾಗಿದೆ ಎಂದು ಹೇಳಬಹುದು. ನಟಿ ರಚಿತಾ ರಾಮ್ ಮತ್ತು ಲಾಯರ್ ಜಗದೀಶ್ ಅವರ ನಡುವೆ ಇತ್ತೀಚೆಗೆ ಕೆಲವು ವಿವಾದಗಳು ನಡೆದಿವೆ. ಲಾಯರ್ ಜಗದೀಶ್ ಅವರು ರಚಿತಾ ರಾಮ್ ಅವರ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದು, ಅವರು ರಾಜಕಾರಣಿಗಳೊಂದಿಗೆ ಒಡನಾಟ ಹೊಂದಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿದ ರಚಿತಾ ರಾಮ್, ತಮ್ಮ 12 ವರ್ಷಗಳ ಚಿತ್ರರಂಗದ ವೃತ್ತಿಜೀವನದಲ್ಲಿ ಕಠಿಣ ಪರಿಶ್ರಮದಿಂದ ಯಶಸ್ಸು ಗಳಿಸಿದ್ದೇನೆ ಎಂದು ಹೇಳಿದ್ದಾರೆ. ಅವರು ತಮ್ಮ ಕೆಲಸ ಮತ್ತು ಕುಟುಂಬದ ಮೇಲೆ ಮಾತ್ರ ಗಮನ ಹರಿಸುತ್ತಾರೆ ಎಂದು ಸ್ಪಷ್ಟಪಡಿಸಿದ್ದಾರೆ. ನಾನು ದುಡಿದು ನನ್ನ ಬದುಕು ನಡೆಸುತ್ತಿದ್ದೇನೆ ಅಕಸ್ಮಾತ್ ನನಗೆ ದುಡಿಯಲು ಆಗಲಿಲ್ಲ ಎಂದಲ್ಲಿ ದೇವಸ್ಥಾನದಲ್ಲಿ ಕೆಲ್ಸಾ ಮಾಡಿ ಅದರಿಂದ ಬಂದ ಹಣದಿಂದ ನಾನು ಊಟ ಮಾಡುತ್ತೇನೆ ಹೊರತು ನನ್ನ ಜೀವನಕ್ಕೆ ಯಾರ್ಯಾರದೋ ಬಳಿ ಹೋಗುವ ರೀತಿ ನನ್ನ ಮನೆಯಲ್ಲಿ ಬೆಳಸಿಲ್ಲ ಎಂದು ಉತ್ತರಿಸಿದ್ದಾರೆ.