ರಚಿತಾ ರಾಮ್ ಜೊತೆ ಧನ್ವೀರ್ ಮದುವೆ : ಎಲ್ಲರೂ ಶಾಕ್ ? ಧನ್ವೀರ್ ಹೇಳಿದ್ದೇನು

ರಚಿತಾ ರಾಮ್ ಜೊತೆ ಧನ್ವೀರ್ ಮದುವೆ : ಎಲ್ಲರೂ ಶಾಕ್ ? ಧನ್ವೀರ್  ಹೇಳಿದ್ದೇನು

ಕೆಲವು ದಿನಗಳ ಹಿಂದೆಷ್ಟೇ ಧನ್ವೀರ್ ಅವರ ವಾಮನ ಚಿತ್ರಕ್ಕೆ ದರ್ಶನ ಸಹ  ಒಂದು ವಿಡಿಯೋದ ಮೂಲಕ ಧನ್ವೀರ್ ಗೆ ಶುಭ ಕೋರಿದ್ದರು . ಈ ಹಿನ್ನೆಲೆಯಲ್ಲಿ  ಧನ್ವೀರ್ ಅವ್ರು ಈಗ ಎಲ್ಲರ ಗಮನ ಸೆಳಿದಿದ್ದಾರೆ . 

ಮೋಸ್ಟ್‌ ಹ್ಯಾಂಡ್ಸಮ್ ಬ್ಯಾಚುಲರ್ ಆಫ್ ಸ್ಯಾಂಡಲ್‌ವುಡ್‌ ಅಂತ ಪಟ್ಟ ಗಿಟ್ಟಿಸಿಕೊಂಡಿರುವುದು ನಟ ಧನ್ವೀರ್. ಮಹಿಳಾ ಅಭಿಮಾನಿಗಳ ಸಂಖ್ಯೆ ನೋಡಿದ್ರೆ ಶಾಕ್ ಆಗಿಬಿಡುತ್ತೀರಿ. ಹಾಗಿದ್ರೆ ಧನ್ವೀರ್ ಸಿಂಗಲ್ಲಾ ಎಂದು ಪ್ರಶ್ನಿಸಿದ್ದಕ್ಕೆ...'ನಾನು ಸಿಂಗಲ್ ಆಗಿದ್ದೀನಿ...ಲೈಫ್‌ ಲಾಂಗ್ ಸಿಂಗಲ್ ಆಗಿದ್ದು ಬಿಡೋಣ ಅಂದುಕೊಂಡಿದ್ದೀನಿ'ಎಂದು ಹೇಳಿದ್ದಾರೆ. 'ರಚಿತಾ ರಾಮ್ ಮಾತ್ರವಲ್ಲ ಬೇರೆ ಅವರ ಜೊತೆಗೂ ನನಗೆ ಸಾಕಷ್ಟು ಸಲ ಸಂಬಂಧ ಕಟ್ಟಿದ್ದಾರೆ. ಜನರೇ ಸಂಬಂಧ ಕಟ್ಟಿ ಅವರೇ ಛೌಟ್ರಿ ಕೂಡ ಬುಕ್ ಮಾಡಿಬಿಟ್ಟಿದ್ದಾರೆ. ತಾಂಬುಲ ಬದಲಾಯಿಸಿಲ್ಲ 

ಅದು ಬಿಟ್ಟು ಬೇರೆ ಎಲ್ಲನೂ ಮಾಡಿಬಿಟ್ಟಿದ್ದಾರೆ.ನಾಯಕಿ ಪಕ್ಕ ಕುಳಿತುಕೊಂಡು ಮಾತನಾಡುತ್ತಿದ್ದರೆ ಫೋಟೋ ತೆಗೆದುಕೊಂಡು ಗಾಸಿಪ್ ಕ್ರಿಯೇಟ್ ಮಾಡುತ್ತಾರೆ. ಓ ಇವರಿಬ್ಬರ ನಡುವೆ ಏನೋ ಆಗುತ್ತಿದೆ ಎಂದು ಗಾಸಿಪ್ ಶುರು ಮಾಡುತ್ತಾರೆ ಯಾರೂ ಯಾರೊಟ್ಟಿಗೂ ಮಾತನಾಡುವಂತೆ ಇಲ್ಲ. ನಾವು ಶೇರ್ ಮಾಡುವ ಬಾಂಡಿಂಗ್ ಏನು ಅಂತ ನಮಗೆ ಮಾತ್ರ ಗೊತ್ತಿರುವುದು. ಈಗ ನಾನು ರಚಿತಾ ರಾಮ್‌ ಜೊತೆ ಶೇರ್ ಮಾಡುವ ಬಾಂಡಿಂಗ್ ಬೇರೆ ಅವರ ಕಷ್ಟ ಸುಖ ನಮ್ಮ ಕಷ್ಟ ಸುಖ ಹಂಚಿಕೊಳ್ಳುವ ರೀತಿನೇ ಬೇರೆ. ಆ ಸಮಯದಲ್ಲಿ ಎಲ್ಲಾ ಜನರ ಮಾಡಿಬಿಟ್ಟರು. ಈ ಗಾಸಿಪ್‌ಗಳು ನನಗೆ ಇಷ್ಟ ಆಗುವುದಿಲ್ಲ' ಎಂದು ಧನ್ವೀರ್ ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

( video credit : namma KFI )