ಓಡಿ ಹೋಗಿ ಮದುವೆಯಾದ ಗಾಯಕಿ ಪೃಥ್ವಿ ಭಟ್ ಏನು ಕ್ಲಾರಿಟಿ ಕೊಟ್ಟಿದಾರೆ ನೋಡಿ ?

ಜೀ ಕನ್ನಡದಲ್ಲಿ ಗಾಯಕಿಯಾಗಿ ಕಾಣಿಸಿಕೊಳ್ತಾ ಇದ್ದ ಖ್ಯಾತ ಗಾಯಕಿ ಪೃಥ್ವಿ ಭಟ್ ಗೊತ್ತೇ ಇದೆ ಕಳೆದ ಕೆಲವು ದಿನಗಳ ಹಿಂದೆ ಅವರು ಅಭಿಷೇಕ್ ಎನ್ನುವವರನ್ನ ಮದುವೆಯಾಗಿದ್ರು ಹಸೆಮನೆ ಏರಿ ಹೊಸ
ಜೀವನಕ್ಕೆ ಕಾಲಿಟ್ಟ ಗಾಯಕಿ ಹಾಗೂ ಆಕೆಯ ಪತಿ ವಿರುದ್ಧ ಇದೀಗ ಆರೋಪ ಕೇಳಿಬಂದಿದೆ ಸ್ವತಃ ಪೃಥ್ವಿಭಟ್ಟ ತಂದೆ ಮಗಳು ನಮ್ಮ ವಿರೋಧದ ನಡುವೆಯು ಮನೆಬಿಟ್ಟು ಹೋಗಿ ಮದುವೆ ಆಗಿದ್ದಾಳೆ ಆಕೆಯನ್ನ ವಶೀಕರಣ ಮಾಡಿಕೊಂಡು ಮದುವೆ ಮಾಡಿಕೊಳ್ಳಲಾಗಿದೆ ಆಕೆಯ ವರ್ತನೆಯಲ್ಲಿ ಬಹಳಷ್ಟು ಬದಲಾವಣೆಯಾಗಿತ್ತು ಆಕೆಯನ್ನ ನಾವು ನೋಡಿದ ತಕ್ಷಣ ನಮಗೆ ಗೊತ್ತಾಗಿತ್ತು ಆಕೆಯಲ್ಲಿ ಏನೋ ಒಂದು ರೀತಿಯಾದಂತಹ ಸಂಚಲನ ಆಗ್ತಾ ಇದೆ ಅಂತ ಅದು ವಶೀಕರಣ ಅನ್ನೋದು ಈಗ ಗೊತ್ತಾಗ್ತಿದೆ ಅಂತ ಹೇಳುವುದರ ಮುಖಾಂತರವಾಗಿ ನಮ್ಮನ್ನ ಬ್ಲಾಕ್ ಮೇಲ್ ಮಾಡಲಾಗುತ್ತಿದೆ ಒತ್ತಡವನ್ನು ಹೇರಲಾಗುತ್ತಿದೆ ಅಂತ ಹೇಳಲಾಗುತ್ತಿದೆ ಹಾಗಿದ್ರೆ ನಿಜವಾಗಲೂ ನಡೆದಿದ್ದು ಏನು
ಹಾಯ್ ಅಪ್ಪ ಸಾರಿ ಈಗ ಆಲ್ರೆಡಿ ಎರಡು ದಿನದಿಂದ ಹವ್ಯಕ ಗ್ರೂಪ್ಲ್ಲಿ ಮತ್ತೆ ಬೇರೆ ಬೇರೆ ಗ್ರೂಪ್ಅಲ್ಲಿ ಆ ನರಹರಿ ದೀಕ್ಷಿತ್ ಸರ್ನ ಬಗ್ಗೆ ಮತ್ತೆ ನನ್ನ ಬಗ್ಗೆ ಎಲ್ಲ ಆಡಿಯೋ ಮೆಸೇಜ್ ಮೂಲಕ ನಿಮಗೆ ಕಳಿಸುತ್ತಾ ಇದ್ದಿ ಈ ವಿಷಯದಲ್ಲಿ ನರಹರಿ ದೀಕ್ಷಿತ್ ಸರ್ ಇಂದು ಎಂತವೂ ತಪ್ಪಿಲ್ಲ ನಾನು ಮೊದಲು ಹೇಳಿದಂಗೆ ಈಗಲೂ ಹೇಳ್ತಾ ಇದ್ದೆ ದೀಕ್ಷಿತ್ ಸರ್ ಇಂದ ಎಂತವೂ ತಪ್ಪಿಲ್ಲ ನಿಂಗ ಹೇಳಿದಂಗೆ ಮಾರ್ಚ್ ಏಳಕ್ಕೆ ದೀಕ್ಷಿತ್ ಸರ್ ಮನೆಗೆ ಬಂದು ಹಚ್ಚಿದವು ಈ ವಿಷಯ ಬಗ್ಗೆ ಮಾತಾಡಿದವು ಅಂಬಗ ನಾನು ಅವರ ಎದುರೆ ಮತ್ತೆ ನಿಂಗಳ ಎದುರೆ ಎನಗೆ ಅಭಿ ಇಷ್ಟಳಿಯೇ ಹೇಳಿದ್ದದು ಬಟ್ ಮತ್ತೆ ನಿಂಗನ ಬೈದು ಎಲ್ಲ ಇದು ಹೇಳಿ ಅಪ್ಪಗ ನಿಂಗಳ ಮೇಲಿಪ್ಪ ಹೆದರಿಕೆಗೆ ಆನು
ಅಕ್ಕು ಸರಿ ಹೇಳಿ ಆನ ಒಪ್ಪಿದ್ದದು ಬಿಟ್ರೆ ನಮ್ಮ ಮನಸ್ಸಲಿ ಅಭಿ ಇತ್ತಿದ್ದವು ಮತ್ತೆ ನಿಂಗೆ ತುಂಬಾ ರೆಸ್ಟ್ರಿಕ್ಷನ್ಸ್ ಹಾಕಲ ಸ್ಟಾರ್ಟ್ ಮಾಡಿದೆ ಶೋಸ್ ಒಪ್ಪೋದು ಬೇಡ ಎಲ್ಲದಕ್ಕೆ ಕರ್ಕೊಂಡು ಹೋಗಪ್ಪದು ಏನಂತ ಒಂತರ ಭಯ ಸ್ಟಾರ್ಟ್ ಆಯ್ತು ಮನೇಲಿ ಇಪ್ಪಲೆ ಅದಕ್ಕೆ ಒಂದು ಡಿಸಿಷನ್ ತಕೊಂಡು ನಾನು ಬಂದೆ ನಿಂಗೆ ಮ್ಯೂಸಿಕ್ೆ ಬಿಡಕು ಹೇಳಲ್ಲ ಸುಮಾರು ಹೇಳಿಚ್ಚಿದ್ದಿ ಅದಕ್ಕೆ ನನಗೆ ಹೆದರಿಕೆಯಾಗಿ ನಾನು ಮನೆ ಬಿಟ್ಟು ಬಂದೆ ಅದು ಬಿಟ್ರೆ ದೀಕ್ಷಿತ್ ಸರ್ ಯಾವುದೇ ತರದ ಒತ್ತಾಯ ಎಂತೋ ಮಾಡಿದ್ದಲೆ ಅಂಡ್ ಮದುವೆಪ್ಪ ದಿನವು ಕೂಡ ದೀಕ್ಷಿತ್ ಸರಿಗೆ ಗೊಂತಿತ್ತಲೆ ಆನ್ ಫೋನ್ ಮಾಡಿ ಈ ಜಾಗಗೆ ಬನ್ನಿ ಹೇಳಿದ್ದಕ್ಕೆ ಅವು ನಾರ್ಮಲ್ ಮೀಟ್ ಅಪ್ಪಂಗೆ ಅವು ಬಂದಿತ್ತಿದ್ದವು
ಮತ್ತೆ ಅಲ್ಲಿ ಮದುವೆ ಇದು ಕಂಡು ಆನ ಅವರ ಹತ್ರ ರಿಕ್ವೆಸ್ಟ್ ಮಾಡಿೊಂಡೆ ಬೇಡಿ ಹೊಂಡದಕ್ಕೆ ಅವು ಬಂದು ಎನಗು ಅಭಿಸರಿಗೂ ಆಶೀರ್ವಾದ ಮಾಡಿದವು ಅದು ಬಿಟ್ರೆ ನರಹರಿ ದೀಕ್ಷಿತ್ ಸರಿಂಗೂ ಹೆಂಗಳ ಮದುವೆ ಆಗುದೆ ಯಾವುದೇ ತರದ ಸಂಬಂಧ ಇಲ್ಲೇ ಅವು ಎಂತವು ತಪ್ಪು ಮಾಡಿದ್ದ ಇಲ್ಲೇ ಫಸ್ಟ್ ಆ ದೀಕ್ಷಿತ್ ಸರ್ನ ಮೇಲಿಪ್ಪ ದ್ವೇಷ ಕೋಪ ಎಲ್ಲ ಬಿಡಿ ಪ್ಲೀಸ್ ಅವರದ್ದು ಯಾವುದೇ ತರ ತಪ್ಪಿಲ್ಲ ಖಂಡಿತ ಆನ್ ಮಾಡಿದ್ದು ತಪ್ಪು ಅದು ನಾನು ಯಾವತ್ತಿದ್ದರೂ ಒಪ್ಪಿತ್ತೆ ನಾನು ನೆಕ್ಸ್ಟ್ ದಿನವೇ ನಿಂಗೆ ಮೆಸೇಜ್ ಕೂಡ ಮಾಡಿದ್ದೆ ಆನ್ ಮಾಡಿದ್ದು ತಪ್ಪು ಅಳಿ ಈಗಳು ಕೂಡ ನಿಂಗೆ ಸಾರಿ ಕೇಳ್ತಪ್ಪ ಅದು ಸಾಧ್ಯವಾದರೆ ಹಂಗ ಕ್ಷಮಿಸಿ ಪ್ಲೀಸ್ ಕ್ಷಮಿಸಿ ಪ್ಲೀಸ್ ಕ್ಷಮಿಸಿ ಸಾರಿ
ನಮ್ಮದೇ ಜಾತಿಯ ಹುಡುಗನನ್ನು ಮದುವೆ ಆಗಿಲ್ಲ, ಅಪ್ಪ ಅಮ್ಮನ ಮಾತನ್ನು ಕೇಳಲಿಲ್ಲ ಅನ್ನೊ ಸಂಕಟ ಪಾಲಕರದ್ದು. ನಾನು ಪ್ರೀತಿಸಿದ ಹುಡುಗನ ಜೊತೆ ಹೆತ್ತವರು ಮದುವೆ ಮಾಡಲಿಲ್ಲ ಅನ್ಮುವ ನೋವು ಈ ಪ್ರೇಮಿಗಳದ್ದು. ಗಾಯಕಿ ಪೃಥ್ವಿ ಭಟ್ ಮದುವೆ ಆಗಿದ್ದಾರೆ, ತನ್ನಿಷ್ಟದ ಹುಡುಗನ ಜೊತೆ. ಯಾರ ಸಂಕಟಕ್ಕೆ ಎಷ್ಟು ತೂಕ ಇದೆಯೋ? ಸಮಾಜ ಒಪ್ಪುವಂತೆ ಬದುಕಿ. ಶುಭಾಶಯಗಳು ( video credit :Mr.D Pictures )