ಪ್ರಶಾಂತ್ ಸಂಬರ್ಗಿ ಪ್ರಕಾರ ಇವರೇ ಬಿಗ್ ಬಾಸ್-09 ವಿನ್ನರ್ ಅಂತೇ ? ಯಾರು ನೋಡಿ
ಹೌದು ಗೆಳೆಯರೇ ಇತ್ತೀಚಿಗಷ್ಟೇ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದ ಪ್ರಶಾಂತ್ ಸಂಬರ್ಗಿ ಅವರು ಮಾಧ್ಯಮದ ಸಂದರ್ಶನ ಒಂದ್ರಲ್ಲಿ ಈ ರೀತಿ ಹೇಳಿಕೆ ಕೊಟ್ಟಿದ್ದಾರೆ . ಅದು ಏನ್ ಎಂದು ನೋಡಣ ಬನ್ನಿ .ಬಿಗ್ ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಸೀಸನ್-09 ಅನುಭವ ಹಂಚಿಕೊಂಡಿದ್ದಾರೆ. ಇಲ್ಲಿ ಇಷ್ಟು ದಿನ ಇದ್ದಿರೋದು ಖುಷಿ ತಂದಿದೆ. ತುಂಬಾ ಚೆನ್ನಾಗಿಯೇ ಎಲ್ಲವೂ ಇತ್ತು ಅನ್ನೋದು ಇವರ ಮಾತು. ಆದರೆ ಇಷ್ಟು ಬೇಗ ಬರ್ತಿನಿ ಅನ್ನೋದು ಮಾತ್ರ ಗೊತ್ತಿರಲಿಲ್ಲ ಅಂತಲೇ ಹೇಳ್ತಾರೆ.ಪ್ರಶಾಂತ್ ಸಂಬರ್ಗಿ ಚೆನ್ನಾಗಿಯೇ ಆಡ್ತಾ ಇದ್ದರು. ಸೇಫ್ ಗೇಮ್ ಆಗಿಯೇ ಆಡ್ತಾ ಇದ್ರು. ತಮ್ಮದೇ ರೀತಿಯಲ್ಲಿಯೇ ತಪ್ಪುಗಳನ್ನ ಎತ್ತಿ ತೋರ್ತಾನೇ ಇದ್ದರು. ಈ ಹಿಂದಿನ ಸೀಸನ್ ನಲ್ಲಿ ಪ್ರಶಾಂತ್ ಹೇಗಿದ್ದರೋ ಹಾಗೇ ಕಾಣಲಿಲ್ಲ ಅನ್ನೋ ಮಾತು ಇತ್ತು. ಅದಕ್ಕೋ ಏನೋ, ಪ್ರಶಾಂತ್ ಸಂಬರ್ಗಿ ಹೊರಗೆ ಬಂದೇ ಬಿಟ್ಟರು.
ಪ್ರಶಾಂತ್ ಸಂಬರ್ಗಿ ಇಷ್ಟು ದಿನ ಬಿಗ್ ಬಾಸ್ ಮನೆಯಲ್ಲಿದ್ದು ಬಂದಿದ್ದಾರೆ. ಇವರಿಗೆ ಅಲ್ಲಿರೋರ ಆಟ ಗೊತ್ತಿದೆ. ಅವರ ಶಕ್ತಿಗಳೂ ತಿಳಿದಿದೆ. ಈ ಹಿನ್ನೆಲೆಯಲ್ಲಿಯೇ ಪ್ರಶಾಂತ್ ಯಾರು ಗೆಲ್ತಾರೆ ಅನ್ನೋದನ್ನ ಹೇಳಿದ್ದಾರೆ . ಅವರ ಪ್ರಕಾರ -ರೂಪೇಶ್ ಶೆಟ್ಟಿ-ವಿನ್ನರ್ ಆಗುತ್ತಾರೆ ಮತ್ತು ರಾಕೇಶ್ ಅಡಿಗ-ರನ್ನರ್ ಅಪ್ ಆಗುತ್ತಾರೆ ಎಂದು ಹೇಳಿದ್ದಾರೆ
ಪ್ರಶಾಂತ್ ಸಂಬರ್ಗಿ ಅವರ ಭವಿಷ್ಯ ವಾಣಿ ನಿಜವಾಗ್ತದೋ ಇಲ್ವೋ ಗೊತ್ತಿಲ್ಲ. ಆದರೆ ಇವರ ಈ ಒಂದು ಭವಿಷ್ಯ ಎಲ್ಲೋ ಒಂದು ಕಡೆ ಸತ್ಯ ಅನಿಸುತ್ತಿದೆ. ರೂಪೇಶ್ ಶೆಟ್ಟಿ ಅದ್ಭುತವಾಗಿಯೇ ಆಟ ಆಡುತ್ತಿದ್ದಾರೆ. ರಾಕೇಶ್ ಅಡಿಗ ಕೂಡ ಒಳ್ಳೆ ಟಕ್ಕರ್ ಕೊಡ್ತಿದ್ದಾರೆ. ನಿಮ್ಮ ಪ್ರಕಾರ ಬಿಗ್ ಬಾಸ್-09 ವಿನ್ನರ್ ಯಾರು ಆಗ ಬೇಕು ಎಂದು ಕಾಮೆಂಟ್ ಮಾಡಿ ತಿಳಿಸಿ ( video credit : namma karunadu )