ಕಡೆಗೂ ದರ್ಶನ ಮೇಲೆ ಶೂ ಎಸೆದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ:ಯಾರದು ನೋಡಿ ?
ಹೌದು ಗೆಳೆಯರೇ ಹೊಸಪೇಟೆಯಲ್ಲಿ ದರ್ಶನ ಮೇಲೆ ಶೂ ಎಸೆದ ಪ್ರಕರಣ ಕನ್ನಡ ಚಿತ್ರರಂಗದಲ್ಲಿ ತುಂಬಾ ದೊಡ್ಡ ಸುದ್ದಿ ಮಾಡಿತ್ತು . ಡಿಸೆಂಬರ್ 18 ರಂದು ಹೊಸಪೇಟೆಯ ವಾಲ್ಮೀಕಿ ವೃತ್ತದಲ್ಲಿ ಕ್ರಾಂತಿ ಸಿನಿಮಾದ ಬೊಂಬೆ ಬೊಂಬೆ ಲಿರಿಕಲ್ ಹಾಡು ಬಿಡುಗಡೆ ಸಮಾರಂಭದಲ್ಲಿ ದರ್ಶನ್ ಮೇಲೆ ಶೂ ಎಸೆದು, ಅವರ ಪೋಸ್ಟರ್ ಬ್ಯಾನರ್ ಹರಿಯಲಾಗಿತ್ತು. ಇದು ದರ್ಶನ ಮತ್ತು ಅಪ್ಪು ಅಭಿಮಾನಿಗಳಲ್ಲಿ ದೊಡ್ಡ ಜಗಳಕ್ಕೆ ಕಾರಣವಾಗಿತ್ತು
ಇದು ಅಪ್ಪು ಅಭಿಮಾನಿಗಳು ಮಾಡಿದ ಕೆಲಸ ಎಂದು ದರ್ಶನ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದರು. ಈ ವಿಚಾರದಲ್ಲಿ ಇಬ್ಬರೂ ಸ್ಟಾರ್ ನಟರ ಅಭಿಮಾನಿಗಳ ನಡುವೆ ಆರೋಪ, ಪ್ರತ್ಯಾರೋಪ, ಟೀಕೆಗಳು ಜೋರಾಗಿ ಈಗಲೂ ನಡೆಯುತ್ತಲೇ ಇದೆ.
ಈ ನಡುವೆ ಆಯೋಜಕರು ನೀಡಿದ ದೂರಿನ ಮೇರೆಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ನಂತರ ಮೂರು ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಈ ತಂಡ ಘಟನೆ ಸಂಬಂಧ ಮೂವರನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದವರಿಗಾಗಿ ಹುಡುಕಾಟ ನಡೆದಿದೆ ಎಂದು ಎಸ್ ಪಿ ಬಿ.ಎಲ್. ಶ್ರೀಹರಿಬಾಬು ತಿಳಿಸಿದ್ದಾರೆ.
ಈ ಮೂವರು ಯಾರು ಅವರ ಹಿನ್ನಲೆ ಏನು ಎಂದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ . ವಿಚಾರಣೆ ಮುಗಿದ ಬಳಿಕವಷ್ಟೇ ಇವರು ಅಪ್ಪು ಅಭಿಮಾನಿಗಳ ಅಲ್ಲವಾ ಎಂದು ಗೊತ್ತಾಗುತ್ತೆ .