ನಟ ದರ್ಶನ್ ಮೇಲೆ ಚಪ್ಪಲಿ ಎಸೆದು ಸಿಕ್ಕಿ ಹಾಕಿ ಕೊಂಡವರು ಯಾರು ಎಂದು ನೋಡಿ ?
ಹೌದು ಗೆಳೆಯರೇ ಇತ್ತೀಚಿಗಷ್ಟೇ ದರ್ಶನ್ ಅವರು ಕ್ರಾಂತಿ ಚಿತ್ರದ ಎರಡನೇ ಹಾಡು ಬೊಂಬೆ ಬೊಂಬೆ ಹೊಸಪೇಟೆ ಯಲ್ಲಿ ರಿಲೀಸ್ ಮಾಡಿದ್ದರು . ಆ ವೇಳೆ ಒಂದು ಅಹಿತಕರವಾದ ಘಟನೆ ನಡೆದಿದೆ . ಸ್ಟೇಜ್ ಮೇಲೆ ದರ್ಶನ ಅವರು ಬಂದಿದ್ದಾಗ ಅವರ ಮೇಲೆ ಯಾರೋ ಚಪ್ಪಲಿ ಎಸೆದಿದ್ದರು . ಈಗ ಆ ವ್ಯಕಿ ಯಾರೆಂದು ಗೊತ್ತಾಗಿದೆ . ಅವರು ಒಬ್ಬ ಮಹಿಳೆ ಎಂದು ತಿಳಿದು ಬಂದಿದೆ . ಅವಳು ಯಾಕೆ ಹಾಗೆ ಮಾಡಿದ್ದಾಳೆ ಎಂದು ಇನ್ನು ಗೊತ್ತಾಗಿಲ್ಲ .
ನೆನ್ನೆ ಸಂಜೆ 7:00ಗೆ ಹೊಸಪೇಟೆಯ ಸರ್ಕಲ್ ಬಳಿಯಲ್ಲಿ ದರ್ಶನ್ ಅಭಿನಯದ ಕ್ರಾಂತಿ ಸಿನಿಮಾದ ಎರಡನೇ ಹಾಡು ಬೊಂಬೆ ಬೊಂಬೆ ಎಂಬ ರೋಮ್ಯಾಂಟಿಕ್ ಹಾಡನ್ನು ಅಭಿಮಾನಿಗಳ ಕೈನಲ್ಲಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿರುತ್ತಾರೆ. ಅದರಂತೆ ಅಭಿಮಾನಿಯೊಬ್ಬರ ಕೈನಿಂದ ಈ ಹಾಡನ್ನು ಬಿಡುಗಡೆ ಕೂಡ ಮಾಡಿಸುತ್ತಾರೆ. ಆದರೆ, ಜನ ಸಮೋಹದಲ್ಲಿ ಇದ್ದಂತಹ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಚಪ್ಪಲಿಯನ್ನು ಎಸೆದು ವಿಕೃತಿಯನ್ನು ಮೆರೆದಿದ್ದಾರೆ.
ನಿಜಕ್ಕೂ ಇದು ಚಿತ್ರರಂಗಕ್ಕೆ ಒಂದು ಕಪ್ಪು ಚುಕ್ಕೆ ಅಂತಾನೆ ಹೇಳಬಹುದು, ಮೊದಲಿನಿಂದಲೂ ಎಲ್ಲಾ ಸ್ಟಾರ್ ವಾರ್ ಎಂಬುದು ಇತ್ತು ಆದರೆ ನಟರು ಈ ಸ್ಟಾರ್ ವಾರರನ್ನು ನಿಲ್ಲಿಸೋಣ ಅಂತ ಹೇಳಿದ್ದರು. ಆದರೂ ಕೂಡ ಈ ಸ್ಟಾರ್ ವಾರ್ ಅನ್ನುವುದಕ್ಕೆ ಕೊನೆಯೇ ಇಲ್ಲ ಎಂಬಂತಾಗಿದೆ ಮಹಿಳೆಯೊಬ್ಬಳು ದರ್ಶನ್ ಅವರ ಮೇಲೆ ಏಕಾಏಕಿ ಚಪ್ಪಲಿಯನ್ನು ಎಸೆದಿದ್ದಾಳೆ. ಚಪ್ಪಲಿ ಎಸೆದಿದ್ದರೂ ಕೂಡ ದರ್ಶನ್ “ಹೋಗಲಿ ಬಿಡು ಚಿನ್ನ ಇಂತಹ ಅವಮಾನಗಳನ್ನು ನಾನು ಸಾಕಷ್ಟು ಕಂಡಿದ್ದೇನೆ ಎಂದು ಕ್ಷಮಿಸಿ ದೊಡ್ಡವರಾಗಿದ್ದಾರೆ”.
ದಯವಿಟ್ಟು ಯಾರು ಸಹ ಇಂತಹ ಕೆಲಸಕ್ಕೆ ಮುಂದಾಗ ಬೇಡಿ . ಕನ್ನಡ ಚಿತ್ರರಂಗ ಒಂದು ಕುಟುಂಬವಿದ್ದಂತೆ . ಎಲ್ಲ ನಟರು ನಮ್ಮ ಅಣ್ಣ ತಮ್ಮಂದಿರಂತೆ ಅಲ್ಲವೇ . ಯಾರೋ ಒಬ್ಬರು ಈ ರೀತಿ ಮಾಡಿದ ಕೆಲಸಕೆ ಯಾವ ನಟರ ಅಭಿಮಾನಿಗಳು ಕಿತ್ತಾಡಿ ಕೊಳ್ಳುವುದು ಬೇಡ . ಎಲ್ಲರೂ ಶಾಂತ ರೀತಿಯಿಂದ ವರ್ತಿಸಿ ಅಂತ ಕೇಳಿ ಕೊಳ್ಳೋಣ . ಅಲ್ಲವಾ . ಇದಕ್ಕೆ ನಿಮ್ಮ ಅಭಿಪ್ರಾಯ ತಿಳಿಸಿ ( video credit : third eye )