ತನ್ನ ಹುಟ್ಟಹಬ್ಬದ ಪ್ರಯುಕ್ತ ಬಾತ್ರೂಮ್ ವಿಡಿಯೋ ಶೇರ್ ಮಾಡಿದ ನಿವೇದಿತಾ ಗೌಡ : ವಿಡಿಯೋ ಮಾಡಿದ್ದೂ ಚಂದನ್ ಶೆಟ್ಟಿ ಅಂತೇ ?
ಬಿಗ್ ಬಾಸ್ ಮಾಜಿ ಸ್ಪರ್ಧಿ ನಟಿ ನಿವೇದಿತಾ ಗೌಡ ಅವರು ಹುಟ್ಟುಹಬ್ಬದಂದು ಬಾತಿಂಗ್ ವಿಡಿಯೋ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ ಈ ವಿಡಿಯೋವನ್ನು ಮಾಡಿದ್ದು ಅವರ ಮಾಜಿ ಗಂಡ ಚಂದನ್ ಶೆಟ್ಟಿ. ಡಿವೋರ್ಸ್ ನಂತರವೂ ಇಬ್ಬರ ನಡುವಿನ ಏನು ನಡೆಯುತ್ತಿದೆ ಎಂಬುದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
ಚಂದನವನದ ಸ್ಟಾರ್ ಹಾಗೂ ಕ್ಯೂಟ್ ಜೋಡಿಗಳಲ್ಲಿ ಒಂದಾಗಿದ್ದ ನಟ ಹಾಗೂ ರ್ಯಾಪರ್ ಚಂದನ್ ಶೆಟ್ಟಿ ಹಾಗೂ ಬಾರ್ಬಿಡಾಲ್ ಖ್ಯಾತಿಯ ನಟಿ ನಿವೇದಿತಾ ಗೌಡ ಅವರ ಜೋಡಿಯೂ ಒಂದಾಗಿತ್ತು. ಆದರೆ, ಅವರಿಬ್ಬರಿಗೂ ಚಿಕ್ಕ ವಯಸ್ಸಾಗಿದ್ದರಿಂದ ಸಮಾಜ ಮೆಚ್ಚಿಕೊಳ್ಳುವಂತೆ ಜೀವನ ಮಾಡಲಾಗದೇ ವೈಯಕ್ತಿಕ ಹಿತಾಸಕ್ತಿಗಳಿಂದಾಗಿ ಪರಸ್ಪರ ಒಪ್ಪಿಕೊಂಡು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಡಿವೋರ್ಸ್ ಕೊಟ್ಟು ದೂರವಾಗಿದ್ದಾರೆ. ಆದರೆ, ತಾವು ಡಿವೋರ್ಸ್ ನೀಡಿ ದೂರವಾಗಿದ್ದರೂ, ಒಟ್ಟಿಗೆ ಸಿನಿಮಾ ಮಾಡುವುದು, ಒಟ್ಟಿಗೆ ಓಡಾಡುವುದನ್ನು ಕಂಡು ನೀವೇಕೆ ಜೊತೆ, ಜೊತೆಗೆ ಕಾಣಿಸಿಕೊಂಡಿದ್ದೀರಿ ಎಂದು ಕೇಳಿದ್ದಕ್ಕೆ ನಾವಿಬ್ಬರೂ ಈಗ ಗಂಡ-ಹೆಂಡತಿ ಅಲ್ಲ, ಆದ್ರೆ ನಾವಿಬ್ಬರೂ ಒಳ್ಳೆಯ ಸ್ನೇಹಿತರಾಗಿದ್ದೇವೆ ಎಂದು ಹೇಳಿಕೊಂಡಿದ್ದಾರೆ. ಇದರ ಬೆನ್ನಲ್ಲಿಯೇ ಮಾಜಿ ಗಂಡ ಚಂದನ್ ಶೆಟ್ಟಿ ಮಾಜಿ ಹೆಂಡತಿಯ ಸ್ನಾನದ ವಿಡಿಯೋ ಮಾಡಿದ್ದಾನೆ.
ಈ ವಿಡಿಯೋವನ್ನು ನಟಿ ನಿವೇದಿತಾ ಗೌಡ ತಮ್ಮ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ರೀಲ್ಸ್ ಆಗಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋಗೆ ಎಲ್ಲಾ ಜನ್ಮದಿನದ ಶುಭಾಶಯಗಳಿಗೆ ತುಂಬಾ ಧನ್ಯವಾದಗಳು ಇದು ಅತ್ಯುತ್ತಮ ಜನ್ಮದಿನವಾಗಿತ್ತು ಎಲ್ಲಾ ಸಿಹಿ ಸಂದೇಶಗಳಿಗಾಗಿ ಒಂದು ಟನ್ ಧನ್ಯವಾದಗಳು... ತುಂಬಾ ಪ್ರೀತಿಯನ್ನು ಸ್ವೀಕರಿಸಲು ನಾನು ತುಂಬಾ ಸಂತಸಗೊಂಡಿದ್ದೇನೆ' ಎಂದು ಟ್ಯಾಗ್‌ಲೈನ್ ಬರೆದುಕೊಂಡಿದ್ದಾರೆ. ಆದರೆ, ಈ ವಿಡಿಯೋ ಕ್ರೆಡಿಟ್ ಅನ್ನು ಸ್ವತಃ ತಮ್ಮ ಮಾಜಿ ಗಂಡ ಚಂದನ್ ಶೆಟ್ಟಿ ಅವರಿಗೆ ಕೊಟ್ಟಿದ್ದಾರೆ. ಅಂದರೆ, ನಿವೇದಿತಾ ಗೌಡ ಬಾತಿಂಗ್ ವಿಡಿಯೋ ಮಾಡಿದ್ದು, ಸ್ವತಃ ಚಂದನ್ ಶೆಟ್ಟಿ ಇಲ್ಲಿ ಹೇಳಿಕೊಂಡಿದ್ದಾರೆ. ಮದುವೆ ಮಾಡಿಕೊಂಡು ಜೊತೆಗಿರಲಾಗದೇ ಡಿವೋರ್ಸ್ ಕೊಟ್ಟ ಜೋಡಿ ಅದೇಗೆ ತೀರಾ ಖಾಸಗಿ ಎನ್ನುವ ವಿಡಿಯೋ ಮಾಡುವುದಕ್ಕೆ ಒಪ್ಪಿಕೊಂಡಿದ್ದಾರೆ ಎಂದು ಅಭಿಮಾನಿಗಳು ಆಶ್ಚರ್ಯಗೊಂಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ ಲಿಂಕ್ : https://www.facebook.com/reel/480669915000430