ರಿಯಾಲಿಟಿ ಷೋನಲ್ಲಿ ಕನ್ನಡದ ಖ್ಯಾತ ನಟಿಗೆ ಇಷ್ಟ ಇಲ್ಲದಿದ್ದರೂ ಏನು ಮಾಡಿದ ನೋಡಿ ; ವಿಡಿಯೋ ವೈರಲ್ ?

ರಿಯಾಲಿಟಿ ಷೋನಲ್ಲಿ ಕನ್ನಡದ ಖ್ಯಾತ ನಟಿಗೆ ಇಷ್ಟ ಇಲ್ಲದಿದ್ದರೂ ಏನು ಮಾಡಿದ ನೋಡಿ ;  ವಿಡಿಯೋ ವೈರಲ್ ?

 ಕನ್ನಡ ನಟಿ ನಿಶಾ ರವಿಕೃಷ್ಣನ್‌. ‘ಗಟ್ಟಿಮೇಳ’ ಸೀರಿಯಲ್ ಮುಖಾಂತರ ಕನ್ನಡಿಗರ ಮನೆ ಮಾತಾದವರು ನಿಶಾ ರವಿಕೃಷ್ಣನ್‌. ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಅಣ್ಣಯ್ಯ’ ಸೀರಿಯಲ್‌ನಲ್ಲಿ ನಿಶಾ ರವಿಕೃಷ್ಣನ್ ಅಭಿನಯಿಸುತ್ತಿದ್ದಾರೆ. ಅಷ್ಟೇ ಅಲ್ಲ.. ತೆಲುಗು ಕಿರುತೆರೆಯಲ್ಲೂ ನಿಶಾ ರವಿಕೃಷ್ಣನ್‌ ಹೆಸರು ಮಾಡುತ್ತಿದ್ದಾರೆ. ಜೀ ತೆಲುಗಿನಲ್ಲಿ ಪ್ರಸಾರವಾಗುತ್ತಿರುವ ‘ಅಮ್ಮಾಯಿಗಾರು’ ಸೀರಿಯಲ್‌ನಲ್ಲಿ ನಿಶಾ ರವಿಕೃಷ್ಣನ್‌ ನಟಿಸುತ್ತಿದ್ದಾರೆ. ಇವರಿಗೆ ಜೋಡಿಯಾಗಿ ನಟ ಯಶವಂತ್ ಗೌಡ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಕನ್ನಡದ ‘ಕನ್ಯಾಕುಮಾರಿ’ ಸೀರಿಯಲ್‌ನಲ್ಲಿ ಹೀರೋ ಆಗಿ ಯಶವಂತ್ ಗೌಡ ಅಭಿನಯಿಸಿದ್ದರು.


ಸೀರಿಯಲ್‌ಗಳಲ್ಲಿ ಪಾತ್ರವಾಗಿ ಕಲಾವಿದರು ಅಭಿನಯಿಸುತ್ತಾರೆ. ಕೆಲವು ಇಂಟಿಮೇಟ್‌ ಸೀನ್‌ಗಳನ್ನು ಚಿತ್ರಿಸುವ ಮುನ್ನ ಕಲಾವಿದರ ಒಪ್ಪಿಗೆ ಪಡೆಯಲಾಗುತ್ತದೆ. ‘ಕಿಸ್ಸಿಂಗ್ ಸೀನ್ಸ್ ಮಾಡಲ್ಲ’ ಅಂತ ಎಷ್ಟೋ ನಟಿಯರು ಸಿನಿಮಾಗಳನ್ನ ರಿಜೆಕ್ಟ್ ಮಾಡಿದ ಉದಾಹರಣೆಗಳಿವೆ. ಅಂಥದ್ರಲ್ಲಿ.. ರಿಯಾಲಿಟಿ ಶೋನಲ್ಲಿ ಟಾಸ್ಕ್‌ ಹೆಸರಿನಲ್ಲಿ ನಿಶಾ ರವಿಕೃಷ್ಣನ್‌ ಮುಖದ ತುಂಬಾ ನಟನಿಂದ ಮುತ್ತುಕೊಡಿಸಲಾಗಿದೆ. ಇದರಿಂದ ನಿಶಾ ರವಿಕೃಷ್ಣನ್‌ ಮುಜುಗರಕ್ಕೀಡಾಗಿರೋದು ಅವರ ಫೇಸ್ ಎಕ್ಸ್‌ಪ್ರೆಶನ್‌ನಲ್ಲೇ ಸ್ಪಷ್ಟವಾಗಿ ಕಾಣಿಸಿದೆ.

ಜೀ ತೆಲುಗು ವಾಹಿನಿಯಲ್ಲಿ ಸೂಪರ್ ಸೀರಿಯಲ್‌ ಚಾಂಪಿಯನ್‌ಶಿಪ್‌ ನಡೆಯುತ್ತಿದೆ. ಇದರಲ್ಲಿ ‘ಅಮ್ಮಾಯಿಗಾರು’ ಸೀರಿಯಲ್‌ನಿಂದ ಹೀರೋ ಯಶವಂತ್ ಗೌಡ ಹಾಗೂ ನಾಯಕಿ ನಿಶಾ ರವಿಕೃಷ್ಣನ್‌ ಭಾಗವಹಿಸಿದ್ದರು. ಇದೇ ಶೋನಲ್ಲಿ ನಿಶಾ ರವಿಕೃಷ್ಣನ್‌ಗೆ ಮುಜುಗರ, ಅವಮಾನಕರ ಪ್ರಸಂಗ ಜರುಗಿದೆ
ಇದೇ ರಿಯಾಲಿಟಿ ಶೋನಲ್ಲಿ ಫನ್ ಟಾಸ್ಕ್‌ ಹೆಸರಿನಲ್ಲಿ ಯಶವಂತ್‌ ಗೌಡ ತುಟಿಗೆ ಲಿಪ್‌ಸ್ಟಿಕ್‌ ಬಳಿಯಲಾಯಿತು. ತಮ್ಮ ನಾಯಕಿ ನಿಶಾ ರವಿಕೃಷ್ಣನ್‌ ಮುಖದ ಮೇಲೆ ಯಶವಂತ್ ಗೌಡ ಆ ಲಿಪ್‌ಸ್ಟಿಕ್‌ ಮಾರ್ಕ್‌ ಇಡಬೇಕಿತ್ತು. ನಿಶಾ ರವಿಕೃಷ್ಣನ್‌ ಹಣೆಗೆ ಯಶವಂತ್‌ ಗೌಡ ಮುತ್ತಿಟ್ಟರು. ಅಲ್ಲಿಗೆ ಸಾಕು ಎಂಬಂತೆ ಯಶವಂತ್ ಗೌಡಗೆ ನಿಶಾ ರವಿಕೃಷ್ಣನ್ ತಲೆ ಅಲ್ಲಾಡಿಸಿ ಸನ್ನೆ ಮಾಡಿದರು. ಆದರೆ, ಶೋ ಆಂಕರ್‌ಗಳು ಕೇಳಲೇ ಇಲ್ಲ. ಮತ್ತೊಂದು ಮುತ್ತಿಡಲು ನಿಶಾ ರವಿಕೃಷ್ಣನ್ ಅವರ ಕತ್ತು ಹಿಡಿದರು ಯಶವಂತ್‌ ಗೌಡ. ಆಗ ಅಕ್ಷರಶಃ ನಿಶಾ ರವಿಕೃಷ್ಣನ್‌ ಗಾಬರಿಬಿದ್ದರು.