ಅಮ್ಮನ ಅಗಲಿಕೆಯಿಂದ ಹೆದರಿ ಶೌರ್ಯ ಅಪ್ಪನನ್ನು ಬಿಟ್ಟು ಇರುತ್ತಿಲ್ಲವಂತೆ..! ರಾಘು ಅವರ ಈಗಿನ ಪರಿಸ್ಥಿತಿ ಹಂಚಿಕೊಂಡ ಶ್ರೀಮುರಳಿ
ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಕರಾಳದ ದಿನ ಅಂತ ಅದು ಆದರೆ ಇತ್ತೀಚಿಗಷ್ಟೇ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಸಾವನ್ನಪ್ಪಿದ ದಿನ ಎಂದು ಹೇಳಬಹುದು. ಹೌದು ತುಂಬಾನೇ ಮೃದು ಸ್ವಭಾವದ ವ್ಯಕ್ತಿ ವಿಜಯ ರಾಘವೇಂದ್ರ ಅವರು, ಎಲ್ಲಿಯೂ ಕೂಡ ಹೆಚ್ಚು ಸೊಕ್ಕಿನ ಮನುಷ್ಯ ಎಂಬಂತೆ ನಿಜ ಕಾಣಿಸಿದವರೆ ಅಲ್ಲ. ಎಲ್ಲರೊಟ್ಟಿಗೆ ಪ್ರೀತಿಯಿಂದಲೆ, ಹಾಗೆ ಸ್ನೇಹದಿಂದ ಬೆರೆತುಕೊಳ್ಳುವಂತಹ ಪ್ರೀತಿಯ ನಟ ವಿಜಯ್ ಆಗಿದ್ದರು. ಪ್ರೀತಿಯಿಂದ ಅವರನ್ನು ನಾವು ಚಿನ್ನಾರಿ ಮುತ್ತ ಎಂದು ಕರೆಯುತ್ತಿದ್ದೇವು. ಅಂತಹ ಚಿನ್ನಾರಿ ಮುತ್ತನ ಬಾಳಲ್ಲಿ ಇದೀಗ ಕತ್ತಲು ಆವರಿಸಿದೆ.
ಹೌದು ಅವರ ಪ್ರೀತಿಯ ಮಡದಿ ಸ್ಪಂದನರನ್ನು ದೇವರು ಬಾರದ ಊರಿಗೆ ಕರೆದುಕೊಂಡು ಹೋಗಿದ್ದಾನೆ. ರಾಘು ಅವರು ಅವರ ಪತ್ನಿಯನ್ನು ಹೆಚ್ಚು ಪ್ರೀತಿ ಮಾಡುತ್ತಿದ್ರು. ವಿಜಯ ರಾಘವೇಂದ್ರ ಅವರ ಹೆಂಡತಿ ಅಗಲಿಕೆಯ ನೋವಿನಿಂದ ಇನ್ನೂ ಹೊರಬಂದಿಲ್ಲ. ಅದನ್ನು ಅವರಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ಅದರೊಟ್ಟಿಗೆ ಅವರ ಪ್ರೀತಿಯ ತಮ್ಮ ಶ್ರೀಮುರುಳಿಯವರು ಅಣ್ಣನ ಈಗಿನ ಆರೋಗ್ಯದ ಪರಿಸ್ಥಿತಿ ಬಗ್ಗೆ ಕೆಲವೊಂದಿಷ್ಟು ವಿಚಾರಗಳ ಹಂಚಿಕೊಂಡಿದ್ದಾರೆ. ಹೌದು ನಟ ಶ್ರೀಮುರಳಿ ಅವರು ಹೇಳಿದ ಹಾಗೆ 'ಅತ್ತಿಗೆಯ ಅಗಲಿಕೆಯಿಂದ ಅಣ್ಣನ ಮನಸ್ಸಿಗೆ ಘಾಸಿಯಾಗಿದೆ..ಆತನಿಗೆ ಸಮಾಧಾನ ಹೇಳುವ ಧೈರ್ಯ ಇಲ್ಲಿ ಯಾರಿಗೂ ಇಲ್ಲ,
ಆತನ ನೋವು ಆತನಿಗಷ್ಟೇ ಗೊತ್ತು, ಅವನು ನೋವಿನಲ್ಲಿ ಇದ್ದಾನೆ, ನಾವು ಇದೀಗ ಆಗಿದ್ದು ಆಗಿ ಹೋಯಿತು ಇದರಿಂದ ಹೊರಗಡೆ ಬಾ ಎಂದು ಸಮಾಧಾನ ಮಾತು ಹೇಳಿದರು ಅದು ಆಗದು, ಹಾಗಾಗಿ ಅಣ್ಣನೇ ಇದರಿಂದ ಹೊರ ಬರಬೇಕು. ಅವನಿಗೆ ಸ್ವಲ್ಪ ಸಮಯ ಬೇಕಾಗಿದೆ ಅವನೇ ಇದರಿಂದ ಹೊರ ಬರುತ್ತಾನೆ, ಅಲ್ಲಿಯವರೆಗೂ ಕಾಯೋಣ ಎಂದು ಶ್ರೀಮುರುಳಿಯವರು ಅಣ್ಣನ ಆರೋಗ್ಯ ಪರಿಸ್ಥಿತಿ ಬಗ್ಗೆ ಹೇಳಿಕೊಂಡಿದ್ದಾರೆ ಎಂದು ಈ ವಿಡಿಯೋದಲ್ಲಿ ಹೇಳಲಾಗಿದೆ.
ಜೊತೆಗೆ ಶೌರ್ಯ ಕೂಡ ಅತ್ತಿಗೆಯ ಸಾವಿನಿಂದ ತುಂಬಾನೇ ನೋವಿಗೆ ಒಳಗಾಗಿದ್ದಾನೆ. ಜೊತೆಗೆ ಅಷ್ಟೇ ಹೆದರಿದ್ದಾನೆ ಕೂಡ, ಹಾಗಾಗಿ ರಾಘಣ್ಣನ ಬಿಟ್ಟು ಅವನು ಎಲ್ಲಿಯೂ ಹೋಗುತ್ತಿಲ್ಲ' ಎಂದು ನೋವಿನಲ್ಲಿಯೇ ತಮ್ಮ ಶ್ರೀಮುರಳಿ ಅವರು ಇರುವ ವಿಚಾರವನ್ನು ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನೂ ಏನೇನೆಲ್ಲ ಶ್ರೀಮುರಳಿ ಅವರು ಸ್ಪಂದನ ತೀರಿದ ಮೇಲೆ ಅಣ್ಣನ ಈಗಿನ ಪರಿಸ್ಥಿತಿ ಬಗ್ಗೆ ಹೇಳಿದರು ಗೊತ್ತಾ..? ಇಲ್ಲಿದೆ ನೋಡಿ ವಿಡಿಯೋ. ಹಾಗೆ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಆ ದೇವರಲ್ಲಿ ಪ್ರಾರ್ಥಿಸಿ..ಇವರ ಕುಟುಂಬಕ್ಕೆ ಅವರ ಅಗಲಿಕೆಯನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ನಾವು ನೀವೂ ಬೇಡಿಕೊಳ್ಳೋಣ ಧನ್ಯವಾದಗಳು... ( video credit : kannada taja suddi )