ಅತ್ತಿಗೆಯ ಅಗಲಿಕೆ ನೋವಲ್ಲಿರುವ ಶ್ರೀಮುರಳಿ ಕಾಲಿಗೆ ಇದೆನಾಯ್ತು..! ಕುಂಟುತ್ತಾ ಬಂದ ಶ್ರೀಮುರಳಿ ವಿಡಿಯೋ
ಸ್ಪಂದನ ಅವರ ಪುಣ್ಯ ತಿಥಿ ಇಂದು ಅವರ ತಂದೆ ಮನೆಯಾದ ಮಲ್ಲೇಶ್ವರಂ ನಲ್ಲಿ ನಡೆಯುತ್ತಿದೆ. ಹೌದು ಸ್ಪಂದನ ಅವರು ನಮ್ಮನ್ನೆಲ್ಲ ಅಗಲಿ ಈಗ ಬಾರದ ದೂರದ ಊರಿಗೆ ಹೋಗಿದ್ದಾರೆ. ಸ್ಪಂದನ ಅವರ ಅಕಾಲಿಕ ಮರಣ ನಿಜಕ್ಕೂ ತುಂಬಾನೇ ದುಃಖದ ವಿಷಯ. ಇಷ್ಟು ಸಣ್ಣ ವಯಸಿಗೆ ಹೀಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ನಿಜಕ್ಕೂ ಇದನ್ನ ಯಾರಿಗೂ ಕೂಡ ನಂಬಲಾಗುತ್ತಿಲ್ಲ. ನಟ ವಿಜಯ ರಾಘವೇಂದ್ರ ಅವರು ಎಂದಿಗೂ ಕೂಡ ಅವರ ಕನಸು ಮನಸ್ಸಿನಲ್ಲಿಯೂ ಅಂದುಕೊಂಡಿರಲಿಲ್ಲ, ನಮ್ಮ ಜೀವನ ಈ ರೀತಿ ಆಗುತ್ತದೆಂದು, ಅರ್ಧದಲ್ಲಿ ನಾನು ಇಷ್ಟಪಟ್ಟು ಮದುವೆಯಾಗಿರುವ ನನ್ನ ಮಡಿದಿ ಸ್ಪಂದನ ಬಿಟ್ಟು ದೈಹಿಕವಾಗಿ ದೂರವಾಗುತ್ತಾರೆ ಎಂದು ಎಂದಿಗೂ ಅಂದುಕೊಂಡಿರಲಿಲ್ಲ. ಆದ್ರೆ ವಿಧಿ ಏನು ಮಾಡಲು ಆಗುವುದಿಲ್ಲ.
ಹೌದು ಇದೀಗ ಸ್ಪಂದನ ಅವರ ಅಕಾಲಿಕ ಮರಣದಿಂದ ವಿಜಯ ಅವರು ತುಂಬಾನೇ ನೊಂದುಕೊಂಡಿದ್ದಾರೆ. ಕಣ್ಣೀರು ಹಾಕುತ್ತಾ ಅವರ ನೆನಪಿನಲ್ಲಿಯೇ ಜೀವನ ಸಾಗಿಸುವಂಥಾಗಿದೆ.. ಅವರ ಮಗನ ಮುಖ ನೋಡಿಕೊಂಡು, ನಾನು ನೋವಿಗೆ ಒಳಗಾದರೆ ನನ್ನ ಮಗನು ಕಣ್ಣೀರು ಹಾಕುತ್ತಾನೆ, ನೊಂದುಕೊಳ್ಳುತ್ತಾನೆ ಎಂದು ವಿಜಯ ರಾಘವೇಂದ್ರ ಅವ್ರು ಎಲ್ಲಾ ನೋವನ್ನು ತಮ್ಮ ಒಳಗೆ ಇಟ್ಟುಕೊಂಡು ಮಗನೊಡೆಗೆ ಜೀವನ ನಡೆಸುತ್ತಿದ್ದಾರೆ..ಹೌದು ಇಂದು ಕೋದಂಡರಾಮ ಯಂಗ್ಸ್ಟರ್ ಕಬಡ್ಡಿ ಸ್ಟೇಡಿಯಂನಲ್ಲಿ ಮಡದಿ ಸ್ಪಂದನ ಅವರ ಉತ್ತರ ಕ್ರಿಯೆಯನ್ನು ಕುಟುಂಬಸ್ಥರು ಹಮ್ಮಿಕೊಂಡಿದ್ದಾರೆ.. ಎಲ್ಲರಿಗೂ ಕೂಡ ಆಹ್ವಾನ ನೀಡಿರುವ ವಿಜಯ ರಾಘವೇಂದ್ರ ಅವರ ಕುಟುಂಬ ಇದೀಗ ಅವರ ಪುಣ್ಯತಿಥಿ ಕಾರ್ಯ ಕೈಗೊಂಡಿದೆ.
ಸ್ಪಂದನ ಅವರ ಪುಣ್ಯತಿಥಿ ಕಾರ್ಯಕ್ಕೆ ಎಲ್ಲರೂ ಕೂಡ ಆಗಮಿಸಿದ್ದಾರೆ. ಸ್ಪಂದನ ಅವರು ಇಲ್ಲವೆಂದು ಹೇಳಿದ ಬಳಿಕ ವಿಜಯ ರಾಘವೇಂದ್ರ ಅವರ ತಮ್ಮ ಶ್ರೀಮುರಳಿ ಪ್ರತಿಯೊಂದು ಕಾರ್ಯದಲ್ಲು ಅವರ ಜೊತೆಗೆ ನಿಂತು ಸಾಂತ್ವನ ಮಾಡುತ್ತಾ ಕಣ್ಣೀರು ಒರೆಸಿದ್ದರು..ಆದರೆ ಇದೀಗ ಅತ್ತಿಗೆಯ ಪುಣ್ಯ ತಿಥಿಗೆ ಕುಂಟುತ್ತಾ ಬಂದಿದ್ದಾರೆ ಶ್ರೀಮುರಳಿ, ಕಾರಣ ಏನೆಂದು ತಿಳಿದುಬಂದಿಲ್ಲ..ಆದರೆ ಈ ವಿಡಿಯೋ ನೋಡಿದ ತಕ್ಷಣ ಶ್ರೀಮುರುಳಿಯವರಿಗೆ ಅದೇನೋ ಆಗಿದೆ, ಅವರ ಕಾಲು ಪೆಟ್ಟಾಗಿದೆ ಎಂಬಂತೆ ಕಾಣಿಸಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ, ಹಾಗೆ ನೀವು ಸ್ಪಂದನರವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ದೇವರಲ್ಲಿ ಪ್ರಾರ್ಥಿಸಿ ಧನ್ಯವಾದಗಳು .. ( video credit : SStv )