ಗಂಭೀರ ಕಾಯಿಲೆ ಇದೆ ಎಂಬುದು ಗೊತ್ತಿದ್ದರೂ ವಿದ್ಯಾ ಅವರನ್ನ ಮದುವೆಯಾದ ಶ್ರೀಮುರಳಿ..! ನಿಜಕ್ಕೂ ಗ್ರೇಟ್
ಕನ್ನಡ ಚಿತ್ರರಂಗದ ಭರವಸೆಯ ನಟ. ಈಗಾಗಲೇ ಕನ್ನಡ ಸಿನಿಮಾರಂಗದಲ್ಲಿ ಅವರದ್ದೇ ಆದ ಚಾಪು ಮೂಡಿಸಿರುವ ನಟ ಶ್ರೀಮುರಳಿ ಅವರು ಎಲ್ಲರಿಗೂ ಗೊತ್ತಿರುವ ನಟ. ಹೌದು ಇವರು ಕೂಡ ಚಿನ್ನೆ ಗೌಡ ಅವರ ಕಿರಿಯ ಮಗ. ಇಂದಿನ ಈ ಲೇಖನದಲ್ಲಿ ನಾವು ನಟ ಶ್ರೀಮುರಳಿ ಅವರ ದಾಂಪತ್ಯ ಜೀವನದ ಬಗ್ಗೆ ಹೇಳ ಹೊರಟಿದ್ದೇವೆ. ಹೌದು ನಟ ಶ್ರೀಮುರಳಿ ಅವರು ವಿದ್ಯಾ ಅವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಅದು ಎಲ್ಲರಿಗೂ ಗೊತ್ತಿರುವ ವಿಷಯವೇ ಸರಿ. ಸುಮಾರು ಹತ್ತು ವರ್ಷಗಳ ಕಾಲ ವಿದ್ಯಾ ಅವರನ್ನ ಶ್ರೀ ಮುರುಳಿ ಪ್ರೀತಿ ಮಾಡಿದ್ದರು. ಮದುವೆ ಹಂತಕ್ಕೆ ಬಂದಾಗ ಚಿನ್ನೆ ಗೌಡರು ಮತ್ತು ವಿದ್ಯಾ ಅವರ ತಂದೆ ರಮೇಶ್ ಅವರು ಕೂಡ ಹೆಚ್ಚು ಯೋಚನೆ ಮಾಡಲಿಲ್ಲ. ಚಿನ್ನೆ ಗೌಡರು ಶ್ರೀಮುರುಳಿ ಮದುವೆ ವಿಷಯ ಪ್ರಸ್ತಾಪ ಮಾಡಿದಾಗ, ನನ್ನ ಮಗನು ಇರುವುದು ಸಿನಿಮಾ ರಂಗದಲ್ಲಿ, ಅವನಿಗೆ ಯಾವುದೇ ಫಿಕ್ಸೆಡ್ ಇನ್ಕಮ್ ಎಂಬುದು ಇರುವುದಿಲ್ಲ. ಸಿನಿಮಾದಲ್ಲಿ ಆತ ಇಲ್ಲಿಯವರೆಗೆ ಸ್ವಲ್ಪವೇ ಯಶಸ್ಸು ಕಂಡಿದ್ದಾನೆ ಒಮ್ಮೆ ಯೋಚನೆ ಮಾಡಿ ಎಂದು ವಿದ್ಯಾ ಅವರ ತಂದೆ ರಮೇಶ್ ಅವರಿಗೆ ಹೇಳಿದ್ದರಂತೆ.
ಆದರೆ ರಮೇಶ್ ಅವರು ಇಲ್ಲ, ನನ್ನ ಮಗಳು ಹಾಗೂ ನಿಮ್ಮ ಮಗ ಶ್ರೀಮುರಳಿ ಸುಮಾರು 10 ವರ್ಷಗಳ ಕಾಲ ಪ್ರೀತಿ ಮಾಡಿದ್ದಾರೆ. ಅವರ ಪ್ರೀತಿಗೆ ನಾವು ಬೆಲೆ ಕೊಟ್ಟು ಅವರಿಬ್ಬರಿಗೂ ಮದುವೆ ಮಾಡೋಣ ಎಂದು ಹೇಳಿದರಂತೆ. ಹೌದು ಶ್ರೀಮುರಳಿ ಕೈ ಹಿಡಿದಿರುವ ವಿದ್ಯಾ ಅವರು ಕೋಟ್ಯಾಧಿಪತಿ ವಂಶದವರು. ದೊಡ್ಡ ಹೋಟೆಲ್ ಮಾಲೀಕರ ಮಗಳು, ಅಷ್ಟು ಹಣ ಇದ್ದರೂ ಕೂಡ ಶ್ರೀಮುರಳಿ ಈ ಸಿನಿಮಾರಂಗದಲ್ಲಿ ಇನ್ನೂ ಕೂಡ ಗುರುತಿಸಿಕೊಳ್ಳದ ನಟ ಆಗಿದ್ದರೂ ಪ್ರೀತಿಗೆ ಬೆಲೆ ಕೊಟ್ಟು ಅವರನ್ನ ವರಿಸುತ್ತಾರೆ. ಆ ಸಮಯದಲ್ಲಿಯೆ ಇವರಿಬ್ಬರ ಪ್ರೀತಿಗೆ ಬೆಲೆ ಕೊಟ್ಟು ಮನೆಯವರು ಮದುವೆ ಮಾಡುತ್ತಾರೆ. ಶ್ರೀ ಮುರುಳಿ ಮತ್ತು ವಿದ್ಯಾ ಅವರ ಪ್ರೀತಿ ಅದೆಷ್ಟರ ಮಟ್ಟಿಗೆ ಗಟ್ಟಿ ಇತ್ತು ಎಂಬುದಾಗಿ ಇದರಲ್ಲೇ ಗೊತ್ತಾಗುತ್ತದೆ. ಶ್ರೀ ಮುರಳಿ ಅವರು ವಿದ್ಯಾ ಅವರ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡ ಮೇಲೆ ನಂತರದ ದಿನದಲ್ಲಿ ವಿದ್ಯಾ ಅವರಿಗೆ ಒಂದು ಗಂಭೀರ ಆರೋಗ್ಯ ಕಾಯಿಲೆ ಇರುವುದಾಗಿ ತಿಳಿದು ಬರುತ್ತದೆ.
ಆಗ ವಿದ್ಯಾ ಅವರ ಮನೆಯವರು ಈ ವಿಷಯವನ್ನು ಶ್ರೀಮುರಳಿಯವರ ಬಳಿ ಪ್ರಸ್ತಾಪ ಮಾಡುತ್ತಾರೆ. ಈ ವಿಷಯ ವಿದ್ಯಾ ಅವರಿಗೂ ಸಹ ಗೊತ್ತಿರಲಿಲ್ಲವಂತೆ. ಆಗ ಶ್ರೀಮುರಳಿ ಅವರು 'ನಾನು ಪ್ರೀತಿಸಿದ್ದು ನಿನ್ನನ್ನ, ಮದುವೆಯಾಗುವುದು ನಿನ್ನನ್ನೆ ಎಂದು ತನ್ನ ಗಟ್ಟಿ ಪ್ರೀತಿಯನ್ನು ಬಿಟ್ಟು ಕೊಡದೇ, ಶ್ರೀಮುರುಳಿಯವರು ನಂತರದಲ್ಲಿ ವಿದ್ಯಾ ಅವರನ್ನೇ ಮದುವೆ ಆಗುತ್ತಾರೆ. ಶ್ರೀ ಮುರಳಿ ಅವರು ಕೈ ಹಿಡಿದಿರುವ ವಿದ್ಯಾ ಅವರಿಗೆ ಅಸಲಿಗೆ ಯಾವ ಗಂಭೀರ ಕಾಯಿಲೆ ಇರುತ್ತದೆ ಗೊತ್ತಾ.? ತಲ್ಜೇಮಿಯ ಎಂಬ ಗಂಭೀರವಾದ ಕಾಯಿಲೆ ಅವರಿಗೆ ಇರುತ್ತದಂತೆ. ಇದೊಂದು ರಕ್ತದ ಕಾಯಿಲೆ ಆಗಿದ್ದು ಬಹುಬೇಗನೆ ವಾಸಿಯಾಗದ ಕಾಯಿಲೆ ಇದು ಎಂದು ಈ ವಿಡಿಯೋ ಮೂಲಕ ತಿಳಿದು ಬಂದಿದೆ. ಇದು ಇದ್ದರೆ ಮದುವೆಯಾದ ಬಳಿಕ ಮುಂದೆ ಹುಟ್ಟುವ ಮಕ್ಕಳಿಗೂ ಕೂಡ ಹರಡುವ ಸಾಧ್ಯತೆ ಇರುತ್ತದಂತೆ. ಆದ್ರೆ ಈಗ ಹುಟ್ಟಿರುವ ಶ್ರೀಮುರಳಿ ಮಕ್ಕಳಿಗೆ ಇದರ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿದುಬಂದಿದೆ. ಜೊತೆಗೆ ಮಕ್ಕಳ ಬೆಳವಣಿಗೆಯಲ್ಲಿ ಕುಂಠಿತ ಕಾಣಬಹುದು ಎನ್ನುವ ಸಾಕಷ್ಟು ಕಾರಣಗಳು ಆಗ ಮದುವೆ ಸಂದರ್ಭದಲ್ಲಿ ಕೇಳಿ ಬಂದಿದ್ದು ಆದ್ರೂ ಕೂಡ ಶ್ರೀಮುರುಳಿಯವರು ಪ್ರೀತಿಸಿದ ವಿದ್ಯಾ ಅವರನ್ನೆ ಮದುವೆಯಾಗಿದ್ದಾರೆ. ಇದು ನಿಜಕ್ಕೂ ಗ್ರೇಟ್ ಎಂದು ಹೇಳಬಹುದು.
ಶ್ರೀ ಮುರುಳಿಯವರು ಮದುವೆಯಾಗಿ ಕೇವಲ ಒಂದೇ ವರ್ಷದಲ್ಲಿ ತಮ್ಮ ಮನೆ ಮಾರುವ ಸಂದರ್ಭ ಬರುತ್ತದೆ. ವಿದ್ಯಾ ಅವರು ಕೋಟ್ಯಾಧಿಪತಿ ಮಗಳಾಗಿದ್ದು ಇಂತಹ ಸಂದರ್ಭ ಎದುರು ಬಂದರೂ ಸಹ ತನ್ನ ಗಂಡನನ್ನು ಬಿಟ್ಟು ಕೊಡಲಿಲ್ಲ. ಇದರಲ್ಲಿಯೆ ಗೊತ್ತಾಗುತ್ತದೆ ಇವರಿಬ್ಬರದು ಅದೆಂತಹ ಪ್ರೀತಿ ಇತ್ತು ಎಂಬುದಾಗಿ. ಹೌದು ಸ್ನೇಹಿತರೆ ನಂತರದ ದಿನದಲ್ಲಿ ಶ್ರೀಮುರುಳಿ ಅವರಿಗೆ ವಿದ್ಯಾ ಅವರು ಹೆಚ್ಚು ಬೆನ್ನೆಲುಬಾಗಿ ನಿಂತು, ನೀವು ಒಂದಲ್ಲ ಒಂದು ದಿನ ಗೆದ್ದೇ ಗೆಲ್ಲುತ್ತೀರಾ ಎಂದು ಸಾತ್ ಕೊಟ್ಟಿದ್ದಾರೆ. ನಂತರದ ದಿನದಲ್ಲಿ ಶ್ರೀಮುರುಳಿ ಉಗ್ರಂ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು.. ನಂತರದಲ್ಲಿ ಮಫ್ತಿ, ರಥಾವರ, ಹೀಗೆ ಒಂದರ ಮೇಲೊಂದರಂತೆ ಎಲ್ಲಾ ಸಿನಿಮಾಗಳು ಮುರುಳಿ ಅವರನ್ನು ಮರಳಿ ಸಿನಿಮಾ ಟ್ರ್ಯಾಕ್ ಗೆ ಕರೆದುಕೊಂಡು ಬಂದವು.. ವಿದ್ಯಾ ಹಾಗೂ ಸ್ಪಂದನ ಅವರು ಸ್ವಂತ ಅಕ್ಕ ತಂಗಿಯರಂತೆ ಇದ್ದರು. ಆದ್ರೆ ವಿಧಿ ಇವರ ಕುಟುಂಬದ ನೆಮ್ಮದಿಯನ್ನು ಈಗ ಹಾಳು ಮಾಡಿಬಿಟ್ಟಿತು.ಅವರಿಬ್ಬರ ಇನ್ನಷ್ಟು ವಿಚಾರಗಳು ಈ ವಿಡಿಯೋದಲ್ಲಿವೆ. ಒಮ್ಮೆ ಈ ವಿಡಿಯೋ ನೋಡಿ.. ಹೆಮ್ಮೆ ಅನಿಸುತ್ತದೆ. ಇಂತಹ ಪ್ರೀತಿ ಪ್ರೇಮದ ಘಟನೆಗಳು ಹೆಚ್ಚು ಕಂಡು ಬರುವುದಿಲ್ಲ ಎಂದು ನಿಮಗೂ ಎನಿಸಿದರೆ ವಿಡಿಯೋ ಶೇರ್ ಮಾಡಿ ಧನ್ಯವಾದಗಳು.. ( video credit :VN MEDIA )