ಈ ಕಾರಣಕ್ಕೆ ಮೋಕ್ಷಿತ ಪೈ ಇನ್ನು ಮದುವೆ ಆಗಿಲ್ವಂತೆ : ಕಾರಣ ಕೇಳಿದರೆ ನೀವು ಶಾಕ್ ಆಗುತ್ತೀರಾ

ಈ ಕಾರಣಕ್ಕೆ ಮೋಕ್ಷಿತ ಪೈ ಇನ್ನು ಮದುವೆ ಆಗಿಲ್ವಂತೆ : ಕಾರಣ  ಕೇಳಿದರೆ ನೀವು ಶಾಕ್ ಆಗುತ್ತೀರಾ

ಮೋಕ್ಷಿತಾ ಪೈ ಈಗ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಇದ್ದಾರೆ. ಬಿಗ್ ಬಾಸ್ ಅವರು ಅವರ ವೈಯಕ್ತಿಕ ಜೀವನದ ಕೆಲವು ಘಟನೆಗಳನ್ನು ಹಂಚಿಕೊಳ್ಳಲು ಕೇಳಿದರು. ಪ್ರತಿಯೊಬ್ಬ ಪೋಷಕರಿಗೂ ತಮ್ಮ ಮಗಳನ್ನು ಸರಿಯಾದ ಸಮಯದಲ್ಲಿ ಮದುವೆ ಮಾಡುವುದು ಒಂದು ಆಸೆಯಾಗಿದೆ. ಆದರೆ, ಮೋಕ್ಷಿತಾ ಪೈ ಮದುವೆಯಾಗಲು ಇಚ್ಛಿಸುತ್ತಿಲ್ಲ

ಎಲ್ಲರ ಮನೆಯಲ್ಲಿ ಇರುವ ರೀತಿಯೇ ನಟಿ ಮೋಕ್ಷಿತಾ ಅವರ ಮನೆಯಲ್ಲಿ ಕೂಡ ಮದುವೆಗೆ ಒತ್ತಾಯ ಮಾಡಲಾಗುತ್ತಿದೆ. ಆದರೆ ಮೋಕ್ಷಿತಾ ಅವರು ಮದುವೆಯನ್ನು ಮುಂದೂಡುತ್ತಲೇ ಬಂದಿದ್ದಾರೆ. ಈ ವಿಚಾರವನ್ನು ಅವರು ಹೊರ ಜಗತ್ತಿನಲ್ಲಿ ಹೇಳಿಕೊಂಡಿರಲಿಲ್ಲ. ಆದರೆ ಈಗ ಬಿಗ್​ ಬಾಸ್ ಮನೆಯಲ್ಲಿ ಅವರು ಈ ವಿಷಯವನ್ನು ಹೇಳಿಕೊಂಡು ಅತ್ತಿದ್ದಾರೆ. ಕನ್ಫೆಷನ್​ ರೂಮ್​ನಲ್ಲಿ ಅವರು ಎಲ್ಲವನ್ನೂ ಹೇಳಿಕೊಂಡಿದ್ದಾರೆ. ತಮ್ಮ ಮದುವೆಯನ್ನು ಮುಂದೂಡುತ್ತಾ ಬಂದಿದ್ದಕ್ಕೆ ಕಾರಣ ಏನು ಎಂಬುದನ್ನು ವಿವರಿಸುವಾಗ ಮೋಕ್ಷಿತಾ ಎಮೋಷನಲ್ ಆಗಿದ್ದಾರೆ.

ನಾನು ಇಲ್ಲಿಗೆ ಬರಲು ಅಮ್ಮ ಕಾರಣ. ಒಂದು ವರ್ಷದಿಂದ ಮದುವೆಗೆ ಒತ್ತಾಯ ಮಾಡುತ್ತಿದ್ದಾರೆ. ನನ್ನ ತಮ್ಮ ಫಿಸಿಕಲಿ ಚಾಲೆಂಜಿಂಗ್ ಇರುವ ಹುಡುಗ. ಹಾಗಾಗಿ ನಾನೇ ಮನೆಗೆ ಮಗ ಮತ್ತು ಮಗಳು ಆಗಿದ್ದೇನೆ. ಒಂದು ವೇಳೆ ಮದುವೆ ಆದರೆ ಮನೆಯವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬ ಚಿಂತೆ ನನಗೆ ಕಾಡಿದೆ. ಆದ್ದರಿಂದ ನನಗೆ ಮದುವೆ ಇಷ್ಟ ಇಲ್ಲ. ಆ ಬಗ್ಗೆ ಗೊಂದಲದಲ್ಲಿ ಇದ್ದೇನೆ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ.

‘ಮದುವೆ ಆದರೆ ಎಲ್ಲಿ ನಿಮ್ಮಿಂದ ದೂರ ಆಗ್ತೀನೋ ಎನ್ನುವ ಭಯ ಇದೆ. ಇದರಿಂದ ಮದುವೆ ಮುಂದಕ್ಕೆ ಹಾಕಿ ನಿಮಗೆ ನೋವು ಕೊಟ್ಟಿದ್ದೇನೆ. ಮದುವೆ ಆಗುವ ಹುಡುಗ ನನ್ನನ್ನು ನಿಮ್ಮಿಂದ ದೂರ ಮಾಡುತ್ತಾನೇನೋ ಎಂಬ ಭಯ ನನ್ನೊಳಗೆ ಇದೆ. ಅಮ್ಮ ಮಿಸ್ ಯೂ ಅಂತ ನಾನು ನಿನಗೆ ಯಾವತ್ತೂ ಹೇಳಿಲ್ಲ. ಆದರೆ ಈಗ ತುಂಬ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನಾನು ಬಿಗ್ ಬಾಸ್​ಗೆ ಬರಬೇಕು ಎಂಬುದು ನಿಮ್ಮ ಕನಸು. ಹಾಗಾಗಿ ನಿಮಗೆ ನಿರಾಸೆ ಮಾಡಲ್ಲ’ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ. ( video credit :News Boss )