ಮಿಡ್ ವೀಕ್ ಎಲಿಮಿನೇಷನ್..! ತನೀಷ ಜೊತೆ ಇನ್ನೊಬ್ಬರು ಸಹ ಬಿಗ್ ಮನೆಯಿಂದ ಔಟ್..!!
ಅತಿ ದೊಡ್ಡ ರಿಯಾಲಿಟಿ ಶೋ ಆಗಿ ಈಗಾಗಲೇ ಹೆಚ್ಚು ಜನಮನ್ನಣೆ ಗಳಿಸಿರುವ ಬಿಗ್ ಬಾಸ್ ರಿಯಾಲಿಟಿ ಕಾರ್ಯಕ್ರಮ ಇದೀಗ ಕೊನೆಯ ಹಂತಕ್ಕೆ ಬಂದು ನಿಂತಿದೆ. ಇನ್ನೇನು ಕೆಲವೇ ದಿನಗಳಲ್ಲಿ ಬಿಗ್ ಬಾಸ್ ಫಿನಾಲೆ ಕೂಡ ನಡೆಯಲಿದೆ. ಹೌದು ಒಟ್ಟು ಎಂಟು ಸ್ಪರ್ಧಿಗಳು ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು.. ಕಳೆದ ವಾರ ಜನರು ಆರು ಜನರು ನಾಮಿನೇಟ್ ಕೂಡ ಆಗಿದ್ದರು. ಆ ಆರು ಜನರ ಪೈಕಿ ತನಿಷ, ವಿನಯ್, ಕಾರ್ತಿಕ್, ತುಕಾಲಿ ಸಂತೋಷ್, ಹಾಗೂ ವರ್ತೂರು ಸಂತೋಷ್, ಜೊತೆಗೆ ನಮ್ರತಾ ಗೌಡ ನಾಮಿನೇಟ್ ಆಗಿದ್ದರು.
ಆದರೆ ಬಾಟಮ್ ಟೂ ನಲ್ಲಿ ವರ್ತೂರು ಮತ್ತು ತುಕಾಲಿ ಅವರನ್ನು ಹೊರತುಪಡಿಸಿ ಎಲ್ಲರೂ ಸೇವ್ ಆಗಿದ್ದರು. ಆದರೆ ಇದೇ ನಾಮಿನೇಷನ್ ಪ್ರಕ್ರಿಯೆ ಇನ್ನು ಇಲ್ಲಿಗೆ ಮುಕ್ತಾಯಗೊಂಡಿಲ್ಲ ಎಂದು ಕಿಚ್ಚ ಸುದೀಪ್ ಅವರು ಅಂದೆ ಹೇಳಿದ್ದು ಈ ಪ್ರಕ್ರಿಯೆ ಈ ವಾರದ ಪೂರ್ತಿ ನಡೆಯಲಿದೆ ಎಂದು ಸಹ ಹೇಳಿದ್ದರು. ಅದರ ಪ್ರಕಾರ ಬಿಗ್ಬಾಸ್ ಮನೆಯಲಿ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆ ಕೂಡ ಮುಕ್ತಾಯ ಆಗಿದೆ.. ಹೌದು ಕೆಲವೊಂದಿಷ್ಟು ಚಟುವಟಿಕೆಗಳ ಮೂಲಕ ಆಕ್ಟಿವಿಟಿಗಳ ಮೂಲಕ ಒಬ್ಬೊಬ್ಬರ ಸೇವ್ ಮಾಡುತ್ತಾ ಕೊನೆಯಲ್ಲಿ ಉಳಿದ ತನಿಷ ಕುಪ್ಪಂಡ ಅವರು ಈಗ ಬಿಗ್ ಬಾಸ್ ಮನೆಯ ಜರ್ನಿ ಮುಕ್ತಾಯ ಮಾಡಿದ್ದಾರೆ.
ಆದರೆ ಈ ನಿರ್ಧಾರ ಬಿಗ್ ಬಾಸ್ ಮೇಲೀನ ಕೆಲವರ ಅಭಿಪ್ರಾಯ ಬದಲಾಗಿದೆ. ಈ ನಿರ್ಧಾರದ ಕುರಿತು ಹಲವರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇವರ ಬದಲಿ ನಮೃತ ತುಕಾಲಿ ಅಥ್ವಾ ವರ್ತೂರು ಅವರು ಹೊರಬಂದಿದ್ದರು ಅದಕ್ಕೊಂದು ನ್ಯಾಯ ಸಲ್ಲುತ್ತಿತ್ತು. ಎಂದು ಬಿಗ್ ಬಾಸ್ ವೀಕ್ಷಕರು ಹೇಳುತ್ತಿದ್ದಾರೆ. ಆದರೆ ವೋಟಿಂಗ್ ಆದರದ ಮೇಲೆಯೋ ಅಥವಾ ಯಾವ ಆಧಾರದ ಮೇಲೊ ಗೊತ್ತಿಲ್ಲ, ಈಗ ತನಿಷ ಅವರು ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದಾರೆ. ಬಿಗ್ಬಾಸ್ ಮನೆಯ ಈ ನಿರ್ಧಾರದ ಕುರಿತು ನಿಮ್ಮ ಅಭಿಪ್ರಾಯ ತಿಳಿಸಿ.
ಇನ್ನೊಬ್ಬರು ಸಹ ಇದೆ ಶುಕ್ರವಾರದ ಹೊತ್ತಿಗೆ ಬಿಗ್ ಬಾಸ್ ಮನೆಯಿಂದ ಹೊರ ಬರುವ ಸಾಧ್ಯತೆ ಇದೆ ಎಂದು ಈ ವಿಡಿಯೋದಲ್ಲಿ ತಿಳಿಸಲಾಗಿದೆ. ಒಂದು ವೇಳೆ ಅದು ನಡೆಯದೆ ಇದ್ದಲ್ಲಿ ಸೀದಾ ತುಕಾಲಿ ಟಾಪ್ ಫೈವ್ ನಲ್ಲಿ ಖಂಡಿತ ಇರುತ್ತಾರೆ. ಕಾರಣ ಅವರು ಈ ವಾರ ನಾಮಿನೇಷನ್ ಪ್ರಕ್ರಿಯೆಯಲ್ಲಿ ಸೇವ್ ಆಗಿದ್ದಾರೆ. ನಿಮ್ಮ ಪ್ರಕಾರ ಯಾರು ಟಾಪ್ ಫೈವ್ ಫೈನಲಿಸ್ಟ್ ಯಾರು ಆಗಬೇಕು ಎಂದು ಕಮೆಂಟ್ ಮಾಡಿ, ತನಿಷ ಕುಪ್ಪಂಡ ಹೊರ ಬಂದಿರುವ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ, ಧನ್ಯವಾದಗಳು..