ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಹೊರ ಬಂದ್ರ ಗಗನ ? ಕಾರಣ ಇಲ್ಲಿದೆ ನೋಡಿ !!

ಭರ್ಜರಿ ಬ್ಯಾಚುಲರ್ಸ್ ಶೋ ನಿಂದ ಹೊರ ಬಂದ್ರ ಗಗನ ? ಕಾರಣ ಇಲ್ಲಿದೆ ನೋಡಿ !!

ಗಗನ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ರಿಯಾಲಿಟಿ ಶೋನಲ್ಲಿ ಕೂಡ ಮಿಂಚುತ್ತಿದ್ದಾರೆ. ಅದರಂತೆ ಒಂದಾದ ಮೇಲೋಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಗಗನ ಅದ್ಯಾಕೋ ಈಗ ಈ ಕ್ಷೇತ್ರದ ಬಗ್ಗೆ ಬೇಸರಗೊಂಡಂತೆ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದ್ದು, ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಗಗನ ಇಲ್ಲಿಗೆ ಬಂದು ತಪ್ಪು ಮಾಡಿದೆನಾ? ಎನ್ನುವ ಗೊಂದಲವನ್ನು ಹೊರಹಾಕಿದ್ದಾರೆ.

ನಾನು ಮನೋರಂಜನಾ ಕ್ಷೇತ್ರಕ್ಕೆ ಬಂದು ಕೇವಲ ಒಂದು ವರ್ಷ ಆಗಿದೆ. ಜೀ ಕನ್ನಡಕ್ಕೆ ಒಂದು ವರ್ಷ ಆಗಿದೆ. ಮುಂಚೆ ಐಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದು ಸಂಪೂರ್ಣವಾಗಿ ಬೇರೆ ಜೀವನವೇ ಆಗಿತ್ತು. ಆ ಸಮಯದಲ್ಲಿ ಮಹಾನಟಿಗೆ ಬಂದು, ಮಹಾನಟಿಯಿಂದ ಡಾನ್ಸ್‌ ಕರ್ನಾಟಕ ಡಾನ್ಸ್‌ ಮುಗಿಸಿ, ಈಗ ಭರ್ಜರಿ ಬ್ಯಾಚುಲರ್ಸ್ ೨ ಶೋ ಮಾಡುತ್ತಿದ್ದೇನೆ 'ಈ ಕ್ಷೇತ್ರದಲ್ಲಿ ಎಷ್ಟು ಪಾಸಿಟಿವ್‌ ಇದೆಯೋ, ಅಷ್ಟೇ ನೆಗೆಟಿವ್ ವಿಚಾರಗಳು ಕೂಡ ಇದೆ. ಬೇಜಾರು ಕೂಡ ಇದೆ. ಇದು ಬೇಕಿತ್ತಾ, ಐಟಿಯಲ್ಲೇ ಕೆಲಸ ಮಾಡಬಹುದಿತ್ತಾ, ಇಲ್ಲಿಗೆ ಬಂದು ತಪ್ಪು ಮಾಡಿದೆನಾ?, ಇದು ಒಳ್ಳೆಯದಾ? ಕೆಟ್ಟದಾ? ಎನ್ನುವ ಆಲೋಚನೆಯಲ್ಲೇ ದಿನ ಕಳೆಯುತ್ತಿದೆ. ಇನ್ನೂ ಕೂಡ ಇದರ ಬಗ್ಗೆ ಯೋಚನೆ ಮಾಡುತ್ತಲೇ ಇದ್ದೇನೆ' ಎಂದು ಹೇಳಿದರು.


ತಮ್ಮ ಮುಂದಿನ ಹೆಜ್ಜೆ ಬಗ್ಗೆ ಮಾತನಾಡಿದ ಗಗನ, ' ನನ್ನ ಪ್ರಕಾರ ಭರ್ಜರಿ ಬ್ಯಾಚುಲರ್ಸ್ ೨ ಶೋ ಇನ್ನೂ ಒಂದೂವರೆ ತಿಂಗಳು ಬರುತ್ತದೆ. ಅದಾದ ಮೇಲೆ ನನ್ನದೇ ಆದ ಯಾವುದೇ ಯೋಚನೆಗಳಿಲ್ಲ. ನಾನು ಜೀವನ ಬಂದಂತೆ ಸ್ವೀಕರಿಸುವವಳು. ಹೀಗಾಗಿ ಯಾವ ಅವಕಾಶ ಮುಂದೆ ಸಿಗುತ್ತದೆ ನೋಡೋಣಾ ಅಂತಾ ಇದ್ದೇನೆ. ಇದೆಲ್ಲದರ ಮದ್ಯೆ ಈಗೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ .ಅದು ಏನಂದ್ರೆ . ಮುಂಬರವ ಕನ್ನಡ ಸಿನಿಮಾ ಒಂದಕ್ಕೆ ಮಹಾ ನಟಿಯ ಗಗನ ಅವರು ನಾಯಕಿಯಾಗಿ ಆಗಿ ಆಯ್ಕೆ ಆಗಿದ್ದಾರೆ ಎಂದು ಸುದ್ದಿ ಇದೆ . ಈ ಸುದ್ದಿ ನಿಜವಾದರೆ ನಮ್ಮ ಗಗನ ಸ್ಟಾರ್ ಆಗೋದು ಗ್ಯಾರಂಟಿ . ಆದರೆ ಇದು ಇನ್ನು ಅಧಿಕೃತವಾಗಿ ಹೊರಗೆ ಬಿದ್ದಿಲ್ಲ . ಮತ್ತು ಗಗನ ಅವರಿಗೆ ನಾಯಕಿಯಾಗೆ ನಟಿಸುವ ಎಲ್ಲ ಕ್ವಾಲಿಫಿಕೇಷನ್ ಮತ್ತು ಅದ್ಭುತವಾದ ಕಲೆ ಇದೆ . ಅವರಿಗೆ ಒಳ್ಳೇದು ಆಗಲಿ ಅಂತ ನಾವು ವಿಶ್ ಮಾಡೋಣ . ನೀವೇನಂತೀರಾ  ( video credit : Sandalwood Updates )