ರಾಘು ಹಾಗೂ ಸ್ಪಂದನ ಪ್ರವಾಸಕ್ಕೆ ಹೋದಾಗ ಎಷ್ಟು ಜಾಲಿಯಿಂದ ಇರುತ್ತಿದ್ದರು ಗೊತ್ತಾ..? ಈ ವಿಡಿಯೋ ಸಾಕ್ಷಿ
ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ಅವರು ಅದೆಷ್ಟರ ಮಟ್ಟಿಗೆ ಒಬ್ಬರನ್ನೊಬ್ಬರು ಹಚ್ಚಿಕೊಂಡಿದ್ದರು ಎಂದರೆ, ಹೆಂಡತಿಯನ್ನು ಬಿಟ್ಟು ವಿಜಯ ರಾಘವೇಂದ್ರ ಅವರು ಒಂದು ಕ್ಷಣ ಇರಲು ಆಗದಂತಹ ಪ್ರೀತಿಯನ್ನು ಹೊಂದಿದ್ದರು. ಸ್ಪಂದನ ಅವರನ್ನು ಸದಾ ಒಂದಲ್ಲ ಒಂದು ವಿಚಾರದಲ್ಲಿ ವಿಜಯ ರಾಘವೇಂದ್ರ ಅವರು ನೆನಪು ಮಾಡಿಕೊಳ್ಳುತ್ತಲೇ ಇದ್ದಂತಹ ನಟ. ಸ್ಪಂದನ ಅವರನ್ನು ಇಷ್ಟಪಟ್ಟು ಪ್ರೀತಿ ಮಾಡಿ ಮದುವೆ ಆಗಿದ್ದ ವಿಜಯ ರಾಘವೇಂದ್ರ ಅವರಿಗೆ ಈಗ ತಮ್ಮ ಮಡದಿ ಸ್ಪಂದನ ಅವರ ಅಗಲಿಕೆ ನಿಜಕ್ಕೂ ತುಂಬಾ ನೋವನ್ನ ತಂದಿದೆ.
ವಿಜಯ ರಾಘವೇಂದ್ರ ಅವರು ಹೆಚ್ಚು ಬಾರಿ ವೇದಿಕೆ ಮೇಲೆ ಅವರ ಹೆಂಡತಿಯಾದ ಸ್ಪಂದನಾ ಬಗ್ಗೆಯೇ ತಮ್ಮ ಕಷ್ಟದ ದಿನಗಳ ನೆನೆದು ಹೇಳಿಕೊಂಡಿದ್ದರು. ನನ್ನ ಕಷ್ಟದ ಸಮಯದಲ್ಲಿ, ನನ್ನ ಕೈಯಲ್ಲಿ ಇನ್ನು ಮುಂದೆ ಆಗುವುದಿಲ್ಲ ತುಂಬಾ ದಣಿದಿದ್ದೇನೆ ಎಂದೇನಿಸಿದಾಗ, ಹಾಗೆ ನನಗೆ ಆಯಾಸ ಆದಾಗ ನನ್ನ ಮಡದಿಯೇ ನನ್ನ ಜೊತೆಗೆ ಮೊದಲು ನಿಂತಳು ಎಂದಿದ್ದರು. ಆಕೆಯ ಬೆಂಬಲ ಹೆಚ್ಚು ನನಗೆ ಇತ್ತು, ಹಾಗಾಗಿ ನಾನು ಎಂದಿಗೂ ಧೃತಿಗೆಡಲಿಲ್ಲ ಎಂದು ಹೆಂಡತಿ ಬಗ್ಗೆ ಪ್ರೀತಿಯಿಂದಲೆ ಹೆಚ್ಚು ವಿಷಗಳನ್ನ ಹೇಳಿಕೊಂಡಿದ್ದರು ನಟ ವಿಜಯ್ ರಾಘವೇಂದ್ರ.
ಆದರೆ ಇದೀಗ ಸ್ಪಂದನ ಅವರ ಅಕಾಲಿಕ ಮರಣ, ಸಣ್ಣವಯಸಿಗೆ ದೇವರು ಅವರನ್ನು ಕರೆದುಕೊಂಡ ರೀತಿ ನಿಜಕ್ಕೂ ಕಣ್ಣಂಚಲಿ ನೀರು ತರಿಸುತ್ತದೆ. ಇದೀಗ ಎಲ್ಲಿ ನೋಡಿದರೂ ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರ ಖುಷಿಯ ಕ್ಷಣದ ಸಾಕಷ್ಟು ಫೋಟೋಗಳು, ಮತ್ತು ವಿಡಿಯೋಗಳೇ ಹರಿದಾಡುತ್ತಿವೆ. ಅಂತಹದ್ದೆ ಒಂದು ವಿಡಿಯೋ ಇದೀಗ ಮತ್ತೆ ವೈರಲ್ಲಾಗುತ್ತಿದ್ದು, ವಿಜಯ ರಾಘವೇಂದ್ರ ಮತ್ತು ಸ್ಪಂದನ ಒಮ್ಮೆ ಪ್ರವಾಸ ಕೈಗೊಂಡಾಗ ಅವರನ್ನು ಮುತ್ತಿಡಲು ಪ್ರಯತ್ನಿಸುತ್ತಿದ್ದ ವಿಜಯ ರಾಘವೇಂದ್ರರ ಈ ವಿಡಿಯೋ ನೋಡಿದರೆ ನಮ್ಮ ಕಣ್ಣಂಚಲ್ಲಿಯೂ ಕೂಡ ನೀರು ಬರುತ್ತದೆ.
ಇದೀಗ ಹೆಂಡತಿಯನ್ನು ಕಳೆದುಕೊಂಡು ವಿಜಯ ರಾಘವೇಂದ್ರ ಅವರು ಸ್ಪಂದನ ಅವರ ನೋವಿನಲ್ಲಿಯೇ ಇದ್ದಾರೆ. ಅದ್ರಿಂದ ಸ್ವಲ್ಪ ಅವರು ಹೊರ ಬರಬೇಕು. ಅವರ ನೆನಪಿನಲ್ಲಿ ಜೀವನ ನಡೆಸಲೇಬೇಕಾಗಿದೆ. ಹಾಗೇನೇ ಡಿಕೆಡಿ ಕಾರ್ಯಕ್ರಮಕ್ಕೆ ಸದ್ಯ ಬರುವುದಿಲ್ಲ ಎನ್ನುವ ನಿರ್ಧಾರ ಸಹ ತಿಳಿಸಿದ್ದಾರಂತೆ. ಏನೇ ಇರಲಿ ಸ್ಪಂದನ ಅವರು ಇನ್ನೂ ನೆನಪಾಗಿಯೇ ಉಳಿಯುವಂತೆ ದೂರ ಸಾಗಿದ್ದಾರೆ. ಇಲ್ನೋಡಿ ವಿಡಿಯೋ. ಹಾಗೆ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆ ದೇವರಲ್ಲಿ ನೀವು ಪ್ರಾರ್ಥಿಸಿ, ಧನ್ಯವಾದಗಳು...