ಕನ್ನಡ ಬಿಗ್ಬಾಸ್ ಮತ್ತೆ ಆರಂಭ..! ಸೀಸನ್ ಹತ್ತರಲಿ ಇವರೆಲ್ಲ ಬಹುತೇಕ ಖಚಿತ..
ಕನ್ನಡ ಕಿರುತೆರೆಯ ಖ್ಯಾತ ರಿಯಾಲಿಟಿ ಶೋ ಆಗಿ ಈಗಾಗಲೇ ಒಟ್ಟು ಒಂಬತ್ತು ಸೀಸನ್ ಗಳ ಮುಗಿಸಿರುವ ಬಿಗ್ ಬಾಸ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಈ ಬಿಗ್ ಬಾಸ್ ಕಾರ್ಯಕ್ರಮ ಒಂದು ವಿಭಿನ್ನವಾದ ರೀತಿಯೇ ಇದೆ. ಹೆಚ್ಚು ಅನುಭವ ನೀಡುವಂತ ವಿಚಾರಗಳು ಮತ್ತು ಸಾಕಷ್ಟು ಗೊತ್ತಿಲ್ಲದ ವಿಷಯಗಳು ಇಲ್ಲಿ ತಿಳಿಯುತ್ತವೆ. ಕಿಚ್ಚ ಸುದೀಪ್ ಅವರ ಮಾತುಗಳನ್ನು ಕೇಳಲೆಂದೇ ಈ ಕಾರ್ಯಕ್ರಮವನ್ನು ಸಾಕಷ್ಟು ಜನರು ವಾರಂತ್ಯಕ್ಕೆ ನೋಡುವರಿದ್ದಾರೆ..ಹೌದು ಈಗಾಗಲೇ ಹಿಂದಿ ಬಿಗ್ ಬಾಸ್ ಕಾರ್ಯಕ್ರಮ ಮುಕ್ತಾಯ ಆಗಿದ್ದು, ತೆಲುಗು ಬಿಗ್ ಬಾಸ್ ಕಾರ್ಯಕ್ರಮ ಕೂಡ ಇಷ್ಟರಲ್ಲಿಯೆ ಆರಂಭ ಆಗಲಿದೆ.
ಇದೀಗ ಸ್ಯಾಂಡಲ್ ವುಡ್ ನ ಕನ್ನಡದ ಕಿರುತೆರೆಯಲ್ಲಿ ತಮ್ಮದೇ ಆದ ಹೊಸ ಅಂಗಳ ಮೂಡಿಸಿರುವ ಬಿಗ್ ಬಾಸ್ ಕಾರ್ಯಕ್ರಮ ಕೂಡ ಇಷ್ಟರಲ್ಲಿಯೇ ಆರಂಭ ಆಗಲಿದೆಯಂತೆ.ಕಲರ್ಸ್ ಕನ್ನಡ ಈ ಕಾರ್ಯಕ್ರಮಕ್ಕಾಗಿ ಈಗಾಗಲೇ ತೆರೆಮರೆ ಹಿಂದೆ ಸಾಕಷ್ಟು ಕೆಲಸಗಳನ್ನು ಪ್ರಾರಂಭ ಮಾಡಿಕೊಂಡಿದ್ದು, ಅನುಬಂಧ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಮಗ್ನವಾಗಿದೆ. ಸೆಪ್ಟಂಬರ್ ನ ಮೊದಲನೇ ವಾರದಲ್ಲಿ ಈ ಶೋ ಮುಗಿದ ತಕ್ಷಣವೆ, ಇದೆ ಸೆಪ್ಟಂಬರ್ ತಿಂಗಳ ಕೊನೆ ವಾರದಲ್ಲಿ ಬಿಗ್ ಬಾಸ್ ಸೀಸನ್ 10 ಮತ್ತೆ ಪ್ರೇಕ್ಷಕರ ಎದುರು ಬರಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.
ಹೌದು ಈ ಬಾರಿ ಸೀಸನ್ ಓ ಟಿ ಟಿ ಭಾಗ 2 ಎಂಬಂತೆ ಯಾವುದೇ ಕಾರ್ಯಕ್ರಮ ಬರುತ್ತಿಲ್ಲ. ಬದಲಿಗೆ ಸೀದಾ ಬಿಗ್ ಬಾಸ್ ಹತ್ತರ ಮೂಲಕ ಟಿವಿಗೆ ಈ ಕಾರ್ಯಕ್ರಮ ಬರುತ್ತಿದೆ. ಈ ಬಾರಿ ಬಿಗ್ ಬಾಸ್ ಮನೆಗೆ ಯಾರೆಲ್ಲಾ ಸ್ಯಾಂಡಲ್ವುಡ್ ನ ಕೆಲ ಸ್ಟಾರ್ ಗಳು ಮತ್ತು ಸಾಮಾಜಿಕ ಜಾಲತಾಣದ ಸ್ಟಾರ್ ಗಳು ಸೇರಲಿದ್ದಾರೆ ಎನ್ನಲಾಗಿ ಈಗ ಚರ್ಚೆ ಹೆಚ್ಚುತ್ತಿದ್ದು, ಈಗಾಗಲೇ ಇವರು ಬಹುತೇಕ ಖಚಿತ ಎನ್ನುವಂತೆ ಈ ನಟಿಯರು ಕಾಣಿಸಿದ್ದಾರೆ.ಹೌದು, ಹುಚ್ಚ ಸಿನಿಮಾದ ಖ್ಯಾತಿಯ ನಟಿ ರೇಖಾ, ನಟ ದರ್ಶನ್ ಅವರ ಜೊತೆ ಇತ್ತೀಚೆಗೆ ಅಭಿನಯ ಮಾಡಿದ ಆಶಾ ಭಟ್, ಜೊತೆಗೆ ನೇಹಾ ಗೌಡ, ಮತ್ತೆ ಸಾಮಾಜಿಕ ಜಾಲತಾಣದ ರೀಲ್ಸ್ ಸ್ಟಾರ್ ಎಂದು ಖ್ಯಾತಿ ಪಡೆದಿರುವ ಭೂಮಿಕ ಬಸವರಾಜ್ ಕೂಡ ಈ ಬಾರಿ ಬಿಗ್ ಬಾಸ್ ಸೀಸನ್ ಹತ್ತರಲಿ ಬಿಗ್ ಮನೆಗೆ ಬರುವ ಸಾಧ್ಯತೆ ಇದೆ ಎಂದು ಕೆಲವು ಕಡೆ ಕೇಳಿ ಬರುತ್ತಿವೆ.
ಇಲ್ಲಿದೆ ನೋಡಿ ಆ ವಿಡಿಯೋ. ನೀವು ಈ ಬಾರಿಯ ಬಿಗ್ಬಾಸ್ ಕಾರ್ಯಕ್ರಮಕ್ಕೆ ಹೆಚ್ಚು ಕಾಯುತ್ತಿದ್ದರೆ, ತಪ್ಪದೆ ಮಾಹಿತಿಗೊಂದು ಮೆಚ್ಚುಗೆ ನೀಡಿ,, ಈ ಮಾಹಿತಿಯನ್ನು ತಪ್ಪದೆ ಶೇರ್ ಮಾಡಿ,, ನಿಮ್ಮ ಪ್ರಕಾರ ಯಾವ ಯಾವ ಸ್ಪರ್ಧಿಗಳು ಬಿಗ್ ಮನೆಯಲ್ಲಿ ಇದ್ದರೆ ಚೆಂದ ಎನಿಸುತ್ತದೆ ಕಮೆಂಟ್ ಮಾಡಿ, ಧನ್ಯವಾದಗಳು... ( video credit : vistara news )