ಶಿವಣ್ಣ ಸ್ಪಂದನ ಬಗ್ಗೆ ಹೇಳಿದ್ದೇನು..? ರಾಘು ನೋವಿನಲ್ಲಿದ್ದರೂ ಈ ಕೆಲಸ ಮಾಡಬೇಕು..!
ಸ್ಪಂದನ ಅವರು ಇದೀಗ ಇಲ್ಲವಾಗಿದ್ದಾರೆ. ಅದು ಕೇವಲ ದೈಹಿಕವಾಗಿ ಮಾತ್ರ ಎಂದು ಹೇಳಬಹುದು. ಹೌದು ನಟ ವಿಜಯ್ ರಾಘವೇಂದ್ರ ಅವರ ಧರ್ಮಪತ್ನಿಯಾಗಿ 2007ರಲ್ಲಿ ವಿಜಯ ರಾಘವೇಂದ್ರ ಅವರ ಕೈ ಹಿಡಿದು ಅವರ ಮನೆಯನ್ನು ಸೇರುತ್ತಾರೆ..ಸ್ಪಂದನ ಅವರು ಖ್ಯಾತ ಪೊಲೀಸ್ ಅಧಿಕಾರಿ ಬಿ ಕೆ ಶಿವರಾಮ್ ಅವರ ಪುತ್ರಿ..ಇದು ಸಾಕಷ್ಟು ಜನರಿಗೆ ಗೊತ್ತಿರಲಿಲ್ಲ.ಇತ್ತೀಚೆಗೆ ಸ್ಪಂದನ ಹೃದಯಾಘಾತ ಸಂಭವಿಸಿದ ಬೆನ್ನಲ್ಲೇ ಈ ವಿಚಾರ ಹೆಚ್ಚು ಜನರಿಗೆ ತಿಳಿದಿದೆ.. ಹೌದು ಬಿಕೆ ಶಿವರಾಂ ಅವರು ದಕ್ಷ ಪೊಲೀಸ್ ಅಧಿಕಾರಿ..ಒಂದಾನೊಂದು ಕಾಲದಲ್ಲಿ ಇವರನ್ನು ಕಂಡರೆ ಎಂತಹ ರೌಡಿ ಇದ್ದರೂ ಇವರಿಗೆ ಹೆದರುತ್ತಿದ್ದರಂತೆ. ವಿಜಯ್ ರಾ ಅವರು ಎಂದು ಕೂಡ ಊಹೆ ಮಾಡಿರ್ಲಿಲ್ಲ.
ನಮ್ಮ ಬಾಳಲ್ಲಿ ಇಂತಹದು ಒಂದು ನೋವಿನ ದಿನ ಬಂದೇ ಬರುತ್ತದೆ ಎಂಬುದಾಗಿ. ಆದರೆ ವಿಧಿ ಆಟ ಏನು ಮಾಡಲು ಸಾಧ್ಯವಿಲ್ಲ.. ಇದ್ದವರು ಹೋದವರ ನೆನಪಿನಲ್ಲಿ ಜೀವನ ನಡೆಸಬೇಕು. ಬದುಕಿರುವವರಿಗಾಗಿ ಪ್ರತಿದಿನ ಬದುಕಬೇಕು. ನಟ ವಿಜಯ್ ಹಾಗೂ ಸ್ಪಂದನ ಅವರು ಅದೆಷ್ಟು ಜನರಿಗೆ ಆದರ್ಶ ದಂಪತಿಗಳಾಗಿ ಕಾಣಿಸಿಕೊಂಡಿದ್ದರು ಎಂದರೆ, ನೋಡಿದ ಪ್ರತಿಯೊಬ್ಬರು ಜೋಡಿ ಎಂದರೆ ಇವರ ರೀತಿ ಇರಬೇಕು, ಅದೆಂತಹ ಪ್ರೀತಿ, ವಾತ್ಸಲ್ಯ, ಒಬ್ಬರಿಗೊಬ್ಬರು ಎಷ್ಟು ಅದ್ಭುತವಾಗಿ ಅರ್ಥ ಮಾಡಿಕೊಂಡಿದ್ದಾರೆ. ಒಬ್ಬರನ್ನೊಬ್ಬರು ಎಷ್ಟು ಅರ್ಥ ಮಾಡಿಕೊಂಡಿದ್ದಾರೆ ಎಂದು ಯಾವಾಗಲೂ ಮಾತನಾಡಿಸಿಕೊಳ್ಳುವಂತಹ ಜೋಡಿ ಇವರದ್ದು ಆಗಿತ್ತು.
ಆದರೆ ವಿಧಿ ಇವರ ಬಾಳಲ್ಲಿ ಯಾರು ಊಹೆ ಮಾಡದ ರೀತಿ ಸ್ಪಂದನ ಅವರನ್ನು ತನ್ನತ್ತ ಕರೆಸಿಕೊಂಡು ಅವರ ಕುಟುಂಬದವರಿಗೆ ಹೆಚ್ಚು ನೋವು ನೀಡಿದೆ.. ವಿಜಯ್ ರಾಘವೇಂದ್ರ ಮತ್ತು ಅವರ ಇಡೀ ಕುಟುಂಬ ಇದೀಗ ಸ್ಪಂದನ ಅವರ ನೆನಪಿನಲ್ಲಿ ಜೀವನ ಸಾಗಿಸಬೇಕಾಗಿದೆ. ಶ್ರೀರಂಗಪಟ್ಟಣದಲ್ಲಿ ಸ್ಪಂದನವರ ಅಸ್ತಿಯನ್ನು ಕೂಡ ನಿನ್ನೆ ಬಿಡಲಾಯಿತು.
ಮೂರು ದಿನದ ಹಾಲು ತುಪ್ಪ ಕಾರ್ಯ ಮಾಡಿದ್ದು ನಂತರ ಸಮಾಧಿಗೆ ಎಡೆ ಇಡಲಾಯಿತು.. ಹೌದು ಇದೀಗ ಶಿವಣ್ಣ ಅವರು ಈ ಬಗ್ಗೆ ಮಾತನಾಡಿದ್ದು ಸ್ಪಂದನ ಅವರನ್ನು ಕಳೆದುಕೊಂಡಿರುವ ರಾಘು ಅವರ ಬಗ್ಗೆ ಏನು ಹೇಳುತ್ತೀರಾ ಎಂಬುದಾಗಿ ಕೇಳಿದಾಗ, ತುಂಬಾ ಒಳ್ಳೆಯ ಮಗು ಅದು, ಸಡನ್ ಆಗಿ ಈ ರೀತಿ ಹೋಗುತ್ತಾರೆ ಎಂದರೆ ನಿಜಕ್ಕೂ ಅವರ ಕುಟುಂಬಕ್ಕೆ ದೊಡ್ಡ ಲಾಸ್, ನಮಗೂ ಕೂಡ ದೊಡ್ಡ ಲಾಸ್, ಒಳ್ಳೆಯ ಮಗು ಈ ರೀತಿ ಹೋಗಬಾರದಿತ್ತು. ಆದರೆ ಅವರು ಇಲ್ಲ ಎಂದು ನಾವು ಎಂದಿಗೂ ಸಹ ಅಂದುಕೊಳ್ಳಬಾರದು, ನಮ್ಮ ಜೊತೆಗೆ ಇದ್ದಾರೆ ಎಂದು ಅವರು ನೆನಪಿನಲ್ಲಿ ಸದಾ ಜೀವಿಸಬೇಕು, ಅವರ ಮಗು ಶೌರ್ಯ ಇದ್ದಾನೆ, ಅವನನ್ನು ನೋಡಿಕೊಂಡು ರಾಘು ಜೀವನ ನಡೆಸಬೇಕಾಗಿದೆ. ಅವನ ಹಿಂಬಾಲಾಗಿ ನಿಂತುಕೊಂಡು ನಾವೆಲ್ಲರೂ ಹಿಂದೂ ನಿಂತು ಅವನ ಏಳಿಗೆಗಾಗಿ ಜೀವನ ಮಾಡಬೇಕು' ಎಂದು ಶಿವಣ್ಣ ಹೇಳಿದರು. ಇಲ್ಲಿದೆ ನೋಡಿ ವಿಡಿಯೋ, ಒಮ್ಮೆ ನೋಡಿ ಮತ್ತು ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮಾಡಿ ಧನ್ಯವಾದಗಳು...
VIDEO CREDIT : TV9 KANNADA