ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ FIR ದಾಖಲು! ಯಾಕೆ ಗೊತ್ತಾ?

ರಕ್ಷಿತ್ ಶೆಟ್ಟಿ ವಿರುದ್ಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ FIR ದಾಖಲು! ಯಾಕೆ ಗೊತ್ತಾ?

ರಕ್ಷಿತ್ ಶೆಟ್ಟಿ  ಕರ್ನಾಟಕದ ಪ್ರಸಿದ್ಧ ನಟರಲ್ಲಿ ಒಬ್ಬರಗಿದ್ದು, ಈಗ ಅವರು ನಟನೆಯ ಜೊತೆಗೆ ನಿರ್ದೇಶಕ, ನಿರ್ಮಾಪಕ ಮತ್ತು ಬರಹಗಾರನಾಗಿ ನಮ್ಮ ಚಂದನವನದಲ್ಲಿ ಗುರುತಿಸಿಕೊಂಡಿದ್ದಾರೆ. ಅವರು 12 ಜೂನ್ 1983ರಲ್ಲಿ ಉಡುಪಿ ಜಿಲ್ಲೆಯಲ್ಲಿ ಜನಿಸಿದರು. ರಕ್ಷಿತ್ ಶೆಟ್ಟಿಯವರು ತಮ್ಮ ಚಿತ್ರರಂಗದ ಪ್ರಯಾಣವನ್ನು 'ನಮ್ಮ ಮನಸ್ಸಿನ ಚಿತ್ರ' (2010) ಚಿತ್ರದಿಂದ ಪ್ರಾರಂಭಿಸಿದರು, ಆದರೆ ಅವ್ರ ಮೊದಲನೆಯ ಚಿತ್ರ ದೊಡ್ಡ ಮಟ್ಟದ ಸೋಲನ್ನು ಇವರಿಗೆ ನೀಡಿತ್ತು. ಅದಾದ ಬಳಿಕ ಮತ್ತೊಂದು ಸಿನಿಮಾ ಮಾಡುತ್ತಾರೆ ಅದು ಕೊಡ ಅಷ್ಟರ ಮಟ್ಟಿಗೆ ಯಶಸ್ವಿ ತಂದು ಕೊಡಲಿಲ್ಲ. ಆದರೆ 'ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ' (2013) ಮೂಲಕ ಯಶಸ್ಸು ಹಾಗೂ ಜನಪ್ರಿಯತೆ ಗಳಿಸಿದರು. 

ಅದಾದ ಬಳಿಕ ರಕ್ಷಿತ್ ಹಿಂದೆ ತಿರುಗಿ ನೋಡಿದ್ದೆ ಇಲ್ಲಾ.  ಇನ್ನು ಅವರ ಇತರ ಪ್ರಮುಖ ಚಿತ್ರಗಳಲ್ಲಿ 'ಉಲಿದವರು ಕಂಡಂತೆ' (2014), ರಿಕ್ಕಿ ' (2016), 'ಕಿರಿಕ್ ಪಾರ್ಟಿ' (2016), ಮತ್ತು 'ಅವನೇ ಶ್ರೀಮನ್ನಾರಾಯಣ' (2019) ಸೇರಿವೆ. 512 ಚಿತ್ರಗಳಿಗೆ  ಚಿತ್ರಕತೆ ಬರಹ ಮತ್ತು ನಿರ್ದೇಶನದಲ್ಲೂ ತಮ್ಮದೇ ಆದ ವಿಶಿಷ್ಟ ಶೈಲಿಯನ್ನು ತಂದಿದ್ದಾರೆ. ಎಲ್ಲದಕ್ಕಿಂತ ಹೆಚ್ಚು ಪ್ರಸಿದ್ದಿ ತಂದುಕೊಟ್ಟ ಚಿತ್ರ ಎಂದ್ರೆ ನಟನೆ,ನಿರ್ದೇಶನ, ಚಿತ್ರಕಥೆ ಹಾಗೂ ನಿರ್ಮಾಣ ಮಾಡಿದ ಕಿರಿಕ್ ಪಾರ್ಟಿ ಎಂದು ಹೇಳಬಹುದು. ಇದೊಂದು ಸಿನಿಮಾ ಇವರನ್ನು ಪಂಚ ಭಾಷೆಯಲ್ಲಿ ಹಿಟ್ ಮುದ್ರೆ ನೀಡಿತ್ತು ಎಂದು ಹೇಳಬಹುದು. ಹೀಗೆ ತನ್ನ ಕೆಲಸಗಳಲ್ಲಿ ಸದಾ ಬ್ಯುಸಿ ಇರುವ ರಕ್ಷಿತ್ ಈಗ ಸಂಕಶ್ಟಕ್ಕೆ ಸಿಲುಕಿದ್ದಾರೆ.

ಇದೀಗ ಸ್ಯಾಂಡಲ್ ವುಡ್ ನಟ ರಕ್ಷಿತ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಾಗಿದ್ದು. ಕಾಫಿರೈಟ್ ಉಲ್ಲಂಘನೆ ಹಿನ್ನೆಲೆಯಲ್ಲಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಫ್ಐಆರ್ ಕೂಡ ಹಾಕಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ. ಇತ್ತೀಚೆಗೆ ರಕ್ಷಿತ್ ಶೆಟ್ಟಿ ಮಾಲೀಕತ್ವದ ಪರಂವಃ ಸ್ಟುಡಿಯೋಸ್ ನಿರ್ಮಾಣ ಮಾಡಿದ್ದ ಬ್ಯಾಚುಲರ್ ಪಾರ್ಟಿ ಸಿನಿಮಾ  ಜನವರಿ 26ರಂದು ಬಿಡುಗಡೆ ಪಡೆದು ತಕ್ಕಮಟ್ಟ ಯಶಸ್ವಿ ಪಡೆದಿತ್ತು. ಆದರೆ ಈ ಸಿನಿಮಾದಲ್ಲಿ ಇರುವ 'ನ್ಯಾಯ ಎಲ್ಲಿದೆʼ ಟೈಟಲ್ ಸಾಂಗ್ ಹಾಗೂ ‘ಒಮ್ಮೆ ನಿನ್ನನ್ನೂ ಕಣ್ತುಂಬಾ ನೋಡುವಾಸೆ” ಎರಡು ಹಾಡುಗಳನ್ನು ರಕ್ಷಿತ್ ಶೆಟ್ಟಿ ಕದ್ದಿದ್ದಾರೆ. ಎಂಆರ್ ಟಿ ಮ್ಯೂಸಿಕ್ ಪಾಲುದಾರರಾ ನವೀನ್ ಕುಮಾರ್ ಅನುಮತಿ ಇಲ್ಲದೇ ಸಿನಿಮಾದಲ್ಲಿ ತಮ್ಮ ಹಾಡು ಬಳಸಿದ್ದಾರೆ ಎಂದು  ಆರೋಪಿಸಿದ್ದಾರೆ.