ಸ್ಪಂದನ ಅವರ ಅಂತಿಮ ದರ್ಶನ ಪಡೆಯುತ್ತಿರುವ ಸಾರ್ವಜನಿಕರು..! ಹೆಂಡ್ತಿಯನ್ನೆ ನೋಡುತ್ತಾ ನಿಂತ ವಿಜಯ್ ರಾಘವೇಂದ್ರ
ಕನ್ನಡದ ಚಿನ್ನಾರಿ ಮುತ್ತ ಎಂದೆ ಪ್ರಸಿದ್ಧಿ ಪಡೆದಿದ್ದ ನಟ ವಿಜಯ್ ರಾಘವೇಂದ್ರ ಅವರ ಬದುಕಿನಲ್ಲಿ ಈಗ ಅತಿ ದೊಡ್ಡ ಬಿರುಗಾಳಿಯೇ ಎದ್ದಿದೆ. ಹೌದು ರಾಘವೇಂದ್ರ ಅವರ ಪತ್ನಿ ಸ್ಪಂದನ ಅವರು ಬ್ಯಾಂಕಾಖೆ ತೆರಳಿದ್ದ ವೇಳೆ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ..ನಿನ್ನೆ ರಾತ್ರಿ ಎರಡು ಗಂಟೆ ಸುಮಾರಿಗೆ ಸ್ಪಂದನ ಅವರ ಮೃತದೇಹ ಬೆಂಗಳೂರಿನ ಅವರ ತಂದೆಯ ಮನೆ ಇದ್ದ ಮಲ್ಲೇಶ್ವರಂ ಗೆ ಬಂದು ಇಳಿದಿದೆ. ರಾತ್ರಿಯಿಂದಲೇ ಎಲ್ಲಾ ಕಡೆ ಅವರ ಕುಟುಂಬದಲ್ಲಿ ಶೋಕ ಹೆಚ್ಚುತ್ತಿದ್ದು, ಸ್ಪಂದನ ಅವರನ್ನು ನೋಡಿ ಬಿಕ್ಕಿಬಿಕ್ಕಿ ಅಳುತ್ತಿದ್ದಾರೆ. ಅವರ ಪತಿ ನಟ ವಿಜಯ್ ರಾಘವೇಂದ್ರ ಅವರು ಕೂಡ ಹೆಂಡತಿಯನ್ನೇ ನೋಡುತ್ತಾ ನಿಂತಿದ್ದು ಅತ್ತು ಅತ್ತು ಅವರ ಕಣ್ಣೀರೆ ಬರಿದಂತಾಗಿದೆ.
ಅವರ ಕಣ್ಣುಗಳ ನೋಡಿದರೆ ನಿಜಕ್ಕೂ ಅವರ ನೋವು ಎಷ್ಟುರಬಹುದು ಎಂದು ಊಹೆ ಮಾಡಲು ಆಗುತ್ತಿಲ್ಲ. ಅದು ಅಸಾಧ್ಯವಾದದ್ದು, ಅವರಿಗೆ ಸಾಂತ್ವನವನ್ನ ಹೇಳುವುದಾದರೆ, ಅವರ ಆಪ್ತರು, ಅವರ ಸ್ನೇಹಿತರೂ ಆದರೂ ಏನು ಹೇಳುತ್ತಾರೆ, ಯಾವ ಮಾತುಗಳೇ ಇಲ್ಲ. ಇಂತಹ ಸಂದರ್ಭದಲ್ಲಿ ಆಗಿದ್ದು ಆಗಿ ಹೋಯಿತು. ನೀವೂ ದೈರ್ಯ ತೆಗೆದುಕೊಳ್ಳಬೇಕೆಂದು ಹೇಳಿದರೂ ಆ ನೋವು ಕಡಿಮೆ ಆಗುವುದಿಲ್ಲ. ಅದು ನೋವಿನ ವಿಚಾರ ಆಗಿರುತ್ತದೆ. ಈಗಾಗಲೇ ಎಲ್ಲಾ ವಿಧಿ ವಿಧಾನ ಪೂಜೆ ಕಾರ್ಯಕ್ರಮಗಳನ್ನ ಅತ್ತ ಮಲ್ಲೇಶ್ವರಂ ಅವರ ತಂದೆ ಮನೆಯಲ್ಲಿ ಮಾಡಲಾಗಿದ್ದು, ಸ್ಪಂದನ ಅವರ ಮೃತ ದೇಹಕ್ಕೆ ಪೂಜೆ ಮಾಡಲಾಗಿದೆ.
ನಂತರ ಆರಂಭದಲ್ಲಿ ಅವರ ಕುಟುಂಬದವರಿಗೆ ದರ್ಶನ ಪಡೆಯಲು ಅನುಮತಿ ಮಾಡಲಾಗಿತ್ತು. ಇದೀಗ ಸಾರ್ವಜನಿಕರಿಗೂ ಕೂಡ ಅದೇ ಮನೆಯಲ್ಲಿ ಸ್ಪಂದನ ಅವರ ದರ್ಶನ ಪಡೆಯಲು ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ. ನಿಂತ ಸ್ಥಳದಲ್ಲಿಯೇ ವಿಜಯ್ ರಾಘವೇಂದ್ರ, ಅವರ ಹೆಂಡತಿಯನ್ನೇ ನೋಡುತ್ತಾ ಕಣ್ಣೀರು ಹಾಕುತ್ತಾ ನೋವಿನಲ್ಲಿದ್ದಾರೆ. ಎಂತಹ ಕಲ್ಲು ಮನಸ್ಸಿನ ವ್ಯಕ್ತಿಗಳಿಗಾದರೂ ಈ ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಬರುತ್ತದೆ. ಅದು ಏನೇ ಇರಲಿ ಈ ವಿಧಿ ಆಟದ ಮುಂದೆ ಎಲ್ಲವೂ ಶೂನ್ಯ ಎಂಬಂತೆ ಸ್ಪಂದನ ಅವರು ಮರಳಿ ಬಾರದ ಲೋಕಕ್ಕೆ ತೆರಳಿದ್ದು ವಿಷದನೀಯ.
ಇಷ್ಟು ಸಣ್ಣ ವಯಸ್ಸಿಗೆ ದೇವರು ಅದೆಂತಹ ಕಲ್ಲು ಮನಸ್ಸಿನಿಂದ ಇಂತಹ ನಿರ್ಧಾರ ತೆಗೆದುಕೊಂಡನೋ ಎಂದೆನಿಸುತ್ತದೆ. ಈ ವಿಡಿಯೋ ನೋಡಿ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ನೀವು ಕೂಡ ದೇವರಲ್ಲಿ ಪ್ರಾರ್ಥಿಸಿ.. ( video credit : tv 9 )