ಸ್ಪಂದನ ನಿಧನದ ಬೆನ್ನಲ್ಲೇ ರಾಜ್ ಕುಟುಂಬಕ್ಕೆ ಕಂಟಕ ಇದೆ ಅಂದ್ರ ಈ ಸ್ವಾಮೀಜಿ..? ಇದೇನಿದು ಅಷ್ಟಮಂಗಳ
ಹೌದು ಕನ್ನಡ ಚಿತ್ರರಂಗದಲ್ಲಿ ಕಳೆದ ಮೂರು ವರ್ಷಗಳಿಂದ ಕೋವಿಡ್ ಬಂದ ನಂತರ ಸಾಕಷ್ಟು ಕಲಾವಿದರು ಸಾವನ್ನಪ್ಪಿದ್ದಾರೆ. ಅದರಲ್ಲಿ ಚಿರಂಜೀವಿ ಸರ್ಜಾ, ಪುನೀತ್ ರಾಜಕುಮಾರ್, ಸಂಚಾರಿ ವಿಜಯ್ ಇನ್ನು ಕೂಡ ಹಲವರು ಬೇರೆ ಬೇರೆ ಕಾರಣಗಳಿಂದ ಸಣ್ಣ ವಯಸ್ಸಿಗೇ ಸಾವನಪ್ಪಿದ್ದಾರೆ. ಹೌದು ಇದೀಗ ವಿಜಯ್ ರಾಘವೇಂದ್ರ ಪ್ರೀತಿಯ ಮಡದಿ ಸ್ಪಂದನ ಅವರು ಕೂಡ ಹೃದಯಘಾತಕ್ಕೆ ಒಳಗಾಗಿ ಮೃತಪಟ್ಟಿರುವುದು ನಿಜಕ್ಕೂ ನಂಬಲಾರದ ವಿಷಯ. ಹೆಚ್ಚು ನೋವು ಅವರ ಕುಟುಂಬಕ್ಕೆ ಇದೀಗ ಇದೆ. ಅವರ ಅಗಲಿಕೆ ಮೂಲಕ ಹೆಚ್ಚು ನೋವಾಗಿದೆ ಎಂದು ಹೇಳಬಹುದು. ಅದ್ರಿಂದ ಅವರು ಈಗೀಗ ಸ್ವಲ್ಪ ಹೊರ ಬರಲು ಪ್ರಯತ್ನ ಪಡುತ್ತಿದ್ದಾರೆ.
ಆದ್ರೆ ಆ ನೋವಿನಿಂದ ಇನ್ನೂ ಯಾರು ಹೊರಬಂದಿಲ್ಲ. ಹೀಗಿರುವಾಗ ಸಾಮಾಜಿಕ ಜಾಲತಾಣದಲ್ಲಿ ಇವರ ನಿಧನದ ಬಗ್ಗೆ ಮತ್ತು ಒಂದಕ್ಕೊಂದು ಸಂಬಂಧ ಇಲ್ಲದ ಹಾಗೆ ಕೆಲ ವಿಡಿಯೋಗಳು ಹರಿದಾಡುತ್ತಿವೆ. ಹಾಗಂತೆ, ಹೀಗಂತೆ ಎಂಬುದಾಗಿ ಅವರೇ ಇವರಿಗೆ ಹೇಳಿದ್ದಾರೆ ಎಲ್ಲಾ ವಿಷಯವನ್ನು ಎಂಬಂತೆ ಕೆಲವರು ವಿಡಿಯೋ ಮಾಡುತ್ತಿದ್ದಾರೆ. ಅದರ ಸಾಲಿಗೆ ಈ ವಿಡಿಯೋ ಕೂಡ ಸೇರುತ್ತದೆ ಎಂದು ಹೇಳಬಹುದು. ಹೌದು ಈ ಈಡಿಗ ಸಮುದಾಯದ ಪ್ರಣವನಂದ ಸ್ವಾಮೀಜಿ ಅವರು ಈ ಸ್ಪಂದನ ಸಾವಿನ ಬೆನ್ನಲ್ಲೇ ಇವರಿಗೂ ಹಾಗೂ ರಾಜ್ ಕುಟುಂಬಕ್ಕೂ ಏನೋ ಕಂಟಕ ಇದೆ ಎಂಬಂತೆ ಅಂದು ಹೇಳಿದ್ದರು ಎಂದು ಈ ಲೇಖನದ ವಿಡಿಯೋದಲ್ಲಿ ಹೇಳಿದ್ದಾರೆ.
ಅತಿ ಸಣ್ಣ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗಿ ಸಾವನ್ನಪ್ಪುತ್ತಾರೆ ಎಂದರೆ ಅಷ್ಟಮಂಗಳ ಹಾಕಿ ಪ್ರಶ್ನೆ ಕೇಳಬೇಕು. ಡಾಕ್ಟರ್ ರಾಜಕುಮಾರ್ ಕುಟುಂಬಕ್ಕೆ ಏನಾದ್ರೂ ಕಂಟಕ ಇದೆಯಾ ಎಂಬುದಾಗಿ ಪ್ರಶ್ನೆ ಕೇಳಿ ನೋಡಬೇಕು. ಅತ್ತ ಕೇರಳದ ತಾಂತ್ರಿಕ ಸ್ವಾಮಿಗಳ ಹತ್ತಿರ ಇದನ್ನು ನಾವು ಬಗೆಹರಿಸಿಕೊಳ್ಳಬೇಕು, ಇದರ ಬಗ್ಗೆ ನಾನು ಈಗಾಗಲೇ ಶಿವರಾಜಕುಮಾರ್ ಅವರ ಹತ್ತಿರ ಮಾತನಾಡಿದ್ದೇನೆ, ಎಲ್ಲಾ ಉಸ್ತುವಾರಿಯನ್ನು ನಾನು ತೆಗೆದುಕೊಳ್ಳುತ್ತಿದ್ದೇನೆ.
42 ದಿನದ ಬಳಿಕ ಕೇರಳದಲ್ಲಿ ಅಷ್ಟಮಂಗಳ ಪ್ರಶ್ನೆ ಹಾಕಿ ಇದಕ್ಕೆಲ್ಲ ಏನು ಕಾರಣ ಎಂಬುದಾಗಿ ತಿಳಿದುಕೊಳ್ಳಲಿದ್ದೇವೆ ಎಂಬಂತೆ ಗುರೂಜಿ ಹೇಳಿದ್ದಾರೆ ಎಂದು ಈ ವಿಡಿಯೋ ಮೂಲಕ ಸುದ್ದಿಯನ್ನ ಬಿತ್ತರಿಸುತ್ತಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ, ಈ ವಿಡಿಯೋದ ಮಾಹಿತಿ ಬಗ್ಗೆ ನಿಮ್ಮದೇ ಆದ ಮಾತಿನಲ್ಲಿ ಕಮೆಂಟ್ ಮಾಡಿ, ಒಂದು ವೇಳೆ ಡಾಕ್ಟರ್ ರಾಜಕುಮಾರ್ ಕುಟುಂಬ ಅಥವಾ ಸ್ಪಂದನ ಅವರನ್ನು ಕಳೆದುಕೊಂಡಿರುವ ನಟ ವಿಜಯ್ ಅವರ ಕುಟುಂಬ ಆಗಲಿ, ಇಂತಹ ಸುದ್ದಿಗಳು ಅವ್ರನ್ನ ಇನ್ನೆಷ್ಟು ನೋವಿಗೆ ಒಳಗಾಗುವಂತೆ ಮಾಡುತ್ತವೆ ಎಂಬುವ ಸಣ್ಣ ಅರಿವು ಇಲ್ಲದೆ ಈ ರೀತಿ ಸುಳ್ಳು ಸುದ್ದಿಗಳನ್ನು ಕೆಲವರು ಹಬ್ಬಿಸುತ್ತಿದ್ದಾರೆ. ಅವರನ್ನ ನೀವೇ ತರಾಟೆಗೆ ತೆಗೆದುಕೊಳ್ಳಿ, ಈ ರೀತಿ ಸುಳ್ಳು ಸುದ್ದಿಯ ವಿಡಿಯೋ ಹಬ್ಬಿಸಿದಂತೆ ಕಾಳಜಿ ವಹಿಸಿ ಧನ್ಯವಾದಗಳು...