'ಕ್ರಾಂತಿ' ಪ್ರಚಾರದ ವೇಳೆ ದರ್ಶನ್ ಮೇಲೆ ಚಪ್ಪಲಿ ಎಸೆದ ಕಿಡಿಗೇಡಿ! ವಿಡಿಯೋ ವೈರಲ್ ಇದು ಎಷ್ಟು ಸರಿ ?
ಮೊನ್ನೆಯಷ್ಟೇ ದರ್ಶನ ಅವರು ಕ್ರಾಂತಿ ಚಿತ್ರ ದ ಮೊದಲ ಹಾಡನ್ನು ಮೈಸೂರಿನಲ್ಲಿ ಬಿಡುಗಡೆ ಮಾಡಿದ್ದರು . ನಂತರ ಅವರು ಹೊಸಪೇಟೆ ಯಲ್ಲಿ ಎರಡನೇ ಹಾಡನ್ನು ಬಿಡುಗಡೆ ಮಾಡುವುದಕ್ಕೆ ಸಿದ್ಧರಾಗಿದ್ದರು ಈ ವೇಳೆ ಒಂದು ಅಹಿತಕರ ಘಟನೆ ನಡೆದಿದೆ . ಇದು ಯಾರಿಗೂ ಶೋಭೆ ತರುವಂತದಲ್ಲ . ದಯವಿಟ್ಟು ಯಾವ ನಟರ ಫ್ಯಾನ್ಸ್ ಸಹ ಈ ತರ ನಡೆದು ಕೊಳ್ಳ ಬಾರದು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೊಸಪೇಟೆಯಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಅವರಿಂದಲೇ ಹಾಡನ್ನು ಬಿಡುಗಡೆ ಮಾಡಲು ಮುಂದಾಗಿದ್ದರು. ಮೈಸೂರಿನ ಬಳಿಕ ಹೊಸಪೇಟೆಗೆ ತೆರಳಿ ಅಲ್ಲಿ 'ಕ್ರಾಂತಿ'ಯ ಎರಡನೇ ಹಾಡನ್ನು ರಿಲೀಸ್ ಮಾಡುವುದಾಗಿ ಅನೌನ್ಸ್ ಮಾಡಿದ್ದರು. ಹೀಗಾಗಿ ಇಡೀ ಚಿತ್ರತಂಡ ಹೊಸಪೇಟೆಗೆ ತೆರಳಿತ್ತು. ಈ ವೇಳೆ ಯಾರೋ ಕಿಡಿಗೇಡಿ ದರ್ಶನ್ ಮೇಲೆ ಚಪ್ಪಲಿ ಎಸೆದಿದ್ದಾರೆ. ಇದು ವಿಡಿಯೋದಲ್ಲಿ ಸೆರೆಯಾಗಿದೆ.
ದರ್ಶನ್ ನೋಡಲು ಅವರ ಅಭಿಮಾನಿಗಳು ಅಪಾರ ಸಂಖ್ಯೆಯಲ್ಲಿ ಸೇರಿತ್ತು. ಈ ವೇಳೆ ನೂಕು ನುಗ್ಗಲು ಏರ್ಪಟ್ಟಿತ್ತು. ವೇದಿಕೆ ಮೇಲೆ ನಿಲ್ಲಲೂ ಅವಕಾಶವಿರದಷ್ಟು ಅಭಿಮಾನಿಗಳು ಸೇರಿದ್ದರು. ಇನ್ನೇನು ರಚಿತಾ ರಾಮ್ ಮಾತಾಡಲು ಮುಂದಾಗಿದ್ದರಷ್ಟೇ. ಅದೇ ವೇಳೆ ದರ್ಶನ್ ಕೂಡ ಮುಂದೆ ಬಂದರು. ಆ ವೇಳೆ ದರ್ಶನ್ ಮೇಲೆ ಚಪ್ಪಲಿ ಬಿದ್ದಿದೆ. ಕಿಡಿಗೇಡಿಗಳ ಈ ಕೃತ್ಯ ಕ್ಯಾಮರಾದಲ್ಲಿ ಸೆರೆಯಾಗಿದ್ದು, ವಿಡಿಯೋ ನೋಡಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ. ( video credit : halli katte )