ದುನಿಯಾ ವಿಜಯ್ ಅವರ ಸೌಜನ್ಯ ಕುರಿತ ಈ ಆಡಿಯೋ ಈಗ ಬಾರಿ ವೈರಲ್..! ನಾನು ಹಿಂದೂ ವಿರೋಧಿ ನಾ ಎಂದು ಹೇಳಿದ್ದ ಯಾಕೆ ?

ದುನಿಯಾ ವಿಜಯ್ ಅವರ ಸೌಜನ್ಯ ಕುರಿತ ಈ ಆಡಿಯೋ ಈಗ ಬಾರಿ ವೈರಲ್..!  ನಾನು ಹಿಂದೂ ವಿರೋಧಿ ನಾ ಎಂದು ಹೇಳಿದ್ದ ಯಾಕೆ ?

ರಾಜ್ಯದಲ್ಲಿ ಕಳೆದ ಕೆಲವು ವಾರಗಳಿಂದ ಧರ್ಮಸ್ಥಳ ಸೌಜನ್ಯ ಸಾವಿನ ಪ್ರಕರಣದಲ್ಲಿ ಹೆಚ್ಚು ಚರ್ಚೆಗಳು ನಡೆಯುತ್ತಿವೆ. ಹೌದು ಸೌಜನ್ಯ ಸಾವಿಗೆ ಕಾರಣ ಯಾರು ಅವಳನ್ನು ಅಪಹರಿಸಿ ಮನಸ್ಸು ಇಚ್ಛೆ ಬಂದಂತೆ ಅ ಮಗುವಿಗೆ ಹೆಚ್ಚು ನೋವನ್ನು ನೀಡಿ ಆಕೆ ಪ್ರಾಣವನ್ನು ತೆಗೆದವರು ಯಾರು ಎಂಬುದಾಗಿ ಇಂದಿಗೂ ಕೂಡ ಚರ್ಚೆ ನಡೆಯುತ್ತಿದೆ. ಆ ಅಪರಾಧ ಯಾರು ಸೌಜನ್ಯ ಸಾವಿಗೆ ಕಾರಣರಾದವರು ಯಾರು ಎಂಬುದಾಗಿ ಹೆಚ್ಚು ಮಾತುಗಳು ಕೇಳಿ ಬಂದಿದ್ದು, ಈ ಪ್ರಕರಣದ ಕುರಿತು ಸುಮಾರು 11 ವರ್ಷಗಳ ಕಾಲ ಸಂತೋಷ ರಾವ್  ಎನ್ನುವವರು ಕೇಸ್ ಗೆ ಸಂಬಂಧ ಪಟ್ಟಿದ್ದರು. ಹಾಗೆ 7 ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು.

ಆದರೆ ಇತ್ತೀಚೆಗೆ ಈ ಕೇಸಿಗೆ ಸಂತೋಷ್ ಅವರ ಪರ ಯಾವುದೇ ಸಾಕ್ಷಿಗಳು ಸಿಗದ ಕಾರಣಕ್ಕಾಗಿ ಇವರನ್ನು ಬಿಡುಗಡೆ ಮಾಡಲಾಗಿದೆ. ಇದೇ ಹಿನ್ನೆಲೆಯಲ್ಲಿ ಹೆಚ್ಚು ಸಾಮಾಜಿಕ ಜಾಲತಾಣದಲ್ಲಿ ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆಗೆ ನ್ಯಾಯ ಸಿಗಬೇಕು ಎಂದು ಹೆಚ್ಚು ಕಡೆ ಹೋರಾಟ ನಡೆಸುತ್ತಿದ್ದಾರೆ. ಹೀಗಿರುವ ವೇಳೆ ನಟ ದುನಿಯಾ ವಿಜಯ್ ಅವರು ಸೌಜನ್ಯಾಳ ಪ್ರಕರಣದಲ್ಲಿ ಈಗ ಎದ್ದು ಬಂದಿರುವ ಕೆಲ ಮಾತು ಹಾಗೂ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ವರದಿಗಳು ಯವುಗಳು ಸಹ ಆಕೆಗೆ ನ್ಯಾಯವನ್ನು ಕೊಡಿಸಲು ಆಗಲಿಲ್ಲ. ಅಸಲಿಗೆ ಆ ಸಾಕ್ಷ್ಯಗಳು ಈಗ ನಿಜಕ್ಕೂ ಇದ್ದಾವೆಯೆ ಎಂಬ ಪ್ರಶ್ನೆ ಎದ್ದಿದೆ. ಈ ಕುರಿತು ಆ ಮಗುವಿಗೆ ಅನ್ಯಾಯ ಆಗಿದೆ.  

ಆಕೆಗೆ ನ್ಯಾಯ ಸಿಗಬೇಕು ಎಂದು ನಾನು ಮಹತ್ತರ ಒಂದು ನಿರ್ಧಾರ ಕೈಗೊಳ್ಳಲಿದ್ದೇನೆ. ಅದುವೇ ಆಕೆಗೆ ನ್ಯಾಯ ಸಿಗುವವರೆಗೂ ನಾನು ಧರ್ಮಸ್ಥಳದ ನಮ್ಮ ಮನೆ ದೇವರು ಮಂಜುನಾಸ್ವಾಮಿ ದರ್ಶನವನ್ನು  ಮಾಡುವುದಿಲ್ಲ ಅಲ್ಲಿಗೆ ಹೋಗುವುದಿಲ್ಲ ಎಂದಿದ್ದರು. ಇದರ ಕಾರಣ ಈಗ ಒಂದು ಆಡಿಯೋ ಕಾಲ್ ಈಗ ಹೊರಕ್ಕೆ ಬಂದಿದೆ. ಹೌದು ದುನಿಯಾ ವಿಜಯ್ ಅವರ ಬಳಿ ಈ ಪ್ರಶ್ನೆ ಮಾಡಿದಾಗ, ಇದೊಂದು ತಾಯಿ ಮಗು ಸಂಬಂಧ. ಕೆಲವರು ನಾನು ಹಿಂದೂ ವಿರೋಧಿ ಮತ್ತು ಧರ್ಮವನ್ನ ವಿರೋಧ ಮಾಡುತ್ತೇನೆ ಎಂದು ಅಂದು ಕೊಂಡಿದ್ದಾರೆ. ಆ ರೀತಿ ಮಾತುಗಳು ನನಗೆ ಕೇಳಿ ಬಂದಿವೆ. ಹಾಗಾಗಿ ನಮ್ಮ ಅಮ್ಮ ನಾವು ಸಣ್ಣವರು ಇದ್ದಾಗ ಧರ್ಮಸ್ಥಳದಲ್ಲೆ ಮುಡಿ ಕೊಡಿಸಿಕೊಂಡು ಬರುತ್ತಿದ್ದರು. ಏನಾದ್ರೂ ಪ್ರಮಾಣ ಮಾಡುವಾಗ ಮಂಜುನಾಥಸ್ವಾಮಿ ಮೇಲೆ ಪ್ರಮಾಣ ಮಾಡು ಅಂಥ ಹೇಳುತ್ತಿದ್ದರು, ಅಂದ್ರೆ ದೇವರ ಮೇಲೆ ಪ್ರಮಾಣ ಮಾಡುವುದು ಅಂದ್ರೆ ಸತ್ಯ ಇದ್ದಂತೆ. ಆ ಸತ್ಯ ಆ ಮಗುವಿನ ವಿಚಾರದಲ್ಲಿ ಸುಳ್ಳಾಗಿದೆ. ಹಾಗಾಗಿ ಆ ಮಂಜುನಾಥಸ್ವಾಮಿ ಆ ಮಗುವಿಗೆ ನ್ಯಾಯವನ್ನು ಒದಗಿಸುವ ಕಾರ್ಯ ನಡೆಯಬೇಕು ಎಂದು ನಾನು ದೇವರ ಬಳಿ ಬೇಡಿಕೆ ಇಟ್ಟಿದ್ದೇನೆ. ದೇವರು ಸತ್ಯ ಎಂದು ನಾನು ನಂಬಿದ್ದೇನೆ ನ್ಯಾಯ ಸಿಕ್ಕ ಬಳಿಕ ಧರ್ಮಸ್ಥಳಕ್ಕೆ ಭೇಟಿ ಕೊಡುತ್ತೇನೆ ಎಂದು ನಿರ್ಧಾರ ಮಾಡಿದೆ ಎನ್ನುತ್ತಾರೆ ದುನಿಯಾ ವಿಜಯ್.. ಇಲ್ಲಿದೆ ಆಡಿಯೋ ಕ್ಲಿಪ್ ನೋಡಿ ಶೇರ್ ಮಾಡಿ ಧನ್ಯವಾದಗಳು...