ಸ್ಪಂದನ ಅವರ ಫೋಟೋ ಮುಂದೆ ಕುಳಿತು ಅಳುತ್ತಿರುವ ಶ್ವಾನ..! ಶ್ವಾನದ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತೆ

ಸ್ಪಂದನ ಅವರ ಫೋಟೋ ಮುಂದೆ ಕುಳಿತು ಅಳುತ್ತಿರುವ ಶ್ವಾನ..! ಶ್ವಾನದ ಪರಿಸ್ಥಿತಿ ನೋಡಿ ಕಣ್ಣೀರು ಬರುತ್ತೆ

ಸ್ಪಂದನ ಅವರು ಹೃದಯಘಾತದಿಂದ ಮೃತಪಟ್ಟಿದ್ದಾರೆ. ಹೌದು ಇಂದು ಅವರ ಕುಟುಂಬಸ್ಥರು ನೋವಿನಲ್ಲಿಯೇ ಸ್ಪಂದನಾರ ಅಗಲಿಕೆ ನಡುವೆ ಅವರ ವೈಕುಂಠರಾದನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅವರ ಪುಣ್ಯ ತಿಥಿ ನಡೆಸುತ್ತಿದ್ದಾರೆ..ಇಂದು ಬೆಳಗ್ಗೆ ಈಗಾಗಲೇ ಶಾಂತಿ ಹೋಮ ಮಾಡಿಸಿರುವ ವಿಜಯ ರಾಘವೇಂದ್ರ ಅವರ ಕುಟುಂಬಸ್ಥರು, ಇಂದು ಮದ್ಯಾಹ್ನ ಒಂದು ಗಂಟೆಗೆ ಕೋದಂಡರಾಮ ಕಬಡ್ಡಿ ಯಂಗ್ಸ್ಟರ್ ಸ್ಟೇಡಿಯಂ ನಲ್ಲಿ ಊಟದ ವ್ಯವಸ್ಥೆ ಕೂಡ ಮಾಡಿದ್ದಾರೆ. ಸ್ಪಂದನ ಅವರು ಇದ್ದಕ್ಕಿದ್ದಂತೆ ಸಣ್ಣ ವಯಸ್ಸಿಗೆ ದೂರವಾಗಿರುವುದು ನಿಜಕ್ಕೂ ಯಾರಿಗೂ ಈ ವಿಷಯವ ಅರಗಿಸಿಕೊಳ್ಳಲು ಆಗುತ್ತಿಲ್ಲ.

ಮೊನ್ನೆ ಮೊನ್ನೆ ಇದ್ದವರು ಇಂದು ಇಲ್ಲ ಎಂದರೆ ನಿಜಕ್ಕೂ ಎಂತಹವರಿಗಾದರೂ ನೋವು ಆಗುತ್ತದೆ. ಅದು ಇಷ್ಟು ಸಣ್ಣ ವಯಸ್ಸಿಗೆ ಹೃದಯಘಾತಕ್ಕೆ ಒಳಗಾಗಿ ಇದ್ದಕಿದ್ದಂತೆ ದೂರವಾಗುತ್ತಾರೆ ಎಂದರೆ, ಈ ಜೀವನದ ಮೇಲೆ ನಾವು ಯಾವ ನಂಬಿಕೆ ಇಡಬೇಕೆಂದು ಕೆಲವರ ಅಭಿಪ್ರಾಯ ಆಗಿದೆ. ಸ್ಪಂದನ ಅವರನ್ನು ಜೀವಕ್ಕೆ ಜೀವ ಎಂಬಂತೆ ಪ್ರೀತಿ ಮಾಡುತ್ತಿದ್ದ ವಿಜಯ್ ರಾಘವೇಂದ್ರ ಅವರು ಇದೀಗ ಅವರ ಹೆಂಡತಿ ನೆನಪಿನಲ್ಲಿಯೆ ಕಾರ್ಯವನ್ನು ಮಾಡುತ್ತಿದ್ದಾರೆ.. ಇದು ನೋವಿನ ವಿಷಯವೇ ಸರಿ. ಅಷ್ಟು ಮುದ್ದಾಗಿದ್ದ ಜೋಡಿಯನ್ನು ದೇವರು ಬೇರೆ ಬೇರೆ ಮಾಡಿಬಿಟ್ಟ.. ಕೇವಲ ಮನುಷ್ಯರಿಗೆ ಮಾತ್ರವಲ್ಲದೆ ಪ್ರಾಣಿಗಳು ಕೂಡ ಇಂಥಹ ಸಂದರ್ಭದಲ್ಲಿ ನೋವನ್ನ ತೋಡಿಕೊಳ್ಳುತ್ತವೆ. ಹೌದು ಸ್ಪಂದನ ಅವರು ಅವರ ಮನೆಯಲ್ಲಿ ಸಾಕಿದ್ದ ಶ್ವಾನದ ಪರಿಸ್ಥಿತಿ ಇದೀಗ ಏನಾಗಿದೆ ಎನ್ನುವ ಮಾಹಿತಿ ಈಗ ಲಭ್ಯವಾಗಿದ್ದು, ತಮ್ಮ ಮನೆ ಯಜಮಾನಿ ಕಾಣಿಸದೆ ಇದ್ದ ವೇಳೆಯೇ ಜೋರಾಗಿ ಬೊಗಳುತ್ತಾ ಕಣ್ಣೀರು ಹಾಕಿತ್ತು ಇದೆ ಶ್ವಾನ.     

ನಂತರ ಸ್ಪಂದನ ಅವರ ಶವವನ್ನು ತಂದು ಅಂತಿಮ ದರ್ಶನಕ್ಕೆ ಇಟ್ಟಾಗ ಬೋನಿನಿಂದ ಹೊರಬಿಡುವಂತೆ ಜೋರಾಗಿ ಒದರಿತ್ತು, ನಂತರ ಶ್ರೀಮುರಳಿ ಅವರು ಅದನ್ನು ತೆಗೆದುಕೊಂಡು ಬಂದು ಸ್ಪಂದನ ಅವರ ಮೃತ ದೇಹದ ಮುಂದೆ ಬಿಟ್ಟರು. ಆಗ ಮೂರು ಸುತ್ತು ಹಾಕಿ ಅವರ ಎದುರುಗಡೆ ಕುಳಿತು ಕಣ್ಣೀರು ಹಾಕಿದ್ದ ದೃಶ್ಯ ಅಂದು ನೀವು ನೋಡಿದ್ದೀರಿ. ಇದೀಗ ಸ್ಪಂದನ ಅವರ ಅಂತ್ಯಕ್ರಿಯೆ ಮುಗಿದಿದ್ದು ಸ್ಪಂದನ ಅವರ ಫೋಟೋ ಮುಂದೆ ಕುಳಿತು ಕಣ್ಣೀರು ಹಾಕುತ್ತತಿದೆಯಂತೆ ಅದೇ ಶ್ವಾನ. 

ಊಟ ಮಾಡದೆ ಎರಡು ದಿನದಿಂದ ಶ್ವಾನ   ಸ್ಪಂದನ ಅವರ ಫೋಟೋ ಮುಂದೆ ಕುಳಿತು ಕಣ್ಣೀರು ಹಾಕುತ್ತಿದೆ ಎಂದು ತಿಳಿದುಬಂದಿದೆ. ಇಲ್ಲಿದೆ ನೋಡಿ ವಿಡಿಯೋ. ವಿಡಿಯೋ ನೋಡಿದಾಗ ಮನುಷ್ಯನಿಗೆ ಶ್ವಾನ ತೋರುವ ಪ್ರೀತಿ ನಿಜಕ್ಕೂ ಗ್ರೇಟ್ ಎಂದಿನಿಸುತ್ತದೆ ಈ ವಿಡಿಯೋ ನೋಡಿದರೆ ಕಣ್ಣಂಚಲ್ಲಿ ನೀರು ಬರುತ್ತದೆ ಒಮ್ಮೆ ನೋಡಿ. ಹಾಗೆ ವಿಡಿಯೋ ಶೇರ್ ಮಾಡಿ. ವಿಜಯ್ ಪತ್ನಿ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು..

( video credit : karunada suddi )