ಕಂಠಿ ಪಾತ್ರ ಸಿಗುವದಕ್ಕೆ ಕಾರಣಳಾದ ಆ ಹುಡುಗಿಯನ್ನು ನಾನು ಯಾವುತ್ತು ಮರೆಯೋದಿಲ್ಲ ಅಂದ ಧನುಷ್ ಯಾರದು ನೋಡಿ ?

ಕಂಠಿ ಪಾತ್ರ ಸಿಗುವದಕ್ಕೆ ಕಾರಣಳಾದ ಆ ಹುಡುಗಿಯನ್ನು ನಾನು ಯಾವುತ್ತು ಮರೆಯೋದಿಲ್ಲ ಅಂದ ಧನುಷ್ ಯಾರದು ನೋಡಿ ?

ಪುಟ್ಟಕ್ಕನ ಮಕ್ಕಳು ಧಾರವಾಹಿ ಹೀರೋ ಕಂಠಿ ಪಾತ್ರಧಾರಿಯ ಹೆಸರು ಧನುಷ್. ಧಾರಾವಾಹಿಯಲ್ಲಿನ ನಟನೆ ಮೂಲಕ ಈಗವರು ಮಾತಾಗಿದ್ದಾರೆ. ನಟನೆ ಮೂಲಕ ಗಮನ ಸೆಳೆದಿರುವ ಧನುಷ್ ಗೆ ಈ ಕೆಲವು ಸಿನಿಮಾ ಆಫರ್ ಗಳೂ ಬರುತ್ತಿವೆಯಂತೆ. ಹೀಗಾಗಿ ಇವರು ಸದ್ಯದಲ್ಲೇ ಬೆಳ್ಳಿ ತೆರೆ ಮೇಲೆ ಕಂಡುಬಂದರೂ ಅಚ್ಚರಿಯಿಲ್ಲ.ಈ ಹೊಸ ಪ್ರತಿಭೆ ಧನುಷ್‌ ಎನ್‌.ಎಸ್‌. ಸಿವಿಲ್‌ ಎಂಜಿನಿಯರಿಂಗ್‌ ಪದವಿಧರ. ಶಿಕ್ಷಣ ಮುಗಿದಿದ್ದೇ ತಡ ನೇರವಾಗಿ ಬಣ್ಣದ ಲೋಕಕ್ಕೆ ಧುಮುಕಿದರು. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಟಿಸುವುದಕ್ಕೂ ಮುನ್ನ ಧನುಷ್‌, 'ಅನಿರೀಕ್ಷಿತ', '18+2' ಕಿರುಚಿತ್ರಗಳನ್ನು, 'ನನ್ನ ನಗು' ಹಾಡಿನ ಆಲ್ಬಂ ಮಾಡಿದ್ದರು.

ಕೋಲಾರ ಜಿಲ್ಲೆಯ ಸಂತೆಹಳ್ಳಿ ಧನುಷ್‌ ಹುಟ್ಟೂರು. ತಂದೆ ಉದ್ಯಮಿ, ರಾಜಕೀಯ ಪಕ್ಷವೊಂದರ ಜಿಲ್ಲಾ ಮಟ್ಟದ ಪದಾಧಿಕಾರಿ. ಎಂಜಿನಿಯರಿಂಗ್ ಮುಗಿಸಿದ್ದ ಧನುಶ್ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿ ಆಡಿಷನ್‌ನಲ್ಲಿ ಭಾಗವಹಿಸಿ ಧಾರಾವಾಹಿಗೆ ಆಯ್ಕೆ ಆಗಿ, ಈಗ ಧಾರಾವಾಹಿಯ ಪ್ರಮುಖ ಪಾತ್ರಗಳಲ್ಲಿ ಒಬ್ಬರಾಗಿದ್ದಾರೆ.

ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ಕಂಠಿ ಪಾತ್ರದಲ್ಲಿ ನಟಿಸಲು ಧನುಷ್ ಅವರು ಹೇಗೆ ಅವಕಾಶ ಪಡೆದರು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಈ ಸಂಬಂಧದಲ್ಲಿ, ಅವರು ಧಾರಾವಾಹಿಗಳಲ್ಲಿ ನಟಿಸಲು ಅವಕಾಶ ಪಡೆಯಲು ಆಡಿಷನ್‌ಗಳಿಗೆ ಹೋಗುತ್ತಿದ್ದಾಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಒಂದು ಬಾರಿ, ಆಡಿಷನ್‌ಗೆ ಹೋಗಿದ್ದಾಗ, ಅಲ್ಲಿ ಮತ್ತೊಬ್ಬ ಹುಡುಗಿ ಕೂಡಾ ಬಂದಿದ್ದರು. ಅವರಿಬ್ಬರ ನಡುವೆ ಸ್ನೇಹ ಬೆಳೆದಿತು. ಆಕೆ ಆಡಿಷನ್‌ಗಳಿಗೆ ಕರೆ ಬಂದಾಗಲೆಲ್ಲಾ ಧನುಷ್ ಅವರಿಗೆ ಸುಳಿವು ನೀಡುತ್ತಿದ್ದರು.

ಧನುಷ್ ಅವರು, "ಒಮ್ಮೆ ಜೆಎಸ್ ಪ್ರೊಡಕ್ಷನ್ಸ್‌ನಿಂದ ಆಡಿಷನ್‌ಗೆ ಕರೆ ಬಂದಾಗ, ಆಕೆ ನೀಡಿದ ಸುಳಿವಿನಿಂದ ನಾನು ಆ ಅವಕಾಶವನ್ನು ಪಡೆದಿದ್ದೇನೆ. 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಕಂಠಿ ಪಾತ್ರದಲ್ಲಿ ನಟಿಸಲು ಅವಕಾಶ ದೊರೆತಿದ್ದು, ಆಕೆಯ ಕಾರಣದಿಂದಲೇ. ಕಂಠಿ ಪಾತ್ರ ಸಿಗುವದಕ್ಕೆ ಕಾರಣಳಾದ ಆ ಹುಡುಗಿಯನ್ನು ನಾನು ಯಾವುತ್ತು ಮರೆಯೋದಿಲ್ಲ ಅಂದ ಧನುಷ್.

ಆದರೆ, ಆ ಹುಡುಗಿಯ ಹೆಸರನ್ನು ಧನುಷ್ ಬಹಿರಂಗಪಡಿಸಿಲ್ಲ. ಈ ವಿಷಯವನ್ನು ಅವರು ಸಾಮಾಜಿಕ ಮಾಧ್ಯಮ ಚಾನೆಲ್‌ಗಳಿಗೆ ನೀಡಿದ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.

ಕೋಲಾರ ಭಾಗದ ಭಾಷೆಗೂ ಮಂಡ್ಯ ಭಾಷೆಗೂ ಸಾಮ್ಯತೆ ಇರುವುದರಿಂದ ಈ ಧಾರಾವಾಹಿಯಲ್ಲಿ ಮಂಡ್ಯದ ಭಾಷೆ ಬಳಸುವುದು ಧನುಷ್‌ ಅವರಿಗೆ ಸುಲಭವಾಯಿತಂತೆ. ಧನುಷ್ ಈ ಮೊದಲು ಸಾಕಷ್ಟು ಭಾರಿ ಆಡಿಷನ್ ನೀಡಿದ್ದರೂ ಅದೃಷ್ಟ ಕೈಹಿಡಿದಿರಲಿಲ್ಲ. ಅದೃಷ್ಟವಶಾತ್ ಹಾಗೂ ಪ್ರತಿಭೆಯ ಕಾರಣಕ್ಕೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಗೆ ಆಯ್ಕೆಯಾದರು. ಇದು ಇವರ ಮೊದಲ ಧಾರಾವಾಹಿಯ ಆದರೂ ಅಚ್ಚುಕಟ್ಟಾಗಿ ನಟನೆ ಮಾಡುತ್ತಿದ್ದಾರೆ.