ದರ್ಶನ್ ಸುದೀಪ್ ಇಷ್ಟರಲ್ಲೇ ಒಂದಾಗುತ್ತಾರೆ ಎಂಬ ವಿಷಯ ಕುರಿತು ವಿಜಯಲಕ್ಷ್ಮಿ ಹೇಳಿದ್ದೇನು..?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಕಿಚ್ಚ ಸುದೀಪ್ ಅವರು ಮಾತನಾಡುವುದನ್ನು ಬಿಟ್ಟು ಆರು ವರ್ಷಗಳು ಮುಗಿದಿವೆ..ಇವರಿಬ್ಬರು ಒಂದೆ ವೇದಿಕೆ ಮೇಲೆ ಆರು ವರ್ಷಗಳಿಂದ ಕಾಣಿಸಿಕೊಂಡಿದ್ದನ್ನ ನಾವು ನೋಡಲೇ ಇಲ್ಲ..ಅದಕ್ಕೆ ಕಾರಣ ಆರು ವರ್ಷದ ಹಿಂದೆ ಅವರಿಬ್ಬರ ನಡುವೆ ಆದಂತಹ ಕೆಲವು ಮನಸ್ತಾಪದ ವಿಚಾರಗಳು ಎಂದು ಹೇಳಬಹುದು.. ಹೌದು ಕಿಚ್ಚ ಸುದೀಪ್ ಮತ್ತು ದರ್ಶನ್ ಬೇರೆ ಬೇರೆ ಆದಾಗ ಅವರಿಬ್ಬರ ಅಭಿಮಾನಿ ಬಳಗದವರು ತುಂಬಾನೇ ನೊಂದುಕೊಂಡರು. ಜೊತೆಗೆ ಇವರಿಬ್ಬರನ್ನು ಮತ್ತೆ ಮೊದಲಿನಂತೆ ನಾವು ಯಾವಾಗ ನೋಡಬೇಕು, ಇವರಲ್ಲಿಯ ಕುಚುಕು ಸ್ನೇಹವೂ ಮತ್ತೆ ಯಾವಾಗ ಮುಂದುವರೆಯುತ್ತದೆ ಎಂದು ಪ್ರತಿಬಾರಿ ಯಾವುದಾದರೂ ಒಂದು ವಿಚಾರ ಬಂದಾಗ ದರ್ಶನ್ ಮತ್ತು ಸುದೀಪ್ ವಿಚಾರ ಎಂದು ಕೇಳಿದಾಗ ಇವರೆಲ್ಲ ಕಮೆಂಟ್ ಹಾಕುತ್ತಿದ್ದರು.
ಇವರಿಬ್ಬರು ಮತ್ತೆ ಯಾವಾಗ ಮೊದಲಿನಂತೆ ಕುಚುಕು ಗೆಳೆಯರಂತೆ ಇರುತ್ತಾರೆ ಎಂದು ಚಿಂತನೆ ನಡೆಸಿದ್ದರು.. ಹೌದು ಮೊನ್ನೆಯಷ್ಟೇ ಸುಮಲತಾ ಅವರ ಹುಟ್ಟುಹಬ್ಬ ಕಾರ್ಯಕ್ರಮ ಜರುಗಿದೆ. ಬರ್ತಡೇ ಕಾರ್ಯಕ್ರಮದಲ್ಲಿ ದರ್ಶನ್ ಮತ್ತು ಸುದೀಪ್ ಒಟ್ಟಿಗೆ ಕಾಣಿಸಿಕೊಂಡಿದ್ದು ಅದು ಒಂದೇ ವೇದಿಕೆಯಲ್ಲಿ ನೋಡಿ ಅಭಿಮಾನಿಗಳಿಗೆ ಎಲ್ಲಿಲ್ಲದ ಸಂತಸ ಸಹ ಆಗಿದೆ. ಹಾಗೆ ಇವರಿಬ್ಬರು ಮತ್ತೆ ಒಂದಾಗುತ್ತಾರೆ ಎಂದು ಈಗ ಎದುರು ನೋಡುತ್ತಿದ್ದಾರೆ. ಹೀಗಿರುವಾಗ ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ಅದೇ ಪಾರ್ಟಿಯಲ್ಲಿ ಆತ್ಮೀಯರ ಬಳಿಯಲ್ಲಿ ಇದೆ ಸ್ನೇಹ ವಿಷಯ ಕುರಿತು ಕೆಲ ವಿಚಾರ ಹಂಚಿಕೊಂಡಿದ್ದಾರಂತೆ.
'ಸುದೀಪ್ ಅವರ ಕುಟುಂಬ ಮತ್ತು ನಮ್ಮ ಕುಟುಂಬ ಯಾವತ್ತಿಗೂ ನಾವು ಬೇರೆ ಬೇರೆ ಅಂದುಕೊಂಡೆ ಇಲ್ಲ, ಕುಟುಂಬ ಅಂದ ಮೇಲೆ ಒಂದು ಮಾತು ಬರುತ್ತದೆ, ಒಂದು ಮಾತು ಹೋಗುತ್ತದೆ, ಅವರಿಬ್ಬರ ಪರ್ಸನಲ್ ವಿಚಾರಗಳನ್ನು ನಾನು ಕೆದುಕುವುದಿಲ್ಲ, ಅದು ಅವರಿಗೆ ಬಿಟ್ಟಿದ್ದು, ಎಲ್ಲದಕ್ಕೂ ಸಮಯ ಬರಬೇಕು, ಇದೀಗ ಆ ಸಮಯ ಬರುವ ಸಾಧ್ಯತೆ ಇದೆ' ಎಂದು ಅವರ ಆಪ್ತ ವಲಯದಲ್ಲಿ ದರ್ಶನ್ ಸುದೀಪ್ ಒಂದಾಗುತ್ತಾರೆಂಬ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎನ್ನಲಾಗಿ ಈ ಒಂದು ವಿಡಿಯೋದಲ್ಲಿ ತಿಳಿಸಲಾಗಿದೆ. ನಿಮಗೂ ನಟ ದರ್ಶನ್ ಅವರು ಮತ್ತು ಸುದೀಪ್ ಅವರು ಆದಷ್ಟು ಬೇಗನೆ ಒಂದಾಗಬೇಕು ಎಂದೆನಿಸಿದ್ದಲ್ಲಿ ತಪ್ಪದೆ ಈ ವಿಡಿಯೋ ನೋಡಿ. ಹಾಗೆ ವಿಡಿಯೋಗೆ ಒಂದು ಮೆಚ್ಚುಗೆ ಕೊಡಿ. ಮಾಹಿತಿಯನ್ನು ಶೇರ್ ಸಹ ಮಾಡಿ ಧನ್ಯವಾದಗಳು
( video credit : kannada taja suddi ).