ದ್ವೇಷ ಮರೆತು ಒಂದಾದ ದರ್ಶನ್-ಸುದೀಪ್? ಸುಮಲತಾ ಬರ್ತ್‌ಡೇ ಪಾರ್ಟಿಯಲ್ಲಿ ಕಿಚ್ಚ-ದಚ್ಚು!
ಕನ್ನಡ ಚಿತ್ರರಂಗದ ದಿಗ್ಗಜರ ಸಿನಿಮಾಗಳನ್ನು ನೋಡಿಕೊಂಡು ಅವರ ಜೊತೆಗೆ ಸಿನಿಮಾ ಮಾಡಿ ಬೆಳೆದ ಕಿಚ್ಚ ಸುದೀಪ್ ಹಾಗೂ ದರ್ಶನ್ ಅವರು ಇದೀಗ ಕನ್ನಡ ಚಿತ್ರರಂಗದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದಿದ್ದಾರೆ. ಕೇವಲ ಕನ್ನಡಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ದರ್ಶನ್ ಮತ್ತು ಸುದೀಪ್ ಯಾರೆಂದು ಗೊತ್ತು. ಹೌದು ನಟ ದರ್ಶನ್ ಅವರನ್ನು ಪ್ರೀತಿಯಿಂದ ಅಭಿಮಾನಿಗಳು ಡಿ ಬಾಸ್ ಎಂದು ಕರೆಯಲುಂಟು. ಕಿಚ್ಚ ಸುದೀಪ್ ಅವರು ಕೂಡ ಅವರದ್ದೇ ಆದ ಅತಿ ದೊಡ್ಡ ಅಭಿಮಾನಿ ಬಳಗ ಹೊಂದಿರುವ ನಟ..ಇವರಿಬ್ಬರದು ಆರಂಭದಲ್ಲಿ ಇನ್ನೊಬ್ಬರಿಗೆ ಮಾದರಿಯಾಗುವಂತಹ ಸ್ನೇಹವಿತ್ತು. ಆದರೆ ಕಳೆದ ಆರು ವರ್ಷಗಳ ಹಿಂದೆ ಇಬ್ಬರಲ್ಲಿ ಮುನಿಸು ಉಂಟಾಗಿ, ಕಾರಣಾಂತರಗಳಿಂದ ಇಬ್ಬರು ಸ್ನೇಹವನ್ನು ಕಡಿತಗೊ ಳಿಸಿಕೊಂಡರು.
ಆರು ವರ್ಷದಿಂದ ಯಾವುದೇ ಕಾರ್ಯಕ್ರಮದಲ್ಲಿ ಇಬ್ಬರು ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ದರ್ಶನ್ ಮತ್ತು ಸುದೀಪ್ ಆರು ವರ್ಷದ ನಂತರ ಈಗ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದಾರೆ. ಅದು ಏನಂತೀರಾ ಹೌದು ಮುಂದೆ ಓದಿ. ಅಂಬರೀಶ್ ಪತ್ನಿ ಸುಮಲತಾ ಅವರು ಹುಟ್ಟು ಹಬ್ಬ ಆಚರಣೆ ಕಾರ್ಯಕ್ರಮದಲ್ಲಿದ್ದರು. 27 ನೇ ತಾರೀಕು ಅಂದರೆ, ಇಂದು ಅವರ ಹುಟ್ಟುಹಬ್ಬ..ನಿನ್ನೆ ಖಾಸಗಿ ಹೋಟೆಲ್ ಒಂದರಲ್ಲಿ ಹುಟ್ಟು ಹಬ್ಬದ ಸಂಭ್ರಮದಲ್ಲಿದ್ದರು ಸುಮಲತಾ ಅಂಬರೀಶ್.. ಆಗ ಸುದೀಪ್ ಗೂ ಮತ್ತು ದರ್ಶನ್ ಗೂ ಸಹ ಆಹ್ವಾನ ನೀಡಲಾಗಿತ್ತು.
ಅದರಂತೆ ಇಬ್ಬರೂ ಸಹ ಈ ಪ್ರೋಗ್ರಾಂಗೆ ಬಂದಿದ್ದರು. ವೇದಿಕೆ ಮೇಲೆ ಒಟ್ಟಿಗೆ ಕಾಣಿಸಿದ್ದಾರೆ ದಚ್ಚು ಕಿಚ್ಚ. ಅದನ್ನು ನೋಡಿದ ಎಲ್ಲಾ ಅಭಿಮಾನಿಗಳು ಇವರಿಬ್ಬರ ನಡುವಿನ ವೈಮನಸ್ಸು ಇಲ್ಲಿಗೆ ನಿಲ್ಲಲಿ ಹಾಗೇನೆ ಮತ್ತೆ ಮೊದಲಿನಂತೆ ಇವರಿಬ್ಬರೂ ಒಂದಾಗಬೇಕು ಎಂದು ಹಾರೈಸುತ್ತಿದ್ದಾರೆ. ಕಾರ್ಯಕ್ರಮ ಮುಗಿದ ಬಳಿಕ ದಚ್ಚು ಮತ್ತು ಕಿಚ್ಚ ಮಾತನಾಡಿದರ..? ಅದಕ್ಕೆ ಉತ್ತರ ಇಲ್ಲಿದೆ ನೋಡಿ ವಿಡಿಯೋ. ಒಮ್ಮೆ ನೋಡಿ, ಮತ್ತು ದರ್ಶನ್ ಮತ್ತು ಸುದೀಪ್ ಅವರು ಆದಷ್ಟು ಬೇಗ ಈ ಮೂಲಕ ಒಂದಾಗಲಿ ಎಂದು ಕಮೆಂಟ್ ಮಾಡಿ... ( kannada news & kfi insider )