ಯಾವ ಹೀರೋ ಆಗದ ಸಮಯದಲ್ಲಿ ಟೆನ್ನಿಸ್ ಕೃಷ್ಣ ಅವರ ಕಷ್ಟಕ್ಕೆ ಆಗಿದ್ದು ದರ್ಶನ್..! ಎಂಥಾ ಸಹಾಯ ಮಾಡಿದ್ದರು ಗೊತ್ತಾ
ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ಎಂದು ಕರೆಸಿಕೊಳ್ಳುವ ನಟ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಹೌದು ದರ್ಶನ್ ಅವರು ನಟನೆಯಲ್ಲಿ ಈಗಾಗಲೇ ಈಗ ಅತಿ ಎತ್ತರಕ್ಕೆ ಬೆಳೆದಿದ್ದಾರೆ..ದರ್ಶನ್ ಅಭಿನಯದ ಮೂಲಕ ಅತಿ ದೊಡ್ಡ ಅಭಿಮಾನಿಗಳ ಸಾಮ್ರಾಜ್ಯವನ್ನೇ ಕಟ್ಟಿಕೊಂಡಿದ್ದಾರೆ. ಅಭಿಮಾನಿಗಳಿಗೆ ಒಂದು ಕೂಗು ಹಾಕಿದರೆ ಸಾಕು ದರ್ಶನ್ ಅವರ ಯಾವ ಮಾತನ್ನು ಸಹ ಯಾರು ಮೀರುವುದಿಲ್ಲ, ಅಷ್ಟರಮಟ್ಟಿಗೆ ದರ್ಶನ್ ಅವರು ಅಭಿಮಾನಿಗಳನ್ನ ಗಳಿಸಿಕೊಂಡಿದ್ದಾರೆ.
ಹೌದು, ಅಭಿಮಾನಿಗಳ ಕಷ್ಟಗಳಿಗೆ ದರ್ಶನ್ ಸದಾ ಮಿಡಿಯುತ್ತಾರೆ, ಜೊತೆಗೆ ಸ್ಪಂದಿಸುತ್ತಾರೆ. ಸಿನಿಮಾದಲ್ಲಿ ಮಾತ್ರ ನಾವು ಹೀರೋಗಳಲ್ಲ, ನಮ್ಮ ಅಭಿಮಾನಿಗಳು ಕಷ್ಟ ಎಂದಾಗ ಅವರ ಕಷ್ಟಕ್ಕೆ ನಾವು ನಿಲ್ಲಬೇಕು ಎಂದು ಹೇಳುವಂತೆ ಯಾರಿಗೂ ಗೊತ್ತಾಗದ ರೀತಿ ಸಹಾಯ ಮಾಡುತ್ತಾರೆ. ಅದೇ ರೀತಿ ಈಗ ನಟ ದರ್ಶನ್ ಅವರು ಮಾಡಿದಂತಹ ಈ ಕೆಲಸ ಬೆಳಕಿಗೆ ಬಂದಿದೆ.
ದರ್ಶನ್ ಅವರಿಗೆ ಪ್ರಾಣಿಗಳು ಅಂದರೆ ತುಂಬಾನೇ ಇಷ್ಟ. ಎತ್ತುಗಳು, ಕುದುರೆಗಳು, ಶ್ವಾನಗಳು, ಹೀಗೆ ಎಲ್ಲಾ ಪ್ರಾಣಿಗಳ ಮೇಲೆ ದರ್ಶನ್ ಅತೀವವಾದ ಪ್ರೀತಿ ಹೊಂದಿದ್ದಾರೆ. ಅವುಗಳನ್ನ ಸಾಕುತ್ತಾರೆ ಕೂಡ. ದರ್ಶನ್ ಅವರ ಅಭಿಮಾನಿಗಳ ಬಳಿ ಬರುತ್ತಿದ್ದಾರೆ ಎಂದರೆ ಸಾಕು, ಅದೆಷ್ಟು ಸಂಭ್ರಮ ಅವರ ಫ್ಯಾನ್ಸಿಗೆ ಆಗುತ್ತದೆ ಎಂದರೆ, ನಾವು ವಿಸ್ತರಿಸಿ ಅದನ್ನ ಹೇಳಬೇಕಿಲ್ಲ. ನಟ ದರ್ಶನ್ ಅವರನ್ನು ನೋಡುವುದೇ ಒಂದು ಭಾಗ್ಯ ಎನ್ನುವಂತೆ ಅವರ ಅಭಿಮಾನಿಗಳು ಕೂಡ ಹುಚ್ಚರಂತೆ ಅವರನ್ನು ಹಚ್ಚಿಕೊಂಡಿದ್ದಾರೆ. ಪ್ರೀತಿಯಿಂದ ಡಿ ಬಾಸ್ ಅವರನ್ನ ಎಂದು ಕರೆಯಲಾಗುತ್ತದೆ.
ಈ ಸಿನಿಮಾ ರಂಗದಲ್ಲಿ ಕಲಾವಿದರು ವಯಸ್ಸು ಆಗುತ್ತಾ ಆಗುತ್ತಾ ಅವರು ಅಂದುಕೊಂಡಂತೆ ಹೆಚ್ಚು ಅವಕಾಶ ಅವರಿಗೆ ಸಿಗುವುದಿಲ್ಲ. ಒಬ್ಬಬರಿಗೆ ಒಂದು ತರಹ ಕಷ್ಟದ ದಿನಗಳು ಎದುರಾಗುತ್ತವೆ. ಅಂತಹ ಕಷ್ಟದ ದಿನಗಳನ್ನೂ ಎದುರಿಸಿದ ಕಲಾವಿದರ ಸಾಲಿಗೆ ಸೇರುವ ಕನ್ನಡದ ನಮ್ಮ ಕಲಾವಿದರಾದ ಟೆನ್ನಿಸ್ ಕೃಷ್ಣ ಅವರು ಕೂಡ ಒಬ್ಬರು. ಹೌದು ಇದೀಗ ದರ್ಶನ್ ಅವರ ಬಗ್ಗೆ ಒಂದು ವಿಚಾರವನ್ನು ಅವರು ಹಂಚಿಕೊಂಡಿದ್ದಾರೆ. ನನಗೆ ಆಗ ತುಂಬಾ ಹಣದ ಅವಶ್ಯಕತೆ ಇತ್ತು, ಮೀಡಿಯಾದವರು ಆ ಹೀರೋ ಬಳಿ ಹೋಗಿ, ಈ ಹೀರೋ ಬಳಿ ಹೋಗಿ, ಸಹಾಯ ಕೇಳಿ ಎಂದು ಹೇಳಿದರು. ಅದರಂತೆ ನಾನು ಕೂಡ ಕೆಲ ಹೀರೋಗಳ ಬಳಿ ಹೋದೆ, ನಿಜ ಹೇಳ್ತೀನಿ ಸರ್ ಯಾರು ಕೂಡ ನನಗೆ ಸಹಾಯ ಮಾಡಲಿಲ್ಲ, ಯಾವ ಹೀರೋಗಳು ಕೂಡ ನನ್ನ ಕಷ್ಟಕ್ಕೆ ನಿಲ್ಲಲಿಲ್ಲ, ಆದ್ರೆ ದರ್ಶನ್ ಅವರ ಬಳಿ ಹೋದೆ ಸರ್, ಅವರ ಬಳಿ ನಾನು ಸ್ವಲ್ಪ ಹೆಚ್ಚಿನ ಮೊತ್ತವನ್ನೇ ಸಹಾಯ ಬೇಡಿದ್ದೇ. ಆಗ ಅವರ ಬಳಿಯೂ ಕೂಡ ಹಣವಿರಲಿಲ್ಲ, ಬೇರೆ ಯಾವುದಕ್ಕೂ ಎತ್ತಿಟ್ಟಿದ್ದ ಹಣವನ್ನು ನನಗೆ ಕೊಟ್ಟಿದ್ದರು, ಅಂದು ದರ್ಶನ್ ನನಗೆ ಸಹಾಯ ಮಾಡಿದ್ದರು ಎಂದು ಟೆನ್ನಿಸ್ ಕೃಷ್ಣ ಇದೀಗ ಮೀಡಿಯಾ ಮುಂದೆ ಡಿ ಬಾಸ್ ಮಾಡಿರುವ ಸಹಾಯವನ್ನು ಹೇಳಿಕೊಂಡಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ. ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ, ತಪ್ಪದೆ ಮಾಹಿತಿ ಇಷ್ಟವಾದಲ್ಲಿ ಶೇರ್ ಮಾಡಿ ಧನ್ಯವಾದಗಳು.... ( video credit : cycle gap plus )