ರೇವಣಸಿದ್ದ ಅವರ ಆಸೆ ಈಡೇರಿಸಿದ ಡಿ ಬಾಸ್..! ಮನೆಗೆ ಕರೆಸಿ ಏನು ಕೊಟ್ಟಿದ್ದಾರೆ ನೋಡಿ

ರೇವಣಸಿದ್ದ ಅವರ ಆಸೆ ಈಡೇರಿಸಿದ ಡಿ ಬಾಸ್..! ಮನೆಗೆ ಕರೆಸಿ ಏನು ಕೊಟ್ಟಿದ್ದಾರೆ ನೋಡಿ


ಕನ್ನಡದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ, ಅವರದೇ ಆದ ವಿಶಿಷ್ಟ ಅಭಿನಯದಿಂದ ಅಪಾರ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ. ಕೇವಲ ಸಿನಿಮಾಗಳ ಮೂಲಕ ದರ್ಶನ್ ಅವರು ಹೆಚ್ಚು ಅಭಿಮಾನಿಗಳ ಹೊಂದಿಲ್ಲ. ಬದಲಿಗೆ ಬೇರೆ ಬೇರೆ ವಿಷಯಗಳಿಂದಲೂ ತುಂಬಾ ಇಷ್ಟ ಆಗುತ್ತಾರೆ. ಅವರ ಅಭಿಮಾನಿಗಳು ಅಂದರೆ ಅವರಿಗೆ ಪಂಚಪ್ರಾಣ, ಅಭಿಮಾನಿಗಳ ಆಸೆ ಏನು ಎಂಬುದಾಗಿ ಸೋಶಿಯಲ್ ಮೀಡಿಯಾದಲ್ಲಿ ತಿಳಿದು ಬರುತ್ತಿದ್ದಂತೆಯೆ ಅವರನ್ನು ಮನೆಗೆ ಕರೆಸಿ ಸಿಹಿ ತಿನಿಸಿ ಪ್ರೀತಿಯಿಂದ ಮಾತನಾಡಿಸುವ ಗುಣ ಅವರಲ್ಲಿದೆ. 

ಹಾಗೇನೆ ಮನೆಗೆ ಕರೆಸಿ ಅವರನ್ನ ಹೆಚ್ಚು ಸ್ನೇಹದಿಂದ ಮಾತನಾಡಿಸಿ ಅವರಿಗೆ ಏನಾದರೂ ಉಡುಗೊರೆಯ ಕೊಟ್ಟು ಕಳಿಸುವುದು ಡಿ ಬಾಸ್ ಅವರ ವಾಡಿಕೆ.. ಡಿ ಬಾಸ್ ಅಂದ್ರೆ ಹೆಚ್ಚು ಜನರಿಗೆ ಇಂಥಾ ವಿಚಾರಕ್ಕೆನೇ ಇಷ್ಟ ಆಗುತ್ತಾರೆ. ನಟ ದರ್ಶನ್ ಅವರು ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿಯೂ ಕೂಡ ಕಾಣಿಸಿಕೊಂಡಿರಲಿಲ್ಲ.. ಹೌದು ಮೊನ್ನೆ ಮೊನ್ನೆಯಷ್ಟೇ ಮಾಧ್ಯಮದ ಬಳಿ ಮುನಿಸು ಮರೆತು ಕ್ಷಮೆಯಾಚಿಸಿ ಅವರ ತನ ಏನು ಎಂಬುದಾಗಿ ತೋರಿಸಿದ್ದಾರೆ. ಜೊತೆಗೆ ಕರಿಯ ಸಿನಿಮಾದ ನಿರ್ದೇಶಕರಾದ ಪ್ರೇಮ್ ಅವರ ಜೊತೆಗೂ ಕೂಡ ಕೆಲವು ದಿನಗಳಿಂದ ಮುನಿಸು ದರ್ಶನ್ ಅವರಿಗೆ ಇತ್ತು. ಅದನ್ನು ಕೂಡ ಮರೆತು ಮತ್ತೆ ಅವರು ಒಂದಾಗಿದ್ದಾರೆ.   

ಸುದೀಪ್ ಮತ್ತು ದರ್ಶನ್ ಒಂದಾಗುತ್ತಾರೆ ಎನ್ನುವ ಅಭಿಮಾನಿಗಳು ಕೂಡ ಮೊನ್ನೆ ಮೊನ್ನೆಯಷ್ಟೇ ನಟಿ ಸುಮಲತಾ ಹುಟ್ಟು ಹಬ್ಬದ ವೇದಿಕೆಯಲ್ಲಿ ತಮ್ಮ ತಮ್ಮ ಅನಿಸಿಕೆ ತಿಳಿಸಿದಂತೆಯೆ ಇವರಿಬ್ಬರು ಆರು ವರ್ಷಗಳ ಬಳಿಕ ಆ ವೇದಿಕೆ ಮೇಲೆ ಕಾಣಿಸಿದರು. ಹೀಗೆ ದರ್ಶನ್ ಅವರು ಒಂದಲ್ಲ ಒಂದು ವಿಚಾರಕ್ಕೆ ಹೆಚ್ಚು ಸುದ್ದಿ ಆಗುತ್ತಾರೆ. ಹೌದು ಇದೀಗ ಸರಿಗಮಪ ಖ್ಯಾತಿಯ ರೇವಣಸಿದ್ದೇಶ ಅವರು ದರ್ಶನ್ ಅಂದರೆ ನನಗೆ ತುಂಬಾ ಇಷ್ಟ ಅವರನ್ನು ಒಮ್ಮೆ ಭೇಟಿ ಮಾಡಬೇಕು ಎಂಬುದಾಗಿ ಒಮ್ಮೆ ಅನಿಸಿಕೆ ಹಂಚಿಕೊಂಡಿದ್ದರು.
ಸರಿಗಮಪ ಖ್ಯಾತಿಯ ರೇವಣಸಿದ್ದ ಅವರು ಡಿ ಬಾಸ್ ಅವರನ್ನು ನೋಡಬೇಕೆಂದು ಕೆಲವು ದಿನಗಳು ಹಿಂದೆ ತಮ್ಮ ಆಸೆಯನ್ನು ತೋರಿಕೊಂಡಿದ್ದರು, ಅವರನ್ನು ಇಂದು ತಮ್ಮ ಮನೆಗೆ ಕರೆಸಿಕೊಂಡು ಅವರ ಜೊತೆ ಕೆಲ ಕ್ಷಣಗಳನ್ನು ಕಳೆದಿದ್ದಾರೆ ಡಿ ಬಾಸ್..

( video credit : kannada entertainment )