ಛಾಯಾ ಸಿಂಗ್ ದಾಂಪತ್ಯ ಜೀವನದಲ್ಲಿ ಬಿರುಕು ? ಅಸಲಿ ಸತ್ಯ ಇಲ್ಲಿದೆ ನೋಡಿ ?

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಪಾತ್ರ ನಿರ್ವಹಿಸುವ ನಟಿ ಛಾಯಾ ಸಿಂಗ್ ಅವರು ನಿಜ ಜೀವನದಲ್ಲೂ ಮದುವೆ ಆಗಿದ್ದು, ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ನಟ ಕೃಷ್ಣಾ ಅವರನ್ನು ಮದುವೆ ಆಗಿರುವ ನಟಿ ಛಾಯಾ ಸಿಂಗ್ ಅವರು, ಸಿನಿಮಾ & ವೈಯಕ್ತಿಕ ಜೀವನ ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿದ್ದಾರೆ. ಹೀಗಿದ್ದರೂ ನಟಿ ಛಾಯಾ ಸಿಂಗ್ ಅವರು ಗಂಡನಿಂದ ದೂರ ಉಳಿದಿದ್ದು, ನಟಿ ಛಾಯಾ ಸಿಂಗ್ ಬೆಂಗಳೂರಿನಲ್ಲಿ ಇದ್ದರೆ ಛಾಯಾ ಸಿಂಗ್ ಅವರ ಪತಿ ನಟ ಕೃಷ್ಣಾ ಅವರು ಚೆನ್ನೈ ಮನೆಯಲ್ಲಿ ಇರುತ್ತಾರಂತೆ. ಇದೇ ಹಿನ್ನೆಲೆ ಭಾರಿ ದೊಡ್ಡ ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ಹಬ್ಬಿದ್ದು, ಹೀಗಿದ್ದಾಗಲೇ, ನಟಿ ಛಾಯಾ ಸಿಂಗ್ ಬದುಕಲ್ಲಿ ಬಿರುಗಾಳಿ, ಗಂಡನಿಂದ ದೂರವಾಗಲು ಕಾರಣ ಏನು? ಅನ್ನೋ ಚರ್ಚೆ ಆರಂಭವಾಗಿದೆ
ಅಂದಹಾಗೆ ನಟಿ ಛಾಯಾ ಸಿಂಗ್ ಅವರು & ನಟಿ ಛಾಯಾ ಸಿಂಗ್ ಗಂಡ ದೂರ ದೂರವೇ ಇದ್ದಾರೆ ನಿಜ, ಆದರೆ ಛಾಯಾ ಸಿಂಗ್ ಅವರು ಗಂಡನಿಂದ ದೂರವಾಗಿಲ್ಲ. ಬದಲಾಗಿ ತಮ್ಮ ವೃತ್ತಿ ಜೀವನ & ಸಾಧನೆಗಾಗಿ ಈ ರೀತಿ ಇಬ್ಬರೂ ಕಷ್ಟಪಡುತ್ತಿದ್ದಾರೆ. ನಟಿ ಛಾಯಾ ಸಿಂಗ್ ಬೆಂಗಳೂರಲ್ಲಿ ಸೀರಿಯಲ್ ಅಥವಾ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಝಿ ಇದ್ದರೆ ಮತ್ತೊಂದು ಕಡೆ ಅವರ ಗಂಡ ಚೆನ್ನೈನಲ್ಲಿ ಬ್ಯುಸಿ ಇರುತ್ತಾರಂತೆ. ಇದೇ ಕಾರಣಕ್ಕೆ ಇಬ್ಬರೂ ದೂರ ಇರುತ್ತಾರೆ, ಹಲವು ದಿನಗಳಿಗೆ ಒಮ್ಮೆ ಭೇಟಿ ಆಗುತ್ತಾರೆ ಎನ್ನಲಾಗಿದೆ.
2012ರಲ್ಲಿ ಇವರ ಮದುವೆಯಾಗಿದ್ದು, 12 ವರ್ಷಗಳ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಅಷ್ಟಕ್ಕೂ ಇವರ ಮದುವೆಯ ಸ್ಟೋರಿಯೂ ಚೆನ್ನಾಗಿದೆ. ಕೃಷ್ಣ ಮತ್ತು ನಮ್ಮಮ್ಮ ಮಾತನಾಡಿಕೊಳ್ತಿದ್ರು. ನನಗೆ ಗೊತ್ತೇ ಇರಲಿಲ್ಲ. ಅದೊಂದು ದಿನ ಕೃಷ್ಣ ಅವರೇ ನನ್ನ ಅಮ್ಮನ ಬಳಿ ಬಂದು ನಿಮ್ಮ ಹುಡುಗಿಯನ್ನು ಇಷ್ಟಪಟ್ಟಿದ್ದೇನೆ, ಮದ್ವೆಯಾಗ್ತೇನೆ ಎಂದ್ರು. ಅಮ್ಮ ಓಕೆ ಅಂದುಬಿಟ್ರು. ನನಗೆ ಏನು ಆಗ್ತಿದೆ ಎಂದೇ ನಿಜಕ್ಕೂ ಗೊತ್ತಿರಲಿಲ್ಲ. ಹೀಗೆ ನಮಗೆ ಮದ್ವೆಯಾಯ್ತು. ಆದರೆ ಕೃಷ್ಣ ಇರುವುದು ಚೆನ್ನೈನಲ್ಲಿ, ಛಾಯಾ ಇರುವುದು ಬೆಂಗಳೂರಿನಲ್ಲಿ. ಇಬ್ಬರೂ ಶೂಟಿಂಗ್‌ನಲ್ಲಿ ಬಿಜಿ.
ಇದೇ ಕಾರಣಕ್ಕೆ ವರ್ಷದಲ್ಲಿ 10 ದಿನ ಕೂಡ ಒಟ್ಟಿಗೇ ಇರುವುದು ಕಷ್ಟವಾಗುತ್ತಿದೆ ಎಂದು ಸಂದರ್ಶನದಲ್ಲಿ ನೋವು ತೋಡಿಕೊಂಡಿದ್ದಾರೆ ಛಾಯಾ. ಹೀಗಾಗಿ ಇಬ್ಬರೂ ಹಲವು ತಿಂಗಳ ಕಾಲ ಭೇಟಿ ಆಗುವುದಿಲ್ಲ ಎಂಬ ಸುದ್ದಿ ಹಬ್ಬಿತ್ತು. ಆದರೆ ಇಬ್ಬರೂ ಅನ್ಯೂನ್ಯವಾಗಿದ್ದು, ಜೀವನ ಕೂಡ ಉತ್ತಮವಾಗಿ ನಡೆದುಕೊಂಡು ಹೋಗುತ್ತಿದೆ ಎಂಬುದನ್ನ ನಟಿ ಛಾಯಾ ಸಿಂಗ್ ಸಂದರ್ಶನ ಒಂದರಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ನಟಿ ಛಾಯಾ ಸಿಂಗ್ ಅವರ ಬಾಳಲ್ಲಿ ಯಾವ ಬಿರುಗಾಳಿ ಕೂಡ ಎದ್ದಿಲ್ಲ & ಸೋಷಿಯಲ್ ಮೀಡಿಯಾದಲ್ಲಿ ಈಗ ಹಬ್ಬಿರುವುದು ಸುಳ್ಳು ಸುದ್ದಿ ಎಂಬುದು ಕನ್ಫರ್ಮ್ ಆಗಿದೆ.