ರಜತ್ ಮತ್ತು ವಿನಯ್ ಬೆನ್ನಲ್ಲೇ ಬಿಗ್ ಬಾಸ್ ಖ್ಯಾತ ರಕ್ಷಕ್ ಬುಲೆಟ್ ಗೆ ಸಂಕಷ್ಟ

ಭರ್ಜರಿ ಬ್ಯಾಚುಲರ್ಸ್ ವೇದಿಕೆಯಲ್ಲಿ ರಕ್ಷಕ್ ಬುಲೆಟ್ ಅವರು ದರ್ಶನ್ ಹಾಗೂ ರಚಿತಾ ರಾಮ್ ಅಭಿನಯದ ಬುಲ್ ಬುಲ್ ಸಿನಿಮಾದ ದೃಶ್ಯವನ್ನು ಕಾಪಿ ಮಾಡಲು ಹೋಗಿದ್ದಾರೆ. ಈ ವೇಳೆ ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ.ಸ್ಟೇಜ್ ಮೇಲೆ ರಕ್ಷಕ್ ಬುಲೆಟ್ ಅವರು ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು ಪ್ಯಾಂಟು ಶರ್ಟು ಹಾಕೊಂಡು ಸ್ವಿಟ್ಜರ್ಲೆಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾಳೆ ಅನ್ನಿಸ್ತಿದೆ ಎಂದು ರಕ್ಷಕ್ ಬುಲೆಟ್ ಅವರು ಡೈಲಾಗ್ ಹೊಡೆದಿದ್ದಾರೆ.
ರಕ್ಷಕ್ ಬುಲೆಟ್ ಅವರ ಈ ಮಾತು ನಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆಗಿದೆ. ಹೀಗಾಗಿ ಬಿಗ್ ಬಾಸ್ ಮಾಜಿ ಸ್ಪರ್ಧಿ ರಕ್ಷಕ್ ಬುಲೆಟ್ ಹಾಗೂ ಖಾಸಗಿ ವಾಹಿನಿಯಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೂ ಸಂಘಟನೆಗಳು ಆಗ್ರಹಿಸಿವೆ.
ರಕ್ಷಕ್ ಬುಲೆಟ್ ವಿರುದ್ಧ ಇಂದು ಹಿಂದೂ ಕಾರ್ಯಕರ್ತ ಮಹೇಶ್ ಎಂಬುವವರು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ಅವರಿಗೆ ದೂರು ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ಖಾಸಗಿ ವಾಹಿನಿ ರಿಯಾಲಿಟಿ ಶೋನಲ್ಲಿ ರಕ್ಷಕ್ ಬುಲೆಟ್ ಅವರು ಸಹಸ್ಪರ್ಧಿ, ಪಕ್ಕದಲ್ಲಿದ್ದ ಹುಡುಗಿಯನ್ನು ಹೊಗಳುವ ಭರದಲ್ಲಿ ಯಡವಟ್ಟು ಮಾಡಿಕೊಂಡಿದ್ದಾರೆ. ರಕ್ಷಕ್ ಬುಲೆಟ್ ಅವರ ಅವಹೇಳನ ವಿಡಿಯೋ ವೈರಲ್ ಆಗಿದ್ದು, ಭಾರೀ ಟೀಕೆ ವ್ಯಕ್ತವಾಗಿದೆ.
ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂಬ ವಿಷಯವು ಇದೀಗ ತಾನೇ ಸಾರ್ವಜನಿಕವಾಗಿ ಬೆಳೆಯುತ್ತಾ, ತಾನು ಎಲ್ಲರಿಗಿಂತ ಮೇಲೆ ಎಂದುಕೊಂಡಿರುವ ಯುವಕನಿಗೆ ಅರಿವು ಮೂಡಿಸುವಂತಾಗಬೇಕು. ಸಮಸ್ತ ಹಿಂದೂ ಸಮಾಜದ ಪರವಾಗಿ ನಾವು ಇದನ್ನು ಖಂಡಿಸುತ್ತಾ, ರಕ್ಷಕ್ ಬುಲೆಟ್, ಜೀ ನ್ಯೂಸ್ “ಭರ್ಜರಿ ಬ್ಯಾಚುಲರ್-2′ ಕಾರ್ಯಕ್ರಮದ ರೂವಾರಿಗಳು, ನಿರ್ದೇಶಕರು, ಬರಹಗಾರರು ಎಲ್ಲರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಕಳಕಳಿಯ ಮನವಿಯನ್ನು ಮಾಡುತ್ತೇವೆ.