ಬಿಗ್ಬಾಸ್ ಖ್ಯಾತಿಯ ಕಿರಿಕ್ ಕೀರ್ತಿ ಅವರ ಹೆಂಡತಿ ಬಗ್ಗೆ ಹೇಳಿದ್ದೇನು..? ಈಗ ಕರಿಮಣಿ ಮಾಲೀಕ ನಾನಲ್ಲ ಎಂದಿದ್ದೇಕೆ
ಸಾಮಾಜಿಕ ಜಾಲತಣಗಳಲ್ಲಿ ತಮ್ಮದೇ ಆದ ವಿಶಿಷ್ಟ ಶೈಲಿಯ ಮಾತುಗಳ ಮೂಲಕ ಭಾಷೆ, ನಾಡು, ನುಡಿ ದೇಶಕ್ಕಾಗಿ ಮತ್ತು ಧರ್ಮದ ವಿಚಾರವಾಗಿ ಭಾಷೆಯ ವಿಚಾರವಾಗಿ ಆಗಾಗ ಕೆಲ ವಿಡಿಯೋಗಳ ಮೂಲಕ ಕಾಣಿಸಿಕೊಳ್ಳುತ್ತಿದ್ದ ಕಿರಿಕ್ ಕೀರ್ತಿಯವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಇದೀಗ ಅವರ ವಯಕ್ತಿಕ ವಿಚಾರದ ಒಂದು ದೊಡ್ಡ ನಿರ್ಧಾರವನ್ನ ಬಹಿರಂಗವಾಗಿ ಹಂಚಿಕೊಂಡಿದ್ದಾರೆ..ಅದುವೇ ಶುಕ್ರವಾರ ಅವರ ಹೆಂಡತಿಯಾದ ಅರ್ಪಿತ ಅವರಿಂದ ವಿಚ್ಛೇದನ ಪಡೆದಿದ್ದಾರಂತೆ..
ಕಿರಿಕ್ ಕೀರ್ತಿ ಅವರು ಇತ್ತೀಚಿಗೆ ಎರಡು ದಿನಗಳ ಹಿಂದೆ ದೇಶ, ಧರ್ಮ, ಭಾಷೆ, ಮತ್ತು ನಾಡಿನ ವಿಚಾರವಾಗಿ ಮಾತನಾಡಿದ್ದರು..ಆಗ ಕೆಲವರಿಂದ ಅತಿವವಾದ ನಕಾರಾತ್ಮಕ ಕಾಮೆಂಟ್ಗಳು ಹರಿದು ಬಂದಿದ್ದವಂತೆ. ಹಾಗೆ ಹೆಚ್ಚು ತೇಜೋವಧೆ ಮಾಡುವ, ಜೀವ ಬೆದರಿಕೆ ಹಾಕುವ ಕಮೆಂಟ್ಗಳು ಸಹ ಸುರಿದು ಬಂದಿದ್ದವಂತೆ. ಅದೇ ವಿಚಾರವಾಗಿ ಕಿರಿಕ್ ಕೀರ್ತಿ ಮಾತನಾಡಿದ್ದು, ಇನ್ನು ಮುಂದೆ ನನ್ನ, ನಾಡಿನ ವಿಚಾರ, ಹಾಗೆ ನಮ್ಮ ಭಾಷೆಯ ವಿಚಾರದ ಕುರಿತು, ಹಾಗೇನೆ ಈ ಧರ್ಮಗಳ ವಿಚಾರಗಳೆಲ್ಲವೂ ಇನ್ನೂ ಮುಂದೆ ನನ್ನ ಮನಸ್ಸಿನಲ್ಲಿ ಮಾತ್ರವೆ ಇರುತ್ತವೆ. ನಾನು ಸಾರ್ವಜನಿಕವಾಗಿ ಹೇಳಿದರೆ ನನ್ನ ಕುಟುಂಬಸ್ಥರ ಅವಹೇಳನ ಆಗುತ್ತಿದೆ.
ಹಾಗೆ ನನಗೂ ಸಹ ಜೀವ ಬೆದರಿಕೆ ಬಂದಿದೆ. ನನ್ನ ಇಡೀ ಕುಟುಂಬಸ್ಥರ ಕಾಳಜಿಯಿಂದ ನಾನು ಇನ್ನು ಮುಂದೆ ಸಾರ್ವಜನಿಕವಾಗಿ ಈ ವಿಚಾರಗಳನ್ನ ಹೇಳದೆ ನನ್ನ ಮನಸ್ಸಿನಲ್ಲಿಯೇ ಉಳಿಸಿಕೊಳ್ಳಲು ಇದೀಗ ನಿರ್ಧಾರ ಮಾಡಿದ್ದೇನೆ ಎಂದಿದ್ದರು..ಅದರ ಜೊತೆಗೆ ಇದೀಗ ಬಹಿರಂಗವಾಗಿ ಅವರ ಮತ್ತು ಅವರ ಪತ್ನಿ ಅರ್ಪಿತರ ದಾಂಪತ್ಯ ಜೀವನಕ್ಕೆ ನಾಂದಿ ಹಾಡಿದ್ದೇವೆ ಎಂಬುದಾಗಿ ಹೇಳಿದ್ದು ಅಧಿಕೃತವಾಗಿ ನಾನು ಅವಳು ವಿಚ್ಛೇದನ ಪಡೆದುಕೊಂಡಿದ್ದೇವೆ ಎಂಬುದಾಗಿ ಬರೆದುಕೊಂಡಿದ್ದಾರೆ ಕಿರಿಕ್ ಕೀರ್ತಿ. ಅದೇನು ಗೊತ್ತಾ ಇಲ್ಲಿದೆ ನೋಡಿ.
"ಕಾನೂನಿನ ಪ್ರಕಾರ ಇವತ್ತು ನನ್ನ ಮತ್ತು ಅರ್ಪಿತಾ ಜತೆಗಿನ ಪತಿ-ಪತ್ನಿಯ ಸಂಬಂಧಕ್ಕೆ ಪೂರ್ಣ ವಿರಾಮ ಸಿಕ್ಕಿದೆ. ಇನ್ನು ಮುಂದೆ ನನ್ನ ವೈಯಕ್ತಿಕ, ವ್ಯಾವಹಾರಿಕ ವಿಚಾರಗಳಿಗೂ ಅವಳಿಗೂ ಯಾವುದೇ ಸಂಬಂಧ ಇರುವುದಿಲ್ಲ. ಕಾರಣ ಇಷ್ಟೇ...ಅಧಿಕೃತವಾಗಿ ಇನ್ನುಮುಂದೆ ಕರಿಮಣಿ ಮಾಲೀಕ ನಾನಲ್ಲ...ಒಂದೊಳ್ಳೆಯ ಬದುಕು ಅವಳಿಗೂ ಸಿಗಲಿ, ಕಹಿನೆನಪುಗಳು ಮರೆತು ಹೊಸಜೀವನಕ್ಕೆ ನಾಂದಿ ಹಾಡಲಿ, ನನಗೂ ನಿಮ್ಮ ಪ್ರೀತಿ ಹಾರೈಕೆ ಮುಂದುವರಿಯಲಿ" ಎಂದು ಇದೀಗ ಕಿರಿಕ್ ಕೀರ್ತಿ ಅವ್ರು ತಮ್ಮ ವಿಚ್ಛೇದನವನ್ನು ಈ ಮೂಲಕ ಪ್ರಕಟಿಸಿದ್ದಾರೆ...