ಹೊಸ ಟ್ವಿಸ್ಟ್ ಕೊಟ್ಟ ಬಿಗ್ ಬಾಸ್! ಆ ಟ್ವಿಸ್ಟ್ ಏನು ಗೊತ್ತಾ?
ನಮ್ಮ ಕಿರುತೆರೆಯ ಹಿತಿಹಾಸದಲ್ಲಿ ರಿಯಾಲಿಟಿ ಶೋಗಳು ಪೈಕಿ ಸದಾ ಹೈಪ್ ಸೃಷ್ಟಿ ಮಾಡುವ ಶೋ ಎಂದರೆ ಅದು ಬಿಗ್ ಬಾಸ್. ಇನ್ನೂ ಈ ಬಿಗ್ ಬಾಸ್ ಹಿಂದಿಯ ಅವತರಣಿಕೆಯಲ್ಲಿ ಬಂದಿದ್ದು. ಇನ್ನೂ ಈ ಶೋ ಎಲ್ಲಾ ಭಾಷೆಯಲ್ಲಿ ಕೂಡ ಪ್ರಸಾರವಾಗಿ ಅದ್ಬುತ ಯಶಸ್ಸನ್ನು ಪ್ರತಿ ಸೀಸನ್ ನಲ್ಲಿ ಕೂಡ ಪಡೆದುಕೊಳ್ಳುತ್ತಿದೆ ಎಂದರೆ ತಪ್ಪಾಗಲಾರದು. ಇನ್ನೂ ಎಲ್ಲಾ ಭಾಷೆಯಲ್ಲಿ ಕೊಡ ಎರಡು ಅಂಕಿಯಷ್ಟು ಸೀಸನ್ ಗಳು ಕೂಡ ಪ್ರಸಾರವಾಗಿ ಯಶಸ್ವಿಯಾಗಿ ಅಂತ್ಯ ಕಾಣಿವೆ. ಇದೀಗ ನಮ್ಮ ಕನ್ನಡ ಬಿಗ್ ಬಾಸ್ ನಲ್ಲಿ ಕೂಡ ದಶಕದ ಸಂಬ್ರಮ ಆಗಿದ್ದು ಇಡೀ ಹತ್ತು ಸಿಸನ್ ಗಳು ಕೊಡ ಒಬ್ಬ ನಿರೂಪಕ ನಿಂದಾ ಪ್ರಸಾರವಾಗಿರುವ ಹೆಮ್ಮೆ ಎಂದ್ರೆ ಅದು ಕನ್ನಡ ಬಿಗ್ ಬಾಸ್ ಗೆ ಮಾತ್ರ. ಇನ್ನೂ ಈ ಬಿಗ್ ಬಾಸ್ ಸಾಕಷ್ಟು ವಿಶೇಷತೆಗಳನ್ನು ಹೊಂದಿದೆ. ಈ ವಿಶೇಷತೆ ಈ ಸಿಸನ್ ನ ಇನ್ನಷ್ಟು ಹೈಪ್ ಮಾಡಲಿದೆ ಎಂದರೆ ತಪ್ಪಾಗಲಾರದು.
ಇನ್ನೂ ನೆನ್ನೆ ಎಂದಿನಂತೆ ಕಲರ್ಸ್ ಕನ್ನಡದಲ್ಲಿ ಸಂಜೆ ಆರಕ್ಕೆ ಗ್ರಾಂಡ್ ಓಪನಿಂಗ್ ಶುರುವಾಗಿತ್ತು. "ಕಿಚ್ಚ ಸುದೀಪ್" ಕೂಡ ಅದ್ಬುತ ಹಾಗೂ ಕಡಕ್ ಎಂಟ್ರಿ ಕೊಟ್ಟಿದ್ದಾರೆ. ಇನ್ನೂ ಈ ಸೀಸನ್ ಶುರುವಿನ ಮೂಲಕ ಹೊಸ ಶ್ರೀಷೇಕೆಯನ್ನು ಬಿಡುಗಡೆ ಮಾಡಿ ಹೊಸ ಮನೆಯ ಪರಿಚಯ ಕೂಡ ಮಾಡಿಕೊಟ್ಟರು. ಇನ್ನೂ ಸಾಕಷ್ಟು ದಿನಗಳಿಂದ ಬಿಗ್ ಬಾಸ್ ಸ್ಪರ್ಧಿಗಳ ಹೆಸರು ಕೇಳಿ ಬರುತ್ತಲೇ ಇತ್ತು. ಇನ್ನೂ ಆ ಗೊಂದಲಕ್ಕೆ ನೆನ್ನೆ ಅಂತ್ಯ ಕಾಣಿವೆ. ಇನ್ನೂ ಈ ಬಾರಿ ಹತ್ತನೇ ಸೀಸನ್ ಆಗಿರುವುದರಿಂದ ನೇರ ಬಿಗ್ ಬಾಸ್ ಹೋಗುವಂತೆ ಇರಲಿಲ್ಲ ವೇದಿಕೆಯ ಮೇಲೆ ಬಂದ ನಂತರ ವೋಟಿಂಗ್ ಮಾಡುವ ಮುಖಾಂತರ ಜನರ ಆಯ್ಕೆಯ ಅನುಸಾರ ಬಿಗ್ ಬಾಸ್ ಪ್ರವೇಶ ಮಾಡಲು ಅವಕಾಶವನ್ನು ಪಡೆದುಕೊಳ್ಳುತ್ತಿದ್ದರು. ಈ ಬಾರಿಯ ವಿಶೇಷತೆಯನ್ನು ಶುರುವಿನ ದಿನಗಳಲ್ಲಿ ಬಿಗ್ ಬಾಸ್ ಜಲಕ್ ರೀತಿಯಲ್ಲಿ ಬಿಟ್ಟುಕೊಟ್ಟಿದ್ದಾರೆ.
ಇನ್ನೂ ಜನರು ಅರ್ಹರು ಎಂದು ಆಯ್ಕೆ ಮಾಡಿದ ಅನುಸಾರ "ನಾಗಿಣಿ 2" ಖ್ಯಾತಿಯ "ನಮ್ರತಾ ಗೌಡ". ಆ ನಂತರ "ಸ್ನೇಹಿತ್ ", 'ಕನ್ನಡ ರಾಪರ್ ' ಮೈಸೂರಿನ ಹುಡುಗಿಯಾಗಿ "ಇಷಾನಿ", ಶಿವ ಪಾತ್ರದಲ್ಲಿ ಎಲ್ಲರ ಗಮನ ಸೆಳೆದಿದ್ದ "ವಿನಯ್ ಗೌಡ', "ಕಾಮಿಡಿ ಕಿಲಾಡಿ ಗಳು" ಕ್ಯಾತಿಯ "ಸಂತು", "ಯೂನಿವರ್ಸ್ ಆಫ್ ಟ್ರಾನ್ಸ್ ಜಂಡರ್" "ನಿತು ವನಜಾಕ್ಷಿ", ಕಿರುತೆರೆ ಹಾಗೂ ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ "ಸಿರಿ", ನ್ಯೂಸ್ ಚಾನಲ್ ಅಂಕ್ಯರ್ ಆಗಿ "ಗೌರೀಶ್", ಮೈಸೂರಿನ ಮೂಲದ "ಸ್ನೇಕ್ ಶ್ಯಾಮ್" ಎಂದು ಪ್ರಕ್ಯತಿ ಪಡೆದಿರುವ ಸ್ನೇಕ್ ಶ್ಯಾಮ್, ಮಾಡಲ್ ಆಗಿ "ಮೈಕಲ್", ಕಿರುತೆರೆಯ ಖ್ಯಾತಿಯ "ಭಾಗ್ಯಶ್ರೀ", ಅವರು ಅರ್ಹರು ಎಂದು ವೋಟ್ ಪಡೆದುಕೊಂಡು ನೇರ ಮನೆ ಓಳ ಪ್ರವೇಶ ಮಾಡಿಕೊಂಡರು.
ಆದರೆ ಜನರ ವೋಟಿಂಗ್ ಕಡಿಮೆ ಬಂದ ಪ್ರಕಾರ "ಡ್ರೋನ್ ಪ್ರತಾಪ್", "ಬುಲೆಟ್ ಪ್ರಕಾಶ್" ಮಗ "ರಕ್ಷಕ್ ಬುಲೆಟ್", "ಚಾರ್ಲಿ" ಸಿನಿಮಾ ಖ್ಯಾತಿಯ "ಸಂಗೀತಾ", "ಡೊಳ್ಳು" ಸಿನಿಮಾ ಮಾಡಿ ಕಿರುತೆರೆಯಲ್ಲಿ ಹ್ಯಾಂಡ್ಸಮ್ ಹಂಕ್ ಎಂದು ಹೆಸರು ಪಡೆದಿರುವ "ಕಾರ್ತಿಕ್", "ರೈತ"ನಾಗಿ ಸಾಮಾಜಿಕ ಜಾಲತಾಣಗಳಲ್ಲಿ ಗುರುತಿಸಿಕೊಂಡಿರುವ ವರ್ತೂರಿನ "ಸಂತೋಷ್" ಅವರು ವೈಟಿಂಗ್ ರೂಮ್ ನಲ್ಲಿ ಕಾಯ್ದು ಕುಳಿತಿದ್ದರು. ಎಲ್ಲಾ ಹೋದ ಬಳಿಕ ಅವರನ್ನು ಸುದೀಪ್ ಕರೆತಂದು ನಿಮ್ಮನ್ನು ಒಂದು ವಾರದ ವರೆಗೂ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಲು ಅವಕಾಶ ಮಾಡಿಕೊಡಲಾಗುವುದು ಅಲ್ಲಿ ನಿಮ್ಮ ಗುರುತಿನ ಬಗ್ಗೆ ಹೆಚ್ಚು ಗಮನ ಹರಿಸಿ ಆ ನಂತರ ನಿಮ್ಮ ದೃಡತೆಯ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ತಿಳಿಸಿ ಅವರನ್ನು ಮನೆ ಒಳಗೆ ಪ್ರವೇಶ ಮಾಡಲು ಬಿಡಲಾಗಿದೆ. ಇನ್ನೂ ಇಂದಿನಿಂದ ದಿನ ರಾತ್ರಿ 9;30 ಪ್ರಸಾರವಾಗಲಿದ್ದು ಅಲ್ಲಿನ ಸ್ಪರ್ಧಿಗಳ ಅಸಲಿ ಬಣ್ಣ ತಿಳಿಯಲಿದೆ.