ಬಿಗ್​ ಬಾಸ್ ಖ್ಯಾತಿ ಕಾವ್ಯಾ ಶಾಸ್ತ್ರಿ ಭಿಕ್ಷೆ ಬೇಡುತ್ತಿರುವ ಅಸಲಿ ಕಾರಣ!! ಇಲ್ಲಿದೆ ನೋಡಿ ಕಣ್ಣೀರು ಬರುತ್ತದೆ !!

ಬಿಗ್​ ಬಾಸ್ ಖ್ಯಾತಿ ಕಾವ್ಯಾ ಶಾಸ್ತ್ರಿ ಭಿಕ್ಷೆ ಬೇಡುತ್ತಿರುವ ಅಸಲಿ ಕಾರಣ!!   ಇಲ್ಲಿದೆ ನೋಡಿ ಕಣ್ಣೀರು ಬರುತ್ತದೆ !!

ಇನ್ನು ಕಾವ್ಯಾ ಶಾಸ್ತ್ರಿಯವರ ಕುರಿತು ಹೇಳುವುದಾದರೆ, ಇವರು   ‘ಬಿಗ್ ಬಾಸ್ 10'ರ ಮೂಲಕ ಖ್ಯಾತಿ ಪಡೆದ ಕಿರುತೆರೆ ನಟಿ. ಅಷ್ಟಕ್ಕೂ ಬಿಗ್​ಬಾಸ್​ನಿಂದ ಹೊರಕ್ಕೆ ಬಂದ  ಮೇಲೆ ಕಾವ್ಯಾ ಸದ್ದು ಮಾಡಿದ್ದರು. ಅದಕ್ಕೆ ಕಾರಣ, ಬಿಗ್​ಬಾಸ್​ ಬಗ್ಗೆ ಅವರು ಅಸಮಾಧಾನ ಹೊರಹಾಕಿ ಸೋಷಿಯಲ್ ಮೀಡಿಯಾದಲ್ಲಿ ಮಾಡಿದ್ದ ಕಮೆಂಟ್​. 'ಈ ಸಲದ ಕನ್ನಡದ ಬಿಗ್​ಬಾಸ್‌ ಸೀಸನ್‌ ನಿಜಕ್ಕೂ ಬೇಸರ ತಂದಿದೆ. ಶೋನಲ್ಲಿ ಉಳಿಯೋ ಭರದಲ್ಲಿ ಅವಾಚ್ಯ ಶಬ್ದಗಳಲ್ಲಿ ನಿಂದನೆ, ಚಾರಿತ್ರ್ಯ ವಧೆ, ಹೆಣ್ಣುಮಕ್ಕಳ ಮೇಲೆ ಏಕವಚನದ ಬಳಕೆ, ಮಾನಸಿಕವಾಗಿ ಇತರರನ್ನು ಕುಗ್ಗಿಸುವ ಪ್ರಯತ್ನ, ಜೋರುಧ್ವನಿಯಲ್ಲಿ ಗದರುವುದು, ಹೆದರಿಸುವುದು, ಇವೆಲ್ಲವೂ ಹೆಚ್ಚಾಗಿದೆ. ಚಿಕ್ಕ ಮಕ್ಕಳಿರುವ ತಂದೆ - ತಾಯಂದಿರು ದಯವಿಟ್ಟು ಇಂತಹ ಕಾರ್ಯಕ್ರಮಗಳನ್ನು ಚಿಕ್ಕ ಮಕ್ಕಳ ಎದುರು ನೋಡದಿರಿ. ಇದು ನಿಮ್ಮ ಮಗುವಿನ ಮನಸ್ಸಿನ ಮೇಲೆ ಪ್ರತೀಕೂಲ ಪರಿಣಾಮ ಬೀರುತ್ತದೆ  ಎಂದು ಹೇಳಿದ್ದರು 

'2020ರಲ್ಲಿ ಕರೋನಾ ಎನ್ನುವ ಭಯ ಯಾರನ್ನೂ ಬಿಟ್ಟಿಲ್ಲ. ಕರೋನಾದಿಂದಾಗಿ ನನ್ನ ತಂದೆ ಕಳೆದೇ ಹೋಗುತ್ತಾರೆ ಎನ್ನುವ ಭಯದಲ್ಲಿ  ಸಿಕ್ಕಸಿಕ್ಕ ದೇವರಿಗೆ, ಸಿಕ್ಕಸಿಕ್ಕ ಹರಕೆ ಹೊತ್ತುಕೊಂಡಿದ್ದೆ. ಅದರಲ್ಲಿ ಒಂದು ಹರಕೆ ಇದು.  ಕಾಶಿ ವಿಶ್ವನಾಥನ ಸನ್ನಿಧಿ. ಕಾಶಿ ವಿಶ್ವನಾಥನಲ್ಲಿ, ನನ್ನ ತಂದೆಯ ಜೀವದ ಭಿಕ್ಷೆ ಕೊಡು. ನಿನ್ನ ಸನ್ನಿಧಾನದಲ್ಲಿ ಭಿಕ್ಷೆ ಬೇಡಿ, ಅದರಿಂದ ಬಂದ ಹಣದಲ್ಲಿ ಒಂದಿಡೀ ದಿನದ ಊಟ ಮಾಡ್ತೇನೆ ಅಂತ ಕೇಳಿಕೊಂಡಿದ್ದೆ.  ಈ ಹರಕೆ ತೀರಿಸುವ ಸೌಭಾಗ್ಯ ನಾನು ಮೊನ್ನೆ ಕಾಶಿಗೆ ಹೋದಾಗ ಸಿಕ್ಕಿತು...' ಎನ್ನುತ್ತಲೇ ಭಿಕ್ಷೆ ಬೇಡಿ ಅದರಿಂದ ಬಂದ ಹಣದಲ್ಲಿ ಊಟ ಮಾಡಿದ್ದಾರೆ ನಟಿ ಕಾವ್ಯಾ ಶಾಸ್ತ್ರಿ.


ಈ ಕುರಿತ ವಿಡಿಯೋ ಶೇರ್​ ಮಾಡಿಕೊಂಡಿರುವ ನಟಿ, 'ಅಂದು ಅಪ್ಪನಿಗೆ ಜೀವ ಭಿಕ್ಷೆ ಬೇಡಿದೆ. ಅದು ಫಲಿಸಿದೆ. ಇದೇನು ಅಂಧ ವಿಶ್ವಾಸ ಎಂದು ನೀವು ಕೇಳಬಹುದು. ಆದರೆ ಕಷ್ಟದಲ್ಲಿದ್ದಾಗ, ಅದನ್ನು ನಿವಾರಿಸಿಕೊಳ್ಳಲು ಏನನ್ನಾದರೂ ಮಾಡುವ ಸ್ಥಿತಿಗೆ ಬಂದು ಬಿಡುತ್ತೇವೆ. ಹಿಂದೂ ಧರ್ಮದಲ್ಲಿ ಭಿಕ್ಷಾಟನೆಗೆ ಪವಿತ್ರವಾದ ಸ್ಥಾನವಿದೆ. ಅದು ನಾನು-ನನ್ನದು ಎನ್ನುವ ಅಹಂಕಾರ ಮತ್ತು ಮೋಹ ಎಲ್ಲದನ್ನೂ ಕಳೆದುಬಿಡುತ್ತದೆ.  ಒಬ್ಬರ ಮುಂದೆ ಕೈಚಾಚಿ ಭಿಕ್ಷೆ ಕೊಡಿ ಎಂದು ಕೇಳಬೇಕಾದರೆ  ದುರಹಂಕಾರ ಎಲ್ಲಾ ಕಳೆದು ಹೋಗುತ್ತದೆ.  ಇದೇ ಭಿಕ್ಷಾಟನೆಯ ಪಾವಿತ್ರ್ಯತೆ. ಭಿಕ್ಷೆ ಕೊಡುವವರು  ತಮ್ಮ ಪಾಪ ಕಳೆದುಕೊಳ್ಳುತ್ತಾರೆ. ತೆಗೆದುಕೊಳ್ಳುವವರು ತಮ್ಮ ಅಹಂಕಾರ ಕಳೆದುಕೊಳ್ಳುತ್ತಾರೆ. ಅದಕ್ಕೇ ಹೇಳುವುದು, ಈ ದುಡ್ಡು, ಹೆಸರು ಎಲ್ಲ, ಜೀವದ ಮುಂದೆ ಏನೇನೂ ಅಲ್ಲ. ಈ ಜೀವನ ಅನ್ನೋದೇ ಪರಮಾತ್ಮನ ಭಿಕ್ಷೆ. ಅದನ್ನ ಯಾವತ್ತೂ ಅಹಂಕಾರದಿಂದ ಮರೆಯಬಾರದು. ಒಟ್ಟಿನಲ್ಲಿ ಇವತ್ತು ನಾನು ನನ್ನ ತಂದೆ-ತಾಯಿಯ ಜೊತೆ ಖುಷಿಯಾಗಿದ್ದೇನೆ' ಎನ್ನುತ್ತಲೇ ಬದುಕಿನ ಅತಿ ದೊಡ್ಡ ಸತ್ಯವನ್ನು ತೆರೆದಿಟ್ಟಿದ್ದಾರೆ ನಟಿ ಕಾವ್ಯಾ.