ಅನುಶ್ರೀ ಮದುವೆ ಆಗದೆ ಸನ್ಯಾಸತ್ವ ಸ್ವೀಕಾರ? ಅಸಲಿ ಸತ್ಯ ಇಲ್ಲಿದೆ ನೋಡಿ!!

ಆ್ಯಂಕರ್ ಅನುಶ್ರೀ ಅವರು ಕಿರುತೆರೆ ಲೋಕದಲ್ಲಿ, ಆ್ಯಂಕರಿಂಗ್ ಲೋಕದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರು ಕೆಲವು ಸಿನಿಮಾ ಕೂಡ ಮಾಡಿದ್ದಾರೆ. ಅವರ ಖ್ಯಾತಿ ಸಾಕಷ್ಟು ಹೆಚ್ಚಿದೆ. ಹೀಗಿರುವಾಗಲೇ ಅವರ ಮದುವೆ ಯಾವಾಗ ಎನ್ನುವ ಪ್ರಶ್ನೆ ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಅವರ ಮದುವೆ ಫಿಕ್ಸ್ ಆಗಿದೆ ಎಂದು ಕೆಲವು ಯೂಟ್ಯೂಬರ್ಗಳು ಆಗಾಗ ವಿಡಿಯೋ ಮಾಡಿದ್ದೂ ಇದೆ ಅನುಶ್ರೀ ಮದುವೆ ವಿವಾರವಾಗಿ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಸುದ್ದಿಗಳು ಹರಿದಾಡಿದ್ದು ಇದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ನನ್ನ ಮದುವೆ ಚಿಂತೆ ನನ್ನ ಮನೆಯವರಿಗಿಂತ ಯೂಟ್ಯೂಬರ್ಗಳಿಗೆ ಇದೆ. ಪ್ರತಿ ವಾರ ಯಾರು ಸಿಂಗಲ್ ಇದ್ದಾರೆ ಅವರ ಜೊತೆ ನನ್ನ ಮದುವೆ ಮಾಡಿಸಿದ್ದಾರೆ’ ಎಂದರು ಅನುಶ್ರೀ.
‘ಎಲ್ಲ ಹುಡಿಗಿಯರಂತೆ ನನಗೂ ಮದುವೆ ಆಗಬೇಕು ಎಂದಿದೆ. ನನಗೂ ಬಾಳ ಸಂಗಾತಿ ಬೇಕು ಎಂದಿದೆ. ಎಲ್ಲದಕ್ಕೂ ಸಮಯ ಬರಬೇಕು. ಸರಿಯಾದ ಟೈಮ್ ಅಲ್ಲಿ ಸರಿಯಾದ ವ್ಯಕ್ತಿ ಬರಬೇಕು. ನಾನು ಮದುವೆ ಆಗಬೇಕು ಎಂದು ಮನಸ್ಸು ಮಾಡಬೇಕಿತ್ತು. ಈವರೆಗೆ ಮಾಡಿರಲಿಲ್ಲ. ಈಗ ಮಾಡಿದ್ದೇನೆ. ಮುಂದಿನ ವರ್ಷ ಒಳ್ಳೆಯ ಹುಡುಗ ಸಿಕ್ಕರೆ ಮದುವೆ ಆಗುತ್ತೇನೆ. ಆ ವ್ಯಕ್ತಿ ಬರಲಿ ಎಂದು ಕಾಯುತ್ತೇನೆ.
ಆಂಕರ್ ಅನುಶ್ರೀ ಮದುವೆ ಯಾವಾಗ..? ಅನ್ನೋ ಪ್ರಶ್ನೆಯು ಇದೀಗ ಎಲ್ಲರನ್ನೂ ಕಾಡುತ್ತಿದೆ. ಆಂಕರ್ ಅನುಶ್ರೀ ಅವರ ಬಗ್ಗೆ ಕಾಳಜಿ ವಹಿಸುವ ಕೋಟಿ ಕೋಟಿ ಅಭಿಮಾನಿಗಳು ಈ ಬಗ್ಗೆ ಭಾರಿ ಚಿಂತೆ ಮಾಡ್ತಿದ್ದಾರೆ. ಆಂಕರ್ ಅನುಶ್ರೀ ಅವರು 36 ವರ್ಷ ವಯಸ್ಸು ಕಳೆದರೂ ಮದುವೆಯೇ ಆಗಿಲ್ಲ. ಯಾವಾಗ ಆಂಕರ್ ಅನುಶ್ರೀ ಅವರ ಮದುವೆ ಆಗುತ್ತೋ? ಅನ್ನೋ ಪ್ರಶ್ನೆ ಕಾಡುತ್ತಿದೆ. ಹಲವು ವರ್ಷಗಳಿಂದಲೂ ಆಂಕರ್ ಅನುಶ್ರೀ ಅವರು ಮದುವೆ ಆಗ್ತಾರೆ ಅಂತಾ ಕನ್ನಡಿಗರು ಈ ರೀತಿ ಕಾಯುತ್ತಿದ್ದಾರೆ. ಇಂತಹ ಸಮಯದಲ್ಲೇ, ಆಂಕರ್ ಅನುಶ್ರೀ ಮದುವೆ ಆಗದೆ ಸನ್ಯಾಸತ್ವ ಸ್ವೀಕಾರ ಮಾಡಲು...
ಹೌದು, ಇಷ್ಟು ದಿನಗಳ ಕಾಲ ಆಂಕರ್ ಅನುಶ್ರೀ ಅವರು ಮದುವೆ ಆಗಿಲ್ಲ. ಇದೇ ಕಾರಣಕ್ಕೆ ಅವರು ಮದುವೆಯೇ ಆಗುವುದಿಲ್ಲ, ಹಾಗೇ ಆಂಕರ್ ಅನುಶ್ರೀ ಮದುವೆ ಆಗದೆ ಸನ್ಯಾಸತ್ವ ಸ್ವೀಕಾರ ಮಾಡಲು ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಈ ಮೂಲಕ ಆಂಕರ್ ಅನುಶ್ರೀ ಅವರ ಮದುವೆ ವಿಚಾರ ದೊಡ್ಡ ಸಂಚಲನ ಸೃಷ್ಟಿ ಮಾಡಿದ್ದು, ಇದೀಗ ದೊಡ್ಡ ಚರ್ಚೆ ಕೂಡ ಈ ಬಗ್ಗೆ ನಡೆಯುತ್ತಿದೆ
ಈ ನಡುವೆ ಆಂಕರ್ ಅನುಶ್ರೀ ಮದುವೆ ಆಗದೆಯೇ ಸನ್ಯಾಸತ್ವ ಸ್ವೀಕಾರ ಮಾಡಲು ನಿರ್ಧಾರ ಮಾಡಿದ್ದಾರೆ ಎಂಬ ಸುದ್ದಿ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗುತ್ತಿದೆ. ಆದರೆ ಈ ಬಗ್ಗೆ ಆಂಕರ್ ಅನುಶ್ರೀ ಅವರೇ ಆಗಲಿ ಅಥವಾ ಅಧಿಕೃತ ಮೂಲಗಳಿಂದ ಹೇಳಿಕೆ ಸಿಕ್ಕಿಲ್ಲ . ಆದರೆ ಈ ಸುದ್ದಿ ಸುಳ್ಳು ಎಂದು ತಿಳಿದು ಬಂದಿದೆ . ಇದು ಯಾರೋ ಕಿಡಿಗೇಡಿಗಳು ಹಬ್ಬಿಸಿರುವ ಸುಳ್ಳು ಸುದ್ದಿ ಎಂದು ತಿಳಿದು ಬಂದಿದೆ