DKD ಗೆ ಬನ್ನಿ ಎಂದ ಅನುಶ್ರೀ..! ಆದ್ರೆ ರಾಘು ಮಾಡಿದ್ದೇನು..? ಲೈವ್ ನಲ್ಲೆ ಕಣ್ಣೀರು ಹಾಕಿದ ಅನುಶ್ರೀ
ನಟ ವಿಜಯ್ ರಾಘವೇಂದ್ರ ಅವರು ಇದೀಗ ಅವರ ಮಡದಿ ವಿಧಿವಶರಾದ ಹಿನ್ನೆಲೆಯಲ್ಲಿ ಇನ್ನೂ ಕೂಡ ಆ ನೋವಿನಿಂದ ಹೊರಬಂದಿಲ್ಲ. ಸ್ಪಂದನಾರನ್ನ ವಿಜಯ್ ರಾಘವೇಂದ್ರ ಅವರು ಹೆಚ್ಚಾಗಿ ಹಚ್ಚಿಕೊಂಡಿದ್ದರು..ಪ್ರತಿ ಹಂತದಲ್ಲೂ ಸಹ ಜೊತೆಗೆ ಇದ್ದರು ಸ್ಪಂದನ. ಹಾಗೆ ವಿಜಿ ಅವರ ಕಷ್ಟದ ದಿನಗಳಲ್ಲಿ ಸ್ಪಂದನ ಅವರು ಯಾವ ರೀತಿ ಬೆನ್ನೆಲುಬಾಗಿ ಅವರಿಗೆ ನಿಂತಿದ್ದರು ಎಂಬುದಾಗಿ ಹೆಚ್ಚು ವಿಚಾರಗಳನ್ನು ವೇದಿಕೆ ಮೇಲೆಯೇ ವಿಜಯ್ ರಾಘವೇಂದ್ರ ಅವರು ಹೇಳಿಕೊಂಡಿದ್ದು ಉಂಟು. ಅದು ನಿಮಗೂ ಕೂಡ ಗೊತ್ತು. ಇದರ ಮೂಲಕವೇ ವಿಜಯ್ ರಾಘವೇಂದ್ರ ಹಾಗೂ ಸ್ಪಂದನ ವಿಜಯರಾಘವೇಂದ್ರ ಯಾವ ರೀತಿ ದಾಂಪತ್ಯ ಜೀವನವನ್ನು ನಡೆಸುತ್ತಿದ್ದರು ಎಂಬುದಾಗಿ ತಿಳಿಯುತ್ತಿತ್ತು.
ಜೊತೆಗೆ ಇವರಿಬ್ಬರ ಪ್ರೀತಿ, ಪ್ರೇಮ, ವೈವಾಹಿಕ ಜೀವನ ನಡೆಸುತ್ತಿದ್ದ ಪರಿ ನೋಡಿ ಸಾಕಷ್ಟು ಜನರು ಇವರನ್ನು ಆದರ್ಶ ದಂಪತಿಗಳೆಂದು ಕರೆಯುತ್ತಿದ್ದರು.. ಹಾಗೆ ಇವರನ್ನೇ ಹೆಚ್ಚು ಯುವ ದಂಪತಿಗಳು ಮಾದರಿಯಾಗಿ ತೆಗೆದುಕೊಂಡಿದ್ದರು ಎಂದರೂ ತಪ್ಪಾಗಲಾರದು. ಹೌದು ಅಷ್ಟರಮಟ್ಟಿಗೆ ಈ ಜೋಡಿ ಮಾದರಿಯಾಗಿತ್ತು.. ನಟ ವಿಜಯ ರಾಘವೇಂದ್ರ ಮತ್ತು ಸ್ಪಂದನ ಅವರನ್ನು ನೋಡಿ ಆ ದೇವರಿಗೂ ಕೂಡ ಹೊಟ್ಟೆ ಕಿಚ್ಚು ಆಯ್ತೋ ಗೊತ್ತಿಲ್ಲ, ಈ ಜೋಡಿ ಮೇಲೆ ಅದ್ಯಾರ ಕಣ್ಣು ಬಿತ್ತೋ ಗೊತ್ತಿಲ್ಲ, ಅತಿ ಚಿಕ್ಕ ವಯಸ್ಸಿಗೆ ಸ್ಪಂದನ ಅವರನ್ನು ಕರೆಸಿಕೊಂಡು ದೇವ್ರು ನೋವು ನೀಡಿಬಿಟ್ಟ..ವಿಜಯ ರಾಘವೇಂದ್ರ ಅವರು ಇದರಿಂದ ಈಗಲೂ ಕೂಡ ಹೊರಬಂದಿಲ್ಲ. ಹಾಗೆ ಈ ನಮ್ಮ ಜೀವನದಲ್ಲಿ ಏನಾಗುತ್ತಿದೆ, ಏನಾಗುತ್ತಿಲ್ಲ ಎಂಬ ಆಲೋಚನೆಯನ್ನ ಮಾಡುವುದಕ್ಕೂ ಕೂಡ ಅವರಿಗೆ ಇದೀಗ ಆಗುತ್ತಿಲ್ಲ ಅಷ್ಟು ನೋವಿಗೆ ಒಳಗಾಗಿದ್ದಾರೆ.
ಹೌದು, ಡಿಕೆಡಿ ಕಾರ್ಯಕ್ರಮದಲ್ಲಿ ಮೊದಲಿನಿಂದಲೂ ನಟ ವಿಜಯ ರಾಘವೇಂದ್ರ ಸಹ ಕಾಣಿಸಿದ್ದರು. ಆದರೆ ಮೊನ್ನೆ ಕಳೆದ ವಾರದ ಡಿಕೆಡಿ ವೇದಿಕೆಯಲ್ಲಿ ವಿಜಯ್ ಅವರು ಕಾಣಿಸಿಕೊಂಡಿರಲಿಲ್ಲ..ಕಾರಣ ಅವರ ಪ್ರೀತಿಯ ಮಡದಿಯ ಅಗಲಿಕೆ ನೋವಿನಲ್ಲಿಯೇ ಇದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಅನುಶ್ರೀ ಅವರು ಅತ್ತ ರಾಘು ಅವರ ಮನೆಗೆ ಹೋಗಿ ನೀವು ಮರಳಿ ಮತ್ತೆ ಡಿಕೆಡಿಗೆ ಬರಬೇಕು ಎಂಬುದಾಗಿ ಕರೆದರಂತೆ.. ಆಗ ವಿಜಯ ರಾಘವೇಂದ್ರ ಅವರು ನಮ್ಮ ಮನೆಯ ಬೆಳಕೆ ಹಾರಿ ಹೋಗಿದೆ..ಇನ್ನೆಲ್ಲಿ ನಾವು ಖುಷಿಯಾಗಿರಲು ಸಾಧ್ಯ, ನನ್ನ ಮಗನು ಇದರಿಂದ ಇನ್ನೂ ಹೊರ ಬಂದಿಲ್ಲ ಎಂದು ನೋವಿನಲ್ಲಿ ಕಣ್ಣೀರು ಹಾಕಿದರಂತೆ.
ಆಗ ಅನುಶ್ರೀ ಅವರು ಕಾಲ ಕಳೆದಂತೆ ಎಲ್ಲವೂ ಮಾಯ ಆಗುತ್ತದೆ, ನೀವು ಮತ್ತೆ ಡಿಕೆಡಿಗೆ ಬನ್ನಿ ನೋವು ಕಡಿಮೆ ಆಗುತ್ತದೆ ಎಂದು ಸಂತ್ವಾನ ಹೇಳಿ ಬಂದರಂತೆ. ಹೌದು ಈ ವಿಚಾರವನ್ನು ಇದೀಗ ಅನುಶ್ರೀಯವರೇ ಲೈವ್ ಮೂಲಕ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಇಲ್ಲಿದೆ ನೋಡಿ ವಿಡಿಯೋ, ಮತ್ತು ನೀವು ಕೂಡ ಸ್ಪಂದನ ಅವರ ಆತ್ಮಕ್ಕೆ ಶಾಂತಿ ಕೋರಿ, ಈ ವಿಡಿಯೋಗೆ ಒಂದು ಮೆಚ್ಚುಗೆ ನೀಡಿ ಧನ್ಯವಾದಗಳು...