ಸಿನಿಮಾದಲ್ಲಿ ಅವಕಾಶ ಸಿಗಲು ಆ ಕೆಲಸ ಮಾಡಬೇಕು ಎಂದ ಸ್ಟಾರ್ ನಟಿ
ತೆಲುಗು ಚಿತ್ರರಂಗದಲ್ಲಿ ಅನುಷ್ಕಾ ಶೆಟ್ಟಿ ಅವರು ಅನೇಕ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಅನುಷ್ಕಾ ಅವರು ಬಾಹುಬಲಿ ಸಿನಿಮಾದಲ್ಲಿ ನಟಿಸಿದ ನಂತರ ಅಷ್ಟಾಗಿ ಕಾಣಿಸಿಕೊಂಡಿಲ್ಲ. ಇದೀಗ ಒಂದು ಹೇಳಿಕೆ ಹೇಳುವ ಮೂಲಕ ಸುದ್ದಿಯಲ್ಲಿದ್ದಾರೆ ಹಾಗಾದರೆ ಅವರು ಯಾವ ಹೇಳಿಕೆಯನ್ನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ತೆಲುಗು ಚಿತ್ರರಂಗದ ಸ್ಟಾರ್ ನಟ ನಾಗಾರ್ಜುನ ನಾಯಕ ನಟನಾಗಿ ನಟಿಸಿದ ಸೂಪರ್ ಸಿನಿಮಾ ಮೂಲಕ ತೆಲುಗು ಚಿತ್ರರಂಗಕ್ಕೆ ಪರಿಚಯವಾದ ನಟಿ ಕನ್ನಡತಿ ಅನುಷ್ಕಾ ಶೆಟ್ಟಿ ಅವರ ಮೊದಲ ಸಿನಿಮಾ ದೊಡ್ಡ ಯಶಸ್ಸನ್ನು ಪಡೆದ ನಂತರ ಸಾಲು ಸಾಲು ಸಿನಿಮಾಗಳಲ್ಲಿ ಅವಕಾಶಗಳನ್ನು ಪಡೆದುಕೊಂಡರು. ನಂತರದ ದಿನಗಳಲ್ಲಿ ಅನುಷ್ಕಾ ಶೆಟ್ಟಿ ಅಗ್ರ ನಾಯಕಿಯಾಗಿ ಸ್ಥಾನವನ್ನು ಪಡೆದುಕೊಂಡರು. ಕೇವಲ ಗ್ಲಾಮರ್ ಪಾತ್ರಗಳಿಗೆ ಅನುಷ್ಕಾ ಶೆಟ್ಟಿ ಸೀಮಿತವಾಗಿರಲಿಲ್ಲ ಉತ್ತಮ ಪಾತ್ರಗಳಿಗಾಗಿ ತಮ್ಮ ದೇಹ ಆ ಕೃತಿಯನ್ನು ಕೂಡ ಬದಲಿಸಿಕೊಂಡು ದಪ್ಪಗಾದ ಉದಾಹರಣೆಗಳು ಕೂಡಾ ಇದೆ.
ಅರುಂಧತಿ, ಬಾಹುಬಲಿ, ಸೈಜ್ ಜೀರೋ, ಭಾಗಮತಿಯಂತಹ ಸಿನಿಮಾಗಳಲ್ಲಿ ನಟಿಸಿ ಆ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿದ ನಟಿ ಅನುಷ್ಕಾ ಶೆಟ್ಟಿ ಸಿನಿಮಾ ವಿಶ್ಲೇಷಕರಿಂದ ಪ್ರಶಂಸೆಗಳನ್ನು ಪಡೆದುಕೊಂಡರು. ಬಾಹುಬಲಿ ಸಿನಿಮಾ ನಂತರ ನಟಿ ಅನುಷ್ಕಾ ಶೆಟ್ಟಿ ಸಿನಿಮಾರಂಗದಲ್ಲಿ ಹೆಚ್ಚು ಸಕ್ರೀಯವಾಗಿಲ್ಲ
ಆದರೆ ಶೀಘ್ರದಲ್ಲೆ ಅವರು ಹೊಸ ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ತನ್ನ ಅದ್ಭುತ ನಟನಾ ಸಾಮರ್ಥ್ಯವನ್ನು ಪ್ರದರ್ಶಿಸಿ ಅಭಿಮಾನಿಗಳನ್ನು ರಂಜಿಸುತ್ತಾರೆ ಎನ್ನುವ ಸುದ್ದಿಯೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕಳೆದ ಕೆಲವು ಸಮಯದಿಂದಲೂ ಸಹ ಸಿನಿಮಾ ರಂಗದಿಂದ ಅಂತರವನ್ನು ಕಾಯ್ದುಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಹೆಚ್ಚು ಸುದ್ದಿಗಳಲ್ಲಿ ಸಹ ಕಾಣಿಸಿಕೊಳ್ಳುತ್ತಿಲ್ಲ.
ಇದೀಗ ಚಿತ್ರರಂಗದಲ್ಲಿನ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡುವ ಮೂಲಕ ಒಂದು ಸಂಚಲನಕ್ಕೆ ಕಾರಣವಾಗಿದ್ದಾರೆ. ಸಂಚಲನ ಹೇಳಿಕೆಯೊಂದರಲ್ಲಿ ನಟಿ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಎನ್ನುವುದು ಇದೆ ಎಂದು ಹೇಳುವ ಮೂಲಕ ಎಲ್ಲರ ಗಮನವನ್ನು ಸೆಳೆದಿದ್ದಾರೆ. ತೆಲುಗು ಇಂಡಸ್ಟ್ರಿಯಲ್ಲಿ ಸಹ ಅವಕಾಶಗಳನ್ನು ಕೊಡುವುದಾಗಿ ಸಿನಿಮಾ ನಾಯಕಿಯರನ್ನು ತಮ್ಮ ಹಿಡಿತಕ್ಕೆ ಪಡೆದುಕೊಳ್ಳುವ ಸಂಸ್ಕೃತಿ ಟಾಲಿವುಡ್ ಚಿತ್ರರಂಗದಲ್ಲೂ ಇದೆ ನಾನು ಅದನ್ನು ನೋಡಿದ್ದೇನೆ. ಇದು ಕೇವಲ ತೆಲುಗಿನಲ್ಲಿ ಮಾತ್ರ ಅಲ್ಲದೆ ಎಲ್ಲಾ ಭಾಷೆಯ ಸಿನಿಮಾ ರಂಗಗಳಲ್ಲೂ ಕೂಡಾ ಇದೆ.
ನಾನು ಸಿನಿಮಾ ರಂಗಕ್ಕೆ ಬಂದಾಗಿನಿಂದಲೂ ನೇರವಾಗಿ ಮಾತನಾಡುತ್ತೇನೆ ಹಾಗೂ ನನ್ನ ಈ ಸ್ವಭಾವದಿಂದಲೆ ಅಂತಹ ಪರಿಸ್ಥಿತಿ ಎದುರಾಗಿಲ್ಲ. ಟಾಲಿವುಡ್ ಇಂಡಸ್ಟ್ರಿಯಲ್ಲಿ ಮಹಿಳೆಯರು ಲೈಂ ಗಿಕ ಕಿರುಕುಳದಿಂದ ಸಂಕಟ ಪಡುತ್ತಿದ್ದಾರೆ, ಆ ವಿಷಯವನ್ನು ನಾನು ಕೂಡಾ ಒಪ್ಪುತ್ತೇನೆ. ನನ್ನ ಮನಸ್ತತ್ವ ಎಂಥದ್ದು ಎಂದು ಎಲ್ಲರಿಗೂ ಗೊತ್ತಿರುವುದರಿಂದ ನನ್ನ ಬಳಿ ಯಾರೂ ಎಂದೂ ಅಂತಹ ಮಾತುಗಳನ್ನು ಆಡಿಲ್ಲ ಎಂದು ಹೇಳುವ ಮೂಲಕ ನಟಿ ಅನುಷ್ಕಾ ಶೆಟ್ಟಿ ತೆಲುಗು ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಅಸ್ತಿತ್ವದಲ್ಲಿದೆ ಎಂದು ಸಂಚಲನ ಹುಟ್ಟಿಸುವಂತಹ ಹೇಳಿಕೆಯನ್ನು ನೀಡಿದ್ದಾರೆ. ಸ್ಟಾರ್ ನಟಿ ಈ ಮಾತು ಹೇಳಿರುವುದು ಸಹಜವಾಗಿಯೆ ಸಂಚಲನಕ್ಕೆ ಕಾರಣವಾಗಿದೆ. ಅದೇನೆ ಇರಲಿ ಇರುವ ವಿಷಯವನ್ನು ಇದ್ದಂತೆ ಹೇಳುವ ಅನುಷ್ಕಾ ಅವರ ಸ್ವಭಾವ ಎಲ್ಲರಿಗೂ ಇಷ್ಟವಾಗುತ್ತದೆ. ( video credit :social post tv