ಹೊಸ ಧಾರಾವಾಹಿ ಮೂಲಕ ನಟ ಅನಿರುದ್ಧ್ ಹೀರೋ ಆಗಿ ಎಂಟ್ರಿ.. ಯಾವ ವಾಹಿನಿ ಗೊತ್ತಾ.. ಇದು ಗುಡ್ ನ್ಯೂಸ್ ಅಂದ್ರೆ..
ಕನ್ನಡ ಕಿರುತೆರೆಯ ಸೆನ್ಸೇಷನಲ್ ಹೀರೋ ಎಂದೇ ಖ್ಯಾತರಾಗಿದ್ದ ನಟ ಅನಿರುದ್ಧ್ ಇದೀಗ ಮತ್ತೆ ದೊಡ್ಡ ಮಟ್ಟದಲ್ಲಿ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ.. ಹೌದು ಹೊಸ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಹೀರೋ ಆಗಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದು ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆನ್ನಬಹುದು.. ರಾತ್ರೋ ರಾತ್ರಿ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಿಗೆ ಈ ವಿಚಾರವನ್ನು ಅಧಿಕೃತವಾಗಿ ತಿಳಿಸಿದ್ದು ಅಭಿಮಾನಿಗಳು ಶುಭಾಶಯ ತಿಳಿಸಿ ಅವರೂ ಸಹ ಸಂತೋಷ ಪಟ್ಟಿದ್ದಾರೆ.. ಅಷ್ಟಕ್ಕೂ ಯಾವ ಧಾರಾವಾಹಿ ಯಾವ ವಾಹಿನಿ ಸಂಪೂರ್ಣ ಮಾಹಿತಿ ಇದೆ..
ಹೌದು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದ ನಟ ಅನಿರುದ್ಧ್ ಅವರು ಕಳೆದ ಮೂರು ವರ್ಷದ ಹಿಂದೆ 2019 ರಲ್ಲಿ ಜೊತೆಜೊತೆಯಲಿ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ನೀಡುತ್ತಾರೆ.. ಸಾಹಸಸಿಂಹ ಡಾ. ವಿಷ್ಣುವರ್ಧನ್ ಅವರ ಅಳಿಯನ ಕಿರುತೆರೆ ಎಂಟ್ರಿ ದೊಡ್ಡ ಮಟ್ಟದಲ್ಲಿಯೇ ಆಗುತ್ತದೆ.. ಅವರ ಮನೋಜ್ಞ ಅಭಿನಯ ಹಾಗೂ ಗಟ್ಟಿಯಾದ ಕತೆ ಜನರಿಗೆ ಹತ್ತಿರವಾಗುತ್ತದೆ.. ಧಾರಾವಾಹಿ ಶುರುವಾದ ಒಂದೇ ವಾರಕ್ಕೆ ರೇಟಿಂಗ್ ನಲ್ಲಿ ದಾಖಲೆ ಬರೆಯುತ್ತದೆ.. ಬರೋಬ್ಬರಿ 11.6 ಟಿವಿಆರ್ ಪಡೆಯುವ ಮೂಲಕ ಭರ್ಜರಿಯಾಗಿ ಅನಿರುದ್ಧ್ ಅವರನ್ನು ಜನರು ಸ್ವಾಗತಿಸುತ್ತಾರೆ.. ನಿರೀಕ್ಷೆಗೂ ಮೀರಿ ದೊಡ್ಡ ಮಟ್ಟದಲ್ಲಿ ಯಶಸ್ಸು ಸಿಗುತ್ತದೆ.. ಜನರು ಅನಿರುದ್ಧ್ ಅವರನ್ನು ಕಿರುತೆರೆಯಲ್ಲಿ ಒಪ್ಪಿಕೊಂಡು ದೊಡ್ಡ ಮಟ್ಟದ ಅಭಿಮಾನಿ ಬಳಗ ಸೃಷ್ಟಿಯಾಗುತ್ತದೆ.. ವಾರಗಳು ಕಳೆದಂತೆ ಧಾರಾವಾಹಿ ರೇಟಿಂಗ್ ನಲ್ಲಿ ಸಾಲು ದಾಖಲೆಯನ್ನು ಮಾಡುತ್ತದೆ..
ಮೂರು ವರ್ಷಗಳ ಕಾಲ ಜೊತೆಜೊತೆಯಲಿ ಧಾರಾವಾಹಿಯ ಯಶಸ್ಸಿನ ಜರ್ನಿ ಹಾಗೆ ಮುಂದುವರೆಯುತ್ತದೆ.. ಎಷ್ಟೇ ಹೊಸ ಧಾರಾವಾಹಿಗಳು ಬಂದರೂ ಸಹ ಕನ್ನಡ ಕಿರುತೆರೆಯ ಟಾಪ್ ಐದು ಧಾರವಾಹಿಗಳಲ್ಲಿ ಜೊತೆಜೊತೆಯಲಿ ಧಾರಾವಾಹಿ ಒಂದಾಗಿರುತ್ತದೆ..
ಆದರೆ ಕಳೆದ ಕೆಲ ತಿಂಗಳುಗಳ ಹಿಂದೆ ಜೊತೆಜೊತೆಯಲಿ ಧಾರಾವಾಹಿ ತಂಡ ಹಾಗೂ ಅನಿರುದ್ಧ್ ಅವರ ನಡುವೆ ಮನಸ್ತಾಪ ಉಂಟಾಗುತ್ತದೆ.. ಅನಿರುದ್ಧ್ ಅವರು ಸೆಟ್ ನಿಂದ ಹೊರ ನಡೆದರೆಂದು ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತದೆ.. ಆದರೆ ಸೆಟ್ ನಿಂದ ಹೊರ ಹೋದ ಅನಿರುದ್ಧ್ ಅವರನ್ನು ಧಾರಾವಾಹಿ ತಂಡ ಧಾರಾವಾಹಿ ಇಂದಲೇ ಕೈಬಿಟ್ಟಿದ್ದು ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗುತ್ತದೆ.. ಅತ್ತ ವಾಹಿನಿಯವರು ಹೊಸ ನಟನನ್ನು ಕರೆತಂದು ಧಾರಾವಾಹಿ ಮುಂದುವರೆಸಿದರೆ ಇತ್ತ ಅಭಿಮಾನಿಗಳು ಅನಿರುದ್ಧ್ ಅವರಿಲ್ಲದ ಧಾರಾವಾಹಿಯನ್ನು ನಿರಾಕರಿಸುತ್ತಾರೆ.. ಅದಕ್ಕೂ ಮೀರಿ ಅನಿರುದ್ಧ್ ಅವರನ್ನು ಸಂಪೂರ್ಣ ಕಿರುತೆರೆ ಇಂದಲೇ ಬ್ಯಾನ್ ಮಾಡಲಾಗುವುದು ಎಂದು ಜೊತೆಜೊತೆಯಲಿ ನಿರ್ಮಾಪಕ ಕಂ ನಿರ್ದೇಶಕ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಿ ಅಲ್ಲಿಯೂ ದೊಡ್ಡ ಹೈಡ್ರಾಮಾ ನಡೆದು ಅನಿರುದ್ಧ್ ಅವರು ಕಿರುತೆರೆಯಿಂದ ಬ್ಯಾನ್ ಎನ್ನುವ ಸುದ್ದಿ ಹಬ್ಬಿಕೊಂಡಿರುತ್ತದೆ.. ಆದರೆ ಇದೀಗ ಆ ಎಲ್ಲಾ ಸುದ್ದಿಯನ್ನು ಸೈಡಿಗೆ ತಳ್ಳಿ ಹೊಸ ಧಾರಾವಾಹಿ ಮೂಲಕ ದೊಡ್ಡ ಮಟ್ಟದಲ್ಲಿಯೇ ಕಂಬ್ಯಾಕ್ ಮಾಡಿದ್ದಾರೆ..
ಹೌದು ಜೊತೆಜೊತೆಯಲಿ ಧಾರಾವಾಹಿಯಿಂದ ಹೊರ ಬಂದ ಕೆಲವೇ ತಿಂಗಳುಗಳಲ್ಲಿ ಹೊಸ ಧಾರಾವಾಹಿ ಮೂಲಕ ತೆರೆ ಮೇಲೆ ಬಂದಿದ್ದಾರೆ.. ಉದಯ ವಾಹಿನಿಯಲ್ಲಿ ಸೂರ್ಯವಂಶ ಎಂಬ ಹೊಸ ಧಾರಾವಾಹಿಯಲ್ಲಿ ಹೀರೋ ಆಗಿರುವ ನಟ ಅನಿರುದ್ಧ್ ಅವರಿಗೆ ಸ್ಯಾಂಡಲ್ವುಡ್ ನ ಸ್ಟಾರ್ ನಿರ್ದೇಶಕ ಎಸ್ ನಾರಾಯಣ್ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ.. ಹೌದು ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಸೂರ್ಯವಂಶ ಧಾರಾವಾಹಿಯಲ್ಲಿ ನಟ ಅನಿರುದ್ಧ್ ಹೀರೋ ಆಗಿದ್ದಾರೆ.. ನಟರೂ ಕೂಡ ಆಗಿರುವ ಎಸ್ ನಾರಾಯಣ್ ಅವರೂ ಸಹ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದು ಕಿರುತೆರೆ ಪ್ರೇಕ್ಷಕರಿಗೆ ನಿರೀಕ್ಷೆ ಹೆಚ್ಚಾಗಿದೆ..
ಇನ್ನು ಉದಯ ವಾಹಿನಿಯಲ್ಲಿ ಈ ಧಾರಾವಾಹಿ ಮೂಡಿ ಬರುತ್ತಿದ್ದು ರೇಟಿಂಗ್ ವಿಚಾರದಲ್ಲಿ ಉದಯ ವಾಹಿನಿಯ ದೊಡ್ಡ ಕಂಬ್ಯಾಕ್ ಗೆ ಈ ಧಾರಾವಾಹಿ ಕಾರಣವಾದರೂ ಆಶ್ಚರ್ಯ ಪಡಬೇಕಿಲ್ಲ.. ಕಾರಣ ಸೂರ್ಯವಂಶ ಅನ್ನುವ ಹೆಸರು.. ಕನ್ನಡ ಸಿನಿಮಾ ಇಂಡಸ್ಟ್ರಿಯ ಎವರ್ ಗ್ರೀನ್ ಸೂಪರ್ ಹಿಟ್ ಸಿನಿಮಾ ಆಗಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಬ್ಲಾಕ್ ಬಸ್ಟರ್ ಸಿನಿಮಾ ಸೂರ್ಯ ವಂಶ.. ಇದೀಗ ಅದೇ ಸಿನಿಮಾದ ಹೆಸರಿನಲ್ಲಿ ಧಾರಾವಾಹಿ ಯೊಂದು ಬರುತ್ತಿದ್ದು ಸಿನಿಮಾದ ನಿರ್ದೇಶಕರೇ ಧಾರಾವಾಹಿಯನ್ನು ನಿರ್ದೇಶನ ಮಾಡುತ್ತಿದ್ದಾರೆ.. ಅದರಲ್ಲೂ ಸಾಹಸಸಿಂಹನ ಅಳಿಯ ಈ ಧಾರಾವಾಹಿಯಲ್ಲಿ ಹೀರೋ ಆಗಿ ಕಂಬ್ಯಾಕ್ ಮಾಡುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ ಎನ್ನಬಹುದು..
ಇನ್ನು ಈ ವಿಚಾರವನ್ನು ಅಧಿಕೃತವಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅನಿರುದ್ಧ್ ಅವರು ಎಸ್ ನಾರಾಯಣ್ ಅವರ ಜೊತೆಗಿನ ಫೋಟೋಗಳನ್ನು ಹಂಚಿಕೊಂಡು “ಅತ್ಯಂತ ಸಂತೋಷದಿಂದ ತಮ್ಮೆಲ್ಲರ ಜೊತೆ ಒಂದು ಸಿಹಿ ಸುದ್ದಿ ಹಂಚಿಕೊಳ್ಳುತ್ತಾ ಇದ್ದೇನೆ…
ನಮ್ಮೆಲ್ಲರ ನೆಚ್ಚಿನ ಉದಯ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಪ್ರಸಾರವಾಗಲಿರುವ ಕಲಾ ಸಾಮ್ರಾಟ್ ಎಸ್. ನಾರಾಯಣ್ ಸರ್ ರವರ ರಚನೆ ಹಾಗೂ ನಿರ್ದೇಶನದ ಹೊಸ ಧಾರಾವಾಹಿ ‘ಸೂರ್ಯವಂಶ’ ದಲ್ಲಿ ನಾನು ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಾ ಇದ್ದೇನೆ. ಇದು ತಮ್ಮೆಲ್ಲರ ಹಾರೈಕೆ, ಆಶೀರ್ವಾದಗಳ ಫಲ. ತಮ್ಮ ಪ್ರೀತಿ, ಪ್ರೋತ್ಸಾಹ ನನ್ನ ಮೇಲೆ ಸದಾ ಇರುತ್ತೆ ಅನ್ನೋ ಭರವಸೆ ನನಗಿದೆ.. ಎಂದಿದ್ದಾರೆ.. ಇತ್ತ ಅಭಿಮಾನಿಗಳು ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದು ಜೀ ಕನ್ನಡ ವಾಹಿನಿಗೆ ಸೆಡ್ಡು ಹೊಡೆದು ಈ ಧಾರಾವಾಹಿ ಹೊಸ ದಾಖಲೆ ಬರೆಯುವ ಸೂಚನೆ ನೀಡುತ್ತಿದೆ.. ಇನ್ನು ಕೆಲವೇ ವಾರಗಳಲ್ಲಿ ಈ ಧಾರಾವಾಹಿ ತನ್ನ ಪ್ರಸಾರವನ್ನು ಆರಂಭಿಸಲಿದ್ದು ಮೂಲಗಳ ಪ್ರಕಾರ ರಾತ್ರಿ 8.30 ಕ್ಕೇ ಈ ಧಾರಾವಾಹಿಯೂ ಪ್ರಸಾರವಾಗಬಹುದು ಎನ್ನಲಾಗಿದೆ..
ನಿಮ್ಮ ಸ್ನೇಹಿತರಿಗೆ ಹಾಗು ವಾಟ್ಸಪ್ಪ್ / ಫೇಸ್ಬುಕ್ ಗ್ರೂಪ್ ಗಳಿಗೆ ಶೇರ ಮಾಡಿ...