ನಿನ್ನ ಬಿಟ್ರೆ ಬೇರೆ ಯಾರು ಆಂಕರ್ ಇಲ್ವಾ ಕೇಳಿದ ಪ್ರಶ್ನೆಗೆ ಗರಂ ಆದ ಅನುಶ್ರೀ ? ಕೊಟ್ಟ ಉತ್ತರ ನೋಡಿ ಎಲ್ಲರೂ ಶಾಕ್

ನಿನ್ನ ಬಿಟ್ರೆ ಬೇರೆ ಯಾರು ಆಂಕರ್ ಇಲ್ವಾ ಕೇಳಿದ ಪ್ರಶ್ನೆಗೆ ಗರಂ ಆದ ಅನುಶ್ರೀ ?  ಕೊಟ್ಟ ಉತ್ತರ ನೋಡಿ ಎಲ್ಲರೂ ಶಾಕ್

ಸ್ಯಾಂಡಲ್‌ವುಡ್‌ನ ಅನುಶ್ರೀ ನಿಜಕ್ಕೂ ಎಲ್ಲರ ಫೇವರಿಟ್ ಆಗಿದ್ದಾರೆ. ಒಂದೇ ವಾಹಿನಿಯಲ್ಲಿಯೇ ವಿವಿಧ ಕಾರ್ಯಕ್ರಮಕ್ಕೆ ನಿರೂಪಕಿ ಆಗಿರೋದು ಗೊತ್ತೇ ಇದೆ. ಆದರೆ, ಈ ನಟಿ ಕನ್ನಡ ಸಿನಿಮಾರಂಗದ ಬಹು ಬೇಡಿಕೆಯ ಆ್ಯಂಕರ್ ಕೂಡ ಆಗಿದ್ದಾರೆ. ಇವರು ಇಲ್ಲದೇ ದೊಡ್ಡ ಸ್ಟಾರ್ ಕಾರ್ಯಕ್ರಮಗಳೇ ಇಲ್ಲ. ಆ ಮಟ್ಟಿನ ಸಾಧನೆಯನ್ನ ಅನುಶ್ರೀ ಮಾಡಿದ್ದಾರೆ.

ಕಾಮಿಡಿ ಕಿಲಾಡಿ ಕಾರ್ಯಕ್ರಮದ ಸ್ಪರ್ಧಿಗಳಾದ ಜಗ್ಗಪ್ಪ, ಸೂರಜ್, ನಯನಾ ಹಾಗೂ ಅನುಶ್ರೀ ಅವರು ಕುಳಿತು ಮಾತನಾಡುವಾಗ, ಅನುಶ್ರೀ ಆಂಕರಿಂಗ್ ಮಾಡುವುದಕ್ಕೆ ವಿರೋಧ ಮಾಡಿದವರ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ, 'ನಾನು ಎಲ್ಲಿಯೇ ನಿರೂಪಣೆಗೆ ಹೋದರೂ ಇವಳು ಬಿಟ್ಟರೆ ಬೇರೆ ಯಾರು ಇಲ್ಲವೇ ನಿಮಗೆ. ಇವಳನ್ನು ಬಿಟ್ಟರೆ ಬೇರೆ ಆಂಕರ್ ಸಿಗುವುದಿಲ್ಲವೇ ಎಂದು ಕೇಳುತ್ತಾರೆ. ಅಂಥವರಿಗೆ ನಾನು ಹೇಳೋದಿಷ್ಟೇ.. ನಾನು ಕೆಲಸ ಮಾಡ್ತೀನಿ ಗುರು. ಅವರವರ ಕೆಲಸವನ್ನು ಪಡೆಯುವುದು ಅವರ ಟ್ಯಾಲೆಂಟಿನ ಮೇಲೆ. ಅದನ್ನು ಮೊದಲು ನೀವು ತಿಳಿದುಕೊಳ್ಳಿ. ಈಗ ನಯನಾ ಇದಾಳೆ, ನಯನ ಕೆಲಸ ಗಿಟ್ಟಿಸಿಕೊಂಡಿದ್ದಾಳೆ ಎಂದರೆ ಅದು ನಯನಾ ಟ್ಯಾಲೆಂಟ್. ಇದೀಗ ನಾನು ನಯನಾ ಅಥವಾ ಬೆರೆಯವರ ಬಗ್ಗೆ ಮಾತನಾಡುತ್ತಿಲ್ಲ. ನನ್ನ ಬಗ್ಗೆ ಬಂದ ಕಾಮೆಂಟ್‌ಗಳ ಬಗ್ಗೆ ನಾನು ಇದೀಗ ಸ್ಪಷ್ಟನೆಯನ್ನು ಕೊಡುತ್ತಿದ್ದೇನೆ ಎಂದಿದ್ದಾರೆ. 

ನಿಮಗೆ ಇವಳನ್ನು ಬಿಟ್ರೇ ಬೇರೆ ಆಂಕರ್ ಇಲ್ವಾ ಎಂದು ಕೇಳುವವರು ಇಲ್ಲಿ ಕೇಳಿ.. ನನಗೆ ಟಾಕ್ ಬ್ಯಾಕ್ ಕೊಡಬೇಡಿ.. ನನಗೆ ಸ್ಕ್ರಿಪ್ಟ್ ಕೊಡಬೇಡಿ ಆದರೂ ನಾನು ಆಂಕರಿಂಗ್ ಮಾಡುತ್ತೇನೆ. 10 ಗಂಟೆ ನಾನು ವೇದಿಕೆ ಮೇಲೆ ಕಾರ್ಯಕ್ರಮವನ್ನು ನಡೆಸಿಕೊಡುತ್ತೇನೆ. ನಾನು ಇದನ್ನು ಎಲ್ಲಿಯೂ ಹೇಳಿಕೊಂಡಿಲ್ಲ, ಯಾರ ಮುಂದೆಯೂ ಮಾತನಾಡಿಲ್ಲ. ಇಲ್ಲಿ ನಾವೆಲ್ಲರೂ ಒಂದು ಫ್ಯಾಮಿಲಿ ತರಹ ಇರುವುದರಿಂದ ನಾನು ನಿಮ್ಮ ಮುಂದೆ ಹೇಳಿಕೊಳ್ಳುತ್ತಿದ್ದೇನೆ ಎಂದು ಹೇಳಿಕೊಂಡರು.

ಮನೆಯಲ್ಲಿ ಕುಳಿತುಕೊಂಡು ಕಾರ್ಯಕ್ರಮವನ್ನು ನೋಡುವಂತಹ ಜನಕ್ಕೆ ಗೊತ್ತಿದೆ. ಅವರು ತುಂಬಾ ಕಾರ್ಯಕ್ರಮವನ್ನು ತುಂಬಾ ಎಂಜಾಯ್ ಮಾಡುತ್ತಿರುತ್ತಾರೆ. ಈ ಮೊಬೈಲ್‌ನಲ್ಲಿ ಮೆಸೇಜ್ ಮಾಡುವಂತಹವರಿಗೆ ಗೊತ್ತಿರೊಲ್ಲ. ಏಕೆಂದರೆ ಅವರಿಗೆ ಮಾಡೋದಕ್ಕೆ ಕೆಲಸ ಇರೋಲ್ಲ ಅದಕ್ಕೆ ಹೀಗೆ ಕಾಮೆಂಟ್‌ಗಳನ್ನು ಮಾಡುತ್ತಾರೆ ಎಂದು ತಿರುಗೇಟು ನೀಡಿದರು.