ಶಂಕರ್ ನಾಗ್ ಸಾವಿನ ಮುನ್ಸೂಚನೆ ಕೊಟ್ಟವರು ಯಾರು..? ಅಚ್ಚರಿ ವಿಷಯ ತಿಳಿಸಿದ ಅನಂತನಾಗ್
ಶಂಕರ್ ನಾಗರಕಟ್ಟೆ ಅವರು 9 ನವೆಂಬರ್ 1954 ರಲ್ಲಿ ಜನಿಸುತ್ತಾರೆ. ಹಾಗೆ 30 ಸೆಪ್ಟೆಂಬರ್ 1990 ರ ಒಂದು ಕಾರು ಆಕ್ಸಿಡೆಂಟ್ ನಲ್ಲಿ ಸಾವನ್ನಪ್ಪಿದ್ದಾರೆ. ಇವರು ಒಬ್ಬ ಭಾರತೀಯ ನಟ, ಚಿತ್ರಕಥೆಗಾರ, ನಿರ್ದೇಶಕ ಮತ್ತು ನಿರ್ಮಾಪಕರು..ಕನ್ನಡ ಭಾಷಾ ಚಲನಚಿತ್ರಗಳು ಮತ್ತು ದೂರದರ್ಶನದಲ್ಲಿನ ಕೆಲಸಕ್ಕಾಗಿ ಹೆಚ್ಚು ಹೆಸರುವಾಸಿ. ಕರ್ನಾಟಕದ ಜನಪ್ರಿಯ ಸಾಂಸ್ಕೃತಿಕ ಐಕಾನ್, ಶಂಕರ್ ನಾಗ್ ಅವರನ್ನು ಹೆಚ್ಚಾಗಿ ಕರಾಟೆ ಕಿಂಗ್ ಎಂದು ಕರೆಯಲಾಗುತ್ತದೆ..
ನಟ ಶಂಕರ್ ನಾಗ್ ಅವರು ಕಾದಂಬರಿಕಾರ ಆರ್. ಕೆ. ನಾರಾಯಣ್ ಅವರ ಸಣ್ಣ ಕಥೆಗಳನ್ನು ಆಧರಿಸಿ ಮಾಲ್ಗುಡಿ ಡೇಸ್ ಎಂಬ ದೂರದರ್ಶನವನ್ನು ನಿರ್ದೇಶಿಸಿದ್ದಾರೆ, ಮತ್ತು ಕೆಲವು ಸಂಚಿಕೆಗಳಲ್ಲಿ ನಟಿಸಿದ್ದಾರೆ. ಇವರಿಗೆ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, ನಾಲ್ಕು ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮತ್ತು ಎರಡು ಫಿಲ್ಮ್‌ಫೇರ್ ಪ್ರಶಸ್ತಿಗಳು ಸಹ ಲಭಿಸಿವೆ...ಹೌದು ನಟ ಶಂಕರ್ ನಾಗ್ ಅವರ ಸಹೋದರರಾದ ಕನ್ನಡದ ಬಹುಬಾಷಾ ನಟ ಅನಂತ್ ನಾಗ್ ಅವರು ಈಗಾಗಲೇ ಎಲ್ಲರಿಗೂ ಚಿರಪರಿಚಿತ.
ಅನಂತ್ ನಾಗ್ ಅವರು ಶಂಕರ್ ನಾಗ್ ಅವರ ಬಗ್ಗೆ ಸಾಕಷ್ಟು ಸಂದರ್ಶನಗಳಲ್ಲಿ ಹೆಚ್ಚಾಗಿಯೇ ಕೆಲವು ವಿಚಾರಗಳನ್ನು ಬೆಚ್ಚಿಟ್ಟಿದ್ದಾರೆ..ಹೌದು, ಇತ್ತೀಚಿಗೆ ಕಳೆದ ವರ್ಷ ಅನಂತ ನಾಗ್ ಅವರು ಕರಾಟೆ ಕಿಂಗ್ ಶಂಕರ್ ನಾಗ್ ಅವರ ಬಗ್ಗೆ ಮತ್ತು ಅವರ ಸಾವಿನ ಕುರಿತಾಗಿ ಮೂರು ವರ್ಷಗಳ ಮುಂಚೆಯೇ ಒಂದು ಮುನ್ಸೂಚನೆ ಕೊಟ್ಟಿದ್ದ ವಿಚಾರವನ್ನ ತಿಳಿಸಿದರು. ಆ ಮುನ್ಸೂಚನೆ ಕೊಟ್ಟವರು ಯಾರು..? ಅನಂತನಾಗ್ ಅವರ ತಂದೆ ಕಾಸರಗೋಡಿನ ಆನಂದಾಶ್ರಮದಲ್ಲಿ ಇರುತ್ತಿದ್ದರಂತೆ. ಅದೇ ಆಶ್ರಮದ ಮಾತಾಜಿ ಆಗಿದ್ದಂತಹ ಕೃಷ್ಣಬಾಯಿ ಅವರು ಈ ವಿಚಾರವನ್ನು ಹೇಳಿದ್ದರಂತೆ. ಆದರೆ ಶಂಕರ್ ನಾಗ್ ಅವರೇ ಎಂದು ಹೆಸರು ಹೇಳಿರಲಿಲ್ಲ, ಬದಲಿಗೆ 1987 ರಲ್ಲಿ ಅನಂತ ನಾಗ್ ತಂದೆ ತೀರಿ ಹೋದರು. ನಂತರ ಆ ಆಶ್ರಮಕ್ಕೆ ಅನಂತ ನಾಗ್ ಅವರ ತಾಯಿ ಹೋಗಿ ಸೇವೆ ಸಲ್ಲಿಸುತ್ತಿರುತ್ತಾರೆ. ಆಗ ಅನಂತನಾಗ್ ಶಂಕರ್ ನಾಗ್ ಅವರ ತಾಯಿಯನ್ನು ಕರೆದು ಆ ಮಾತಾಜಿ ಪ್ರಸಾದ ಹಂಚುವುದಕ್ಕೆ ಸಿದ್ಧವಾಗು ಎಂದು ಹೇಳಿದರಂತೆ.
ಆಗ ಶಂಕರ್ ನಾಗ್ ತಾಯಿಯವರು, ಯಾರು ಏನು ಎಂದು ಕೇಳಿದಾಗ ಯಾರ ಹೆಸರನ್ನು ಕೂಡ ಆ ಮಾತಾ ಹೇಳಿರಲಿಲ್ಲವಂತೆ. 1988 ರಲ್ಲಿ ಇದನ್ನ ಹೇಳಿದ್ದು, ಈ ರೀತಿ ಒಂದು ಘಟನೆ ಮುಂದಿನ ಎರಡು ವರ್ಷಗಳ ವಿಜಯದಶಮಿ ಹಬ್ಬದಲ್ಲಿಯೇ ನಡೆಯುತ್ತೆ ಎಂದು ಮುನ್ಸೂಚನೆ ನೀಡಿದ್ದ ಮಾತಾ ಕೃಷ್ಣ ಬಾಯಿ ಅವರೇ ಸಾವನ್ನಪ್ಪುತ್ತಾರೆ ಎಂದರು ಅನಂತ್ ನಾಗ್. ಈ ವಿಚಾರವನ್ನು ಅನಂತ ನಾಗ್ ಅವರು ಹೇಳಿದ್ದು, ಈ ವರ್ಷ ಅಲ್ಲ ಮುಂದಿನ ಎರಡು ವರ್ಷದ ವಿಜಯದಶಮಿ ಹತ್ತಿರ ಒಂದು ಘಟನೆ ಸಂಭವಿಸಲಿದೆ ಎಂದು ಮಾತಾಜಿ ಹೇಳಿದ್ದರು ಎಂದರು.
ಅದರ ಮುಂದಿನ ವರ್ಷ ನಮ್ಮ ತಾಯಿ ನನ್ನನ್ನು ಮತ್ತು ಶಂಕರನ್ನು ಮನೆಗೆ ಕರೆದಿದ್ದರು. ನಾವು ಹೋಗಿದ್ದೆವು ಕೂಡ. ಆದರೆ ಅದರ ಮುಂದಿನ ವರ್ಷ ವಿಜಯದಶಮಿ ದಿವಸದಂದೆ ಶಂಕರ್ನಾಗ್ ಅಪಘಾತಕ್ಕಿಡಾಗಿ ನಮ್ಮಿಂದ ದೂರ ಹೋಗಿಬಿಟ್ಟನು. ಆಗ ನಮ್ಮ ತಾಯಿ ಆ ದಿನವೇ, ಮಾತಾ ಹೇಳಿದ್ದನ್ನು ನಾನು ಮರೆತುಬಿಟ್ಟೆ ಎಂದು ಕಣ್ಣೀರು ಹಾಕಿದ್ದರಂತೆ. ಇಲ್ಲಿದೆ ನೋಡಿ ಶಂಕರ್ ನಾಗ್ ಅವರ ಸಾವಿನ ಕುರಿತಾಗಿ ಅನಂತ ನಾಗ್ ಅವರು ಏನೆಲ್ಲಾ ವಿಚಾರಗಳನ್ನು ಬಿಚ್ಚಿಟ್ಟಿರುವ ವಿಡಿಯೋ.ಒಮ್ಮೆ ನೋಡಿ ಹಾಗೆ ವಿಡಿಯೋ ಶೇರ್ ಮಾಡಿ ಧನ್ಯವಾದ.. ( video credit : news first kannada )