ಅಮೃತಾ ಅಯ್ಯಂಗಾರ್ 26 ವರ್ಷಗಳಿಂದ ನನ್ನ ತಾಯಿ ನನ್ನ ತಂದೆ ಮುಖ ನೋಡಿಲ್ಲ !! ಶಾಕಿಂಗ್ ಕಾರಣ ನೋಡಿ ?

ಅಮೃತಾ ಅಯ್ಯಂಗಾರ್ 26 ವರ್ಷಗಳಿಂದ ನನ್ನ ತಾಯಿ ನನ್ನ ತಂದೆ ಮುಖ ನೋಡಿಲ್ಲ !! ಶಾಕಿಂಗ್ ಕಾರಣ ನೋಡಿ ?

ಇನ್ನು ಅಮೃತಾ ಅಯ್ಯಂಗಾರ್‌ ಅವರು ಲವ್‌ ಬ್ರೇಕಪ್‌ ಆಗಿದೆ, ಅದರಿಂದ ಪಾಠ ಕಲಿತಿದ್ದೇನೆ ಎಂದು ಕೂಡ ಹೇಳಿದ್ದಾರೆ. ಅಷ್ಟೇ ಅಲ್ಲದೆ “ಡಾಲಿ ಧನಂಜಯ ಅವರು ಮದುವೆಯಾಗುತ್ತಿರೋದು ಖುಷಿಯಾಗಿದೆ ಎಂದು ಹೇಳಿದ್ದಾರೆ 

ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ಅಮೃತಾ ಅಯ್ಯಂಗಾರ್‌ ಅವರು  ತಮ್ಮ  ತಂದೆ ಬಗ್ಗೆ ಮಾತನಾಡಿದ್ದಾರೆ. ತಂದೆಯಿಂದ ತಾಯಿ ದೂರ ಇರುವ ಕಾರಣದ ಬಗ್ಗೆಯೂ ಅವರು ಮಾತನಾಡಿದ್ದಾರೆ.  ಇತ್ತೀಚೆಗೆ ಅವರು ಮುಕ್ತವಾಗಿ ಮಯೂರ ರಾಘವೇಂದ್ರ ಅವರ ಗೋಲ್ಡ್‌ಕ್ಲಾಸ್‌ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. 

ಅಮೃತಾ ಅಯ್ಯಂಗಾರ್‌ ಹೇಳಿದ್ದೇನು? 
"ನನ್ನ ತಾಯಿಯೇ ನನಗೆ ಶಕ್ತಿ. ನನ್ನ ಸ್ನೇಹಿತೆಯರೆಲ್ಲರೂ ಅವರನ್ನು ಡಾನ್‌ ಅಂತ ಕರೆಯುತ್ತಾರೆ. ನನ್ನ ತಾಯಿ ಸ್ವತಂತ್ರಳು. ನನ್ನ ತಾಯಿಗಿಂತ ಬೇರೆ ಸ್ಫೂರ್ತಿ ಬೇಡ. 28 ವರ್ಷಗಳಿಂದ ನನ್ನ ತಾಯಿ ಮಾತ್ರ ನನ್ನನ್ನು ನೋಡಿಕೊಳ್ತಾರೆ. ನಮ್ಮ ತಂದೆ ಇನ್ನೂ ಇದ್ದಾರೆ, ಅವರು ದಿವ್ಯಾಂಗ. ಆದರೆ ನಮ್ಮ ಜೊತೆಗೆ ವಾಸ ಮಾಡ್ತಿಲ್ಲ. ನಾನು ಸಿಂಗಲ್‌ ಪೇರೆಂಟ್‌ ಕಿಡ್"‌ ಎಂದು ಅಮೃತಾ ಅಯ್ಯಂಗಾರ್‌ ಹೇಳಿದ್ದಾರೆ.
ಅಮೃತಾ ಅಯ್ಯಂಗಾರ್‌ ಹೇಳಿದ್ದೇನು? 
"ನನ್ನ ತಾಯಿಗೆ ವಿಷಯ ಮುಚ್ಚಿಟ್ಟು ಮದುವೆ ಮಾಡಲಾಯ್ತು. 19 ವರ್ಷದಿಂದ ಅವರು ದುಡಿಯುತ್ತಿದ್ದಾರೆ. ನಮ್ಮ ತಾಯಿ ಅಪ್ಪನ ಜೊತೆ ಇರೋಕಾಗಲ್ಲ ಅಂತ ಡಿಸೈಡ್‌ ಮಾಡಿದ್ಮೇಲೆ ಅವರು ಅಪ್ಪನ ಮುಖ ನೋಡಿಲ್ಲ. ನನ್ನ ಅಮ್ಮ ಒಂದು ನಿರ್ಧಾರ ತಗೊಂಡಮೇಲೆ ಮುಗೀತು, ಅದನ್ನು ಬದಲಾಯಿಸೋದಿಲ್ಲ. ನನ್ನ ಅಪ್ಪ-ಅಮ್ಮ ದೂರ ಆದಾಗ ನನಗೆ ಐದು ವರ್ಷ ವಯಸ್ಸಾಗಿತ್ತು. ನಾನು ತಾಯಿ ಜೊತೆಗಿದ್ರೂ ಕೂಡ ಅಪ್ಪನ ಜೊತೆಗೆ ಮಾತಾಡ್ತೀನಿ, ಭೇಟಿ ಮಾಡ್ತೀನಿ. ನಾನು ತಂದೆ ಭೇಟಿ ಮಾಡೋದು ತಾಯಿಗೆ ಸಮಸ್ಯೆ ಇಲ್ಲ" ಎಂದು ಅಮೃತಾ ಅಯ್ಯಂಗಾರ್‌ ಹೇಳಿದ್ದಾರೆ.
"ಅಮ್ಮ ಒಂದೊಂದು ರೂಪಾಯಿ ಉಳಿಸ್ತಾರೆ, ನಮ್ಮ ಜೀವನವನ್ನು ನನಗೆ ಅರ್ಪಿಸಿಬಿಟ್ಟಿದ್ದಾರೆ. ನನಗೆ ಅವಳೇ ಶಕ್ತಿ" ಎಂದು ನಟಿ ಅಮೃತಾ ಅಯ್ಯಂಗಾರ್‌ ಹೇಳಿದ್ದಾರೆ."ನಮ್ಮ ತಾಯಿ ಒಂದು ನಿರ್ಧಾರ ತೆಗೆದುಕೊಂಡರೆ ಮುಗೀತು. ಅದನ್ನು ಬದಲಾಯಿಸಲ್ಲ. ನನ್ನ ತಂದೆ-ತಾಯಿ ದೂರಾದಾಗ ನನಗೆ 5 ವರ್ಷ ವಯಸ್ಸು. ನಾನು ಇತ್ತೀಚಿನ ವರ್ಷಗಳಲ್ಲಿ ನಮ್ಮ ತಂದೆ ಭೇಟಿ ಮಾಡ್ತೀನಿ, ಫೋನ್‌ನಲ್ಲಿ ಮಾತನಾಡ್ತೀನಿ. ನನಗೂ ನಿಮ್ಮ ತಂದೆಗೂ ಸಮಸ್ಯೆ, ನಿನಗೂ ಅವರಿಗೂ ಏನು ಇಲ್ಲ, ಹೋಗು ಮಾತಾಡು ಅಂತಾರೆ. ಇವತ್ತಿಗೂ ಒಂದೊಂದು ರೂಪಾಯಿ ಉಳಿಸುತ್ತಾರೆ. ಇಬ್ಬರೂ ತಂಗೀರು, ಮೂವರು ತಮ್ಮಂದಿರ ಮದುವೆ ಮಾಡಿದ್ದಾರೆ. ತನ್ನ ಜೀವನವನ್ನು ನನಗೆ ಅರ್ಪಿಸಿಬಿಟ್ಟಿದ್ದಾರೆ" ಎಂದು ತಾಯಿ ಬಗ್ಗೆ ಮನದಾಳದ ಮಾತುಗಳನ್ನು ಅಮೃತಾ ತೆರೆದಿಟ್ಟಿದ್ದಾರೆ.