14 ವರ್ಷಕ್ಕೆ ಮದ್ವೆಯಾಗಿ ಗಂಡನನ್ನ ಕಳ್ಕೊಂಡ ಖ್ಯಾತ ನಟಿ ಶಶಿಕಲಾ ಅವರ ಕಣ್ಣೀರ ಕಥೆ :

14 ವರ್ಷಕ್ಕೆ ಮದ್ವೆಯಾಗಿ ಗಂಡನನ್ನ ಕಳ್ಕೊಂಡ ಖ್ಯಾತ ನಟಿ ಶಶಿಕಲಾ  ಅವರ ಕಣ್ಣೀರ ಕಥೆ :

ಕನ್ನಡ ನಟಿ ಶಶಿಕಲಾ ಅವರ ಜೀವನದ ದುಃಖದ ಕಥೆಯನ್ನು ಬಹಿರಂಗಪಡಿಸಿದ್ದಾರೆ. ಅವರು 14ನೇ ವಯಸ್ಸಿನಲ್ಲಿ ಮದುವೆಯಾದರು. ಮದುವೆಯ ಐದು ವರ್ಷಗಳ ನಂತರ, ಅವರು ತಮ್ಮ ಪತಿಯನ್ನು ಕಳೆದುಕೊಂಡರು. ಪತಿಯ ಸಂಬಂಧಿಕರು ಅವರನ್ನು ಮನೆಯಿಂದ ಹೊರಹಾಕಲು ಕೇಳಿದರು ಮತ್ತು ಅವರಿಗೆ ಯಾರಿಂದಲೂ ಬೆಂಬಲವಿರಲಿಲ್ಲ.

ಅವರು ಹೇಗೋ ಟಿವಿ ಧಾರಾವಾಹಿಗಳಾದ "ಸಾಕ್ಷಿ" ಮತ್ತು "ರಂಗೋಲಿ"ಗಳಲ್ಲಿ ನಟಿಸಲು ಅವಕಾಶ ಪಡೆದರು. ಆ ನಂತರ, ಅವರು ಚಿತ್ರಗಳಲ್ಲಿ ಸಹಾಯಕ ಪಾತ್ರಗಳಲ್ಲಿ ನಟಿಸಲು ಅವಕಾಶ ಪಡೆದರು.

ಈ ಕಷ್ಟಗಳನ್ನು ಎದುರಿಸುತ್ತಾ, ಶಶಿಕಲಾ ಅವರು ಅನಾಥ ಮಕ್ಕಳಿಗೆ ಬೆಂಬಲ ನೀಡಲು "ಅಮ್ಮನ ಮಡಿಲು" ಎಂಬ ಅನಾಥಾಶ್ರಮವನ್ನು ಪ್ರಾರಂಭಿಸಿದರು. ಈ ಮಹಾನ್ ಕಾರ್ಯಕ್ಕಾಗಿ ನಾವು ಅವರನ್ನು ಗೌರವಿಸಬೇಕು.

ಸುಮಾರು 600ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಶಶಿಕಲಾ 2023ರ ಫೆಬ್ರವರಿಯಲ್ಲಿ ಅಮ್ಮನ ಮಡಿಲು ಆಶ್ರಮ ಆರಂಭಿಸುತ್ತಾರೆ. ಪುನೀತ್ ರಾಜ್‌ಕುಮಾರ್‌ನ ಪ್ರೇರಣೆಯಾಗಿಟ್ಟುಕೊಂಡು ಆರಂಭಿಸಿರುವ ಈ ಟ್ರಸ್ಟ್‌ಗೆ ಅಶ್ವಿನಿ ಲೋಗೋ ಲಾಂಚ್ ಮಾಡುವ ಮೂಲಕ ಸಾಥ್ ಕೊಟ್ಟಿದ್ದಾರೆ. ಆಶ್ರಮದ ಬಗ್ಗೆ ಶಶಿಕಲಾ ಮಾಹಿತಿ ಹಂಚಿಕೊಂಡಿದ್ದಾರೆ.

ಸಿನಿಮಾ ಆದ್ಮೇಲೆ ಏನು ಮಾಡಬೇಕು ಎಂದು ಯೋಚನೆ ಮಾಡಿದಾಗ ಈ ಕನಸು ಬಂತ್ತು. ಒಂದೆರಡು ಸಲ ಆಶ್ರಮದ ಕಡೆ ಹೋಗುತ್ತಿದ್ದೆ ಅಲ್ಲಿ ಊಟ ಕೊಡುತ್ತಿದ್ದೆ. ನಾನು ಯಾಕೆ ಮಾಡಬಾರದು ನನ್ನಂತೆ ಎಷ್ಟೋ ಜನರು ಬರುತ್ತಾರೆ ಎಷ್ಟೊಂದು ಜನರಿಗೆ ನೆರಳು ಕೊಟ್ಟಂತೆ ಆಗುತ್ತೆ ಎಂದು ಯೋಚನೆ ಬಂತ್ತು ಅದೂ ಪುನೀತ್ ರಾಜ್‌ಕುಮಾರ್ ಅವರು ಅಗಲಿದ ಮೇಲೆ. ಅಪ್ಪು ಸರ್ ನಮ್ಮನ್ನು ಬಿಟ್ಟು ಹೋದ ಮೇಲೆ ನಾನು ಯಾಕೆ ಒಂದು ರೀತಿಯಲ್ಲಿ ಸೇವೆ ಮಾಡಬಾರದು ಎಂದು ಆಶ್ರಮ ಶುರು ಮಾಡಿದೆ.  ನಮ್ಮ ಮನೆ ಇರುವುದು ಮಲ್ಲೇಶ್ವರಂನಲ್ಲಿ ಜಾಗ ಹುಡುಕಿ ಹುಡುಕಿ ಗಂಗೊಂಡನಹಳ್ಳಿಯಲ್ಲಿ ಜಾಗ ಸಿಕ್ಕಿತ್ತು. ಕಷ್ಟ ಪಟ್ಟು ನಾನು ದುಡಿದ ಹಣ 8 ಲಕ್ಷವನ್ನು ಉಳಿಸಿಕೊಂಡಿದ್ದೆ ಅದನ್ನು ಬಳಸಿಕೊಂಡೆ ಅದಾದ ಮೇಲೆ 5 ಲಕ್ಷ ಗೋಲ್ಡ್‌ ಲೋನ್‌ ತೆಗೆದುಕೊಂಡು ಕಟ್ಟಿಸಿರುವುದು. ಅಮ್ಮನ ಮಡಿಲು ಆಶ್ರಮಕ್ಕೆ ಅಪ್ಪು ಫೋಟೋ ಇರುವ ಲೋಗೋ ಇದೆ ಅದನ್ನು ಲಾಂಚ್ ಮಾಡಿಕೊಡಿ ಎಂದು ಅಶ್ವಿನಿ ಮೇಡಂನ ಕೇಳಿಕೊಂಡಾಗ ಒಳ್ಳೆಯದಾಗಲಿ ಎಂದು ಸಪೋರ್ಟ್ ಮಾಡಿದ್ದರು' ಎಂದು ಖಾಸಗಿ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ..  ( video credit : third eye )