ನೀಲಿ ಚಿತ್ರಗಳಲ್ಲಿ ನಟಿಸುವಂತೆ ನನಗೆ ಬಲವಂತ ಮಾಡಿದ್ದರು!! ರಮ್ಯಾ ಶಾಕಿಂಗ್ ಹೇಳಿಕೆ ವೈರಲ್‌, ಯಾರು ನೋಡಿ ?

ನೀಲಿ ಚಿತ್ರಗಳಲ್ಲಿ ನಟಿಸುವಂತೆ ನನಗೆ ಬಲವಂತ ಮಾಡಿದ್ದರು!! ರಮ್ಯಾ ಶಾಕಿಂಗ್ ಹೇಳಿಕೆ ವೈರಲ್‌, ಯಾರು ನೋಡಿ ?

ನಟ ರಮೇಶ್‌ ಅರವಿಂದ ಅಭಿನಯದ ಆರ್ಯಭಟ ಸಿನಿಮಾದ ಮೂಲಕ ಸ್ಯಾಂಡಲ್‌ವುಡ್‌ಗೆ ಕಾಲಿಟ್ಟ ಈ ಸುಂದರಿ ಹೆಚ್ಚಾಗಿ ನಟಿಸಿದ್ದು, ತೆಲುಗುವಿನಲ್ಲಿ. ರಮ್ಯಶ್ರೀ ಹಲವು ಕನ್ನಡದ ಚಿತ್ರಗಳಲ್ಲಿ ವಿಶೇಷ ಸಾಂಗ್‌ನಲ್ಲಿಯೂ ಸೊಂಟ ಬಳುಕಿಸಿ ಮಿಂಚಿದ್ದರು. ಇವರ ನಿಜವಾದ ಹೆಸರು ಸುಜಾತಾ.

ತೆಲುಗು ಹುಡುಗಿ ರಮ್ಯಶ್ರೀ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ 30 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮಿಳು, ಮಲಯಾಳಂ, ಹಿಂದಿ ಮತ್ತು ಭೋಜ್‌ಪುರಿ ಭಾಷೆಗಳಲ್ಲಿ 250 ಚಿತ್ರಗಳಲ್ಲಿ ನಟಿಸಿ ಜನ ಮನ ಗೆದ್ದಿದ್ದಾರೆ. ರಮ್ಯಶ್ರೀ ಹೆಚ್ಚಾಗಿ ರೊಮ್ಯಾಂಟಿಕ್‌ ಪಾತ್ರಗಳನ್ನು ನಿರ್ವಹಿಸುತ್ತಾರೆ.

ಬೋಲ್ಡ್‌ ಪಾತ್ರಗಳನ್ನು ನಿರ್ವಹಿಸಿದ್ದಕ್ಕಾಗಿ ಸಾಕಷ್ಟು ಟೀಕೆಗಳನ್ನು ಎದುರಿಸಿದ ನಟಿ, ಯಾವುದೇ ಕಾರಣಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ. ಆದರೆ, ತನ್ನ ದಿಟ್ಟ ಪಾತ್ರಗಳಿಂದಾಗಿ ಅನೇಕ ಜನರು ತನ್ನನ್ನು ತಪ್ಪು ಉದ್ದೇಶದಿಂದ ನೋಡುತ್ತಿದ್ದರು ಅಂತ ಬೇಸರ ವ್ಯಕ್ತಪಡಿಸಿದರು. ಇತ್ತೀಚಿನ ಸಂದರ್ಶನವೊಂದರಲ್ಲಿ, ತನ್ನನ್ನು ಬಲವಂತವಾಗಿ ಕಾರಿನೊಳಗೆ ಕರೆದೊಯ್ಯಲಾಗುವುದು ಎಂದು ಹೇಳಿಕೊಂಡಿದ್ದರು.

ರಮ್ಯಾ ಅವರನ್ನು ಅಮೆರಿಕದಲ್ಲಿ ನಡೆದ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಅಲ್ಲಿ ಆಕೆಯ ಬಟ್ಟೆಯ ಬಗ್ಗೆ ಅಸಭ್ಯವಾಗಿ ಮಾತನಾಡಿದ್ದರು. ಇದರಿಂದ ನನಗೆ ನೋವಾಗಿತ್ತು, ಆಗ ಒಬ್ಬ ವೃದ್ಧ ವ್ಯಕ್ತಿ ಬಂದು, ಮಹಿಳೆಯ ಉಡುಗೆ ತೊಡುಗೆ ನೋಡಿ ಆಕೆಯನ್ನು ನಿರ್ಣಯಿಸಬಾರದು ಎಂದು ಹೇಳಿದರು ಅಂತ ನಟಿ ತಿಳಿಸಿದರು..

ಬಿ-ಗ್ರೇಡ್ ಚಿತ್ರದಲ್ಲಿ ನಟಿಸಲು ನನಗೆ ಸಾಕಷ್ಟು ಆಫರ್‌ಗಳು ಬಂದವು. ನೀಲಿ ಚಿತ್ರಗಳಲ್ಲಿ ನಟಿಸುವಂತೆ ಅನೇಕ ಜನರು ನನ್ನ ಮೇಲೆ ಒತ್ತಡ ಹೇರಿದರು. ನಾನು ಅಂತಹ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಬಲವಾಗಿ ವಾದಿಸಿದೆ. ನಿರ್ದೇಶಕರು ಸಣ್ಣ ಬಟ್ಟೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ ಎಂಬ ಕಾರಣಕ್ಕೆ ರಮ್ಯಾ ಶ್ರೀ ಅವರು ಆ ರೀತಿಯ ಸಿನಿಮಾಗಳನ್ನು ಮಾಡುವುದಿಲ್ಲ ಎಂದು ಹೇಳಿದರು.ಸುಮಾರು ನಿರ್ದೇಶಕರು ನನಗೆ “ನೀಲಿ ಚಿತ್ರ”ಗಳಲ್ಲಿ ನಟಿಸುವಂತೆ  ಹೇಳಿದ್ದರು   ಆದರೆ ಅವರು ಯಾರು ನನಗೆ ಬಲವಂತ ಮಾಡಿದರು ಅನ್ನುವವರ ಹೆಸರನ್ನು ಬಹಿರಂಗ ಪಡಿಸಿಲ್ಲ