ಭರ್ಜರಿ ಬ್ಯಾಚುಲರ್ಸ್' ಶೋಗಾಗಿ 'ಮಹಾನಟಿ' ಗಗನಾ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತಾ ? ಕೇಳಿದರೆ ಶಾಕ್ ಆಗ್ತೀರಾ!!

ಗಗನ ಇದೀಗ ಭರ್ಜರಿ ಬ್ಯಾಚುಲರ್ಸ್ ಸೀಸನ್ 2ರ ರಿಯಾಲಿಟಿ ಶೋನಲ್ಲಿ ಕೂಡ ಮಿಂಚುತ್ತಿದ್ದಾರೆ. ಅದರಂತೆ ಒಂದಾದ ಮೇಲೋಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಗಗನ ಅದ್ಯಾಕೋ ಈಗ ಈ ಕ್ಷೇತ್ರದ ಬಗ್ಗೆ ಬೇಸರಗೊಂಡಂತೆ ಕಾಣುತ್ತಿದ್ದಾರೆ. ಇದಕ್ಕೆ ಕಾರಣ ಕೂಡ ಇದ್ದು, ಇತ್ತೀಚಿಗೆ ಮಾಧ್ಯಮವೊಂದಕ್ಕೆ ನೀಡಿದ ಹೇಳಿಕೆಯಲ್ಲಿ ಗಗನ ಇಲ್ಲಿಗೆ ಬಂದು ತಪ್ಪು ಮಾಡಿದೆನಾ? ಎನ್ನುವ ಗೊಂದಲವನ್ನು ಹೊರಹಾಕಿದ್ದಾರೆ.
ನಾನು ಮನೋರಂಜನಾ ಕ್ಷೇತ್ರಕ್ಕೆ ಬಂದು ಕೇವಲ ಒಂದು ವರ್ಷ ಆಗಿದೆ. ಜೀ ಕನ್ನಡಕ್ಕೆ ಒಂದು ವರ್ಷ ಆಗಿದೆ. ಮುಂಚೆ ಐಟಿಯಲ್ಲಿ ಕೆಲಸ ಮಾಡುತ್ತಿದ್ದೆ. ಅದು ಸಂಪೂರ್ಣವಾಗಿ ಬೇರೆ ಜೀವನವೇ ಆಗಿತ್ತು. ಆ ಸಮಯದಲ್ಲಿ ಮಹಾನಟಿಗೆ ಬಂದು, ಮಹಾನಟಿಯಿಂದ ಡಾನ್ಸ್ ಕರ್ನಾಟಕ ಡಾನ್ಸ್ ಮುಗಿಸಿ, ಈಗ ಭರ್ಜರಿ ಬ್ಯಾಚುಲರ್ಸ್ ೨ ಶೋ ಮಾಡುತ್ತಿದ್ದೇನೆ 'ಈ ಕ್ಷೇತ್ರದಲ್ಲಿ ಎಷ್ಟು ಪಾಸಿಟಿವ್ ಇದೆಯೋ, ಅಷ್ಟೇ ನೆಗೆಟಿವ್ ವಿಚಾರಗಳು ಕೂಡ ಇದೆ. ಬೇಜಾರು ಕೂಡ ಇದೆ. ಇದು ಬೇಕಿತ್ತಾ, ಐಟಿಯಲ್ಲೇ ಕೆಲಸ ಮಾಡಬಹುದಿತ್ತಾ, ಇಲ್ಲಿಗೆ ಬಂದು ತಪ್ಪು ಮಾಡಿದೆನಾ?, ಇದು ಒಳ್ಳೆಯದಾ? ಕೆಟ್ಟದಾ? ಎನ್ನುವ ಆಲೋಚನೆಯಲ್ಲೇ ದಿನ ಕಳೆಯುತ್ತಿದೆ.
ʻಮಹಾನಟಿʼ ಕಾರ್ಯಕ್ರಮದ ನಂತರ ಗಗನಾ ಒಂದಾದ ಮೇಲೆ ಒಂದರಂತೆ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ʻಭರ್ಜರಿ ಬ್ಯಾಚುಲರ್ಸ್ ಮೂಲಕ ಭರ್ಜರಿಯಾಗಿಯೇ ಸದ್ದು ಮಾಡುತ್ತಿದ್ದಾರೆ.ಈ ನಡುವೆ ಗಗನಾ ಭರ್ಜರಿ ಬ್ಯಾಚ್ಯುಲರ್ಸ್ ಕಾರ್ಯಕ್ರಮಕ್ಕೆ ಪಡೆಯುತ್ತಿರುವ ಸಂಭಾವನೆ ಎಲ್ಲೆಡೆ ಚರ್ಚೆಯಾಗುತ್ತಿದೆ. ಟಿವಿ ಲೋಕಕ್ಕೆ ಕಾಲಿಡುವುದಕ್ಕೆ ಮುನ್ನ ಗಗನಾ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಗಗನಾ ತನಗೆ ರಿಯಾಲಿಟಿ ಶೋಗಳಲ್ಲಿ ಸಿಗುವ ಸಂಭಾವನೆ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿದ್ದಾರೆ. ತಾನು ಪಡೆಯುತ್ತಿರುವ ಸಂಭಾವನೆ ಎಷ್ಟು ಎನ್ನುವ ಗುಟ್ಟನ್ನು ರಟ್ಟು ಮಾಡಿದ್ದಾರೆ.
ರಿಯಾಲಿಟಿ ಶೋ ಗಳಲ್ಲಿ ಪಡೆಯುತ್ತಿರುವ ಸಂಭಾವನೆ ಬಗ್ಗೆ ಮಾತನಾಡಿದ ಗಗನ ಇಲ್ಲಿ ನಾನು ಐಟಿಗಿಂತಲೂ ಹೆಚ್ಚು ಖುಷಿಯಾಗಿದ್ದೇನೆ ಎಂದಿದ್ದಾರೆ. ಐಟಿಗೆ ಫ್ರೆಶರ್ ಆಗಿ ಎಂಟ್ರಿ ಪಡೆದಿದ್ದು, ವೇತನ ತುಂಬಾ ಕಡಿಮೆ ಇತ್ತು. ರಿಯಾಲಿಟಿ ಶೋಗಳಲ್ಲಿ ನನಗೆ ಒಳ್ಳೆಯ ದುಡ್ಡು ಬರುತ್ತಿದೆ ಎಂದು ಖುಷಿ ಪಟ್ಟಿದ್ದಾರೆ.
ಆದರೂ ಒಮ್ಮೊಮ್ಮೆ ಐಟಿ ಜೀವನವೇ ಚೆನ್ನಾಗಿತ್ತು ಅನ್ನಿಸುತ್ತದೆಯಂತೆ ಈ ಮಾತಿನ ಮಲ್ಲಿಗೆ. ಆದರೂ ರಿಯಾಲಿಟಿ ಶೋ, ಜನರ ಪ್ರೀತಿ, ಅಭಿಮಾನ ಇವೆಲ್ಲವನ್ನೂ ಕೂಡಾ ಎಂಜಾಯ್ ಮಾಡುತ್ತಿದ್ದಾರೆಯಂತೆ.