ಆ ವಿಡಿಯೋ ಹೊರಬಂದರೆ ನಾನು ಬದುಕಲ್ಲ ಎಂದ ಭಾವನಾ, ವಿಡಿಯೋದಲ್ಲಿ ಏನಿದೆ ಗೊತ್ತಾ!!

ಅದು 2017ರ ಫೆಬ್ರವರಿ ತಿಂಗಳು.. ಕನ್ನಡ ಚಿತ್ರಗಳಲ್ಲೂ ಅಭಿನಯಿಸಿರುವ ಮಲಯಾಳಂ ನಟಿ ಭಾವನಾ ಮೆನನ್ ಶೂಟಿಂಗ್ ಮುಗಿಸಿ ತ್ರಿಶೂರ್ನಿಂದ ಕೊಚ್ಚಿಗೆ ತೆರಳುವಾಗ ನಡೆಯಬಾರದ ಘಟನೆಯೊಂದು ನಡೆದೇ ಹೋಯ್ತು. ಕರಾಳ ಘಟನೆಯೊಂದಕ್ಕೆ ನಟಿ ಭಾವನಾ ಮೆನನ್ ಸಾಕ್ಷಿಯಾದರು. ನಟಿ ಭಾವನಾ ಮೆನನ್ ನೀಡಿದ್ದ ದೂರಿನ ಅನ್ವಯ ಎಫ್ಐಆರ್ ಕೂಡ ದಾಖಲಾಗಿತ್ತು.ಈ ಕಹಿ ಘಟನೆ ನಡೆದು ಆರು ವರ್ಷಗಳಾಗಿವೆ. ಇದೀಗ ಇದೇ ವಿಚಾರದ ಕುರಿತಾಗಿ ನಟಿ ಭಾವನಾ ಮೆನನ್ ಮೌನ ಮುರಿದಿದ್ದಾರೆ. ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಿದ ಘಟನೆ 2017ರಲ್ಲಿ ನಡೆದಿತ್ತು.
ಮಾಲಿವುಡ್ನ ಜನಪ್ರಿಯ ನಟ ದಿಲೀಪ್ ಈ ಕೃತ್ಯದ ಹಿಂದಿನ ಮಾಸ್ಟರ್ಮೈಂಡ್ ಎಂದು ಆರೋಪಿಸಲಾಗಿದೆ. ವೈಯಕ್ತಿಕ ದ್ವೇಷದ ಕಾರಣದಿಂದ ಈ ಕೃತ್ಯ ನಡೆಸಲಾಗಿತ್ತು ಎಂಬ ಆರೋಪ ದಿಲೀಪ್ ಮೇಲಿದೆ. ಈ ಕುರಿತಂತೆ ಮಲಯಾಳಂ ಸಿನಿಮಾ ಕಲಾವಿದರಾದ ಭಾಮಾ, ಸಿದ್ಧಿಖಿ, ಎಡವೆಲ ಬಾಬು, ಬಿಂದು ಪನಿಕ್ಕರ್ ಅವರು ಕೋರ್ಟ್ನಲ್ಲಿ ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದಾರೆ ಎನ್ನಲಾಗಿದೆ. ಘಟನೆ ನಡೆದಾಗ ಪೊಲೀಸರಿಗೆ ಅವರು ನೀಡಿದ ಹೇಳಿಕೆಯನ್ನು ಈಗ ಹಿಂಪಡೆದಿದ್ದಾರೆ. ಈ ಬೆಳವಣಿಗೆಯಿಂದ ಮಲಯಾಳಂ ಚಿತ್ರರಂಗದ ಅನೇಕರಿಗೆ ಬೇಸರ ಆಗಿದೆ.
ನನ್ನನ್ನು ಅಪಹರಿಸಿ, ಲೈಂ *ಗಿ *ಕ ದೌರ್ಜನ್ಯ ನಡೆಸಿದ ಘಟನೆ ಅನ್ನು ಆ ದುರಳರು ವಿಡಿಯೋ ಮಾಡಿದ್ದರು . ಅದು ಲೀಕ್ ಆದರೆ ನಾನು ಬದುಕಲು ಇಷ್ಟ ಪಡಲ್ಲ ಅಂತ ಹೇಳಿದ್ದಾರೆ
ಆ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತ ಆಗಿತ್ತು. ನಟಿ ಭಾವನಾ ಮೆನನ್ ಅವರ ನಿಜನಾಮ ಕಾರ್ತಿಕಾ ಮೆನನ್. ಜೂನ್ 6, 1986 ರಂದು ಜನಿಸಿದವರು ಭಾವನಾ ಮೆನನ್. ತಮ್ಮ 16ನೇ ವಯಸ್ಸಿಗೆ ನಟಿ ಭಾವನಾ ಮೆನನ್ ಚಿತ್ರರಂಗಕ್ಕೆ ಕಾಲಿಟ್ಟರು. ‘ನಮ್ಮಳ್’ ಚಿತ್ರದ ಮೂಲಕ ಸಿನಿ ಪಯಣವನ್ನು ಭಾವನಾ ಮೆನನ್ ಆರಂಭಿಸಿದರು. ಬಳಿಕ ‘ತಿಲಕಂ’, ‘ರನ್ಅವೇ’, ‘ಬಸ್ ಕಂಡಕ್ಟರ್’, ‘ಚೆಸ್’, ‘ಆರ್ಯ’, ‘ಹೀರೋ’, ‘ಲಾಲಿ ಪಾಪ್’, ‘ಸಾಗರ್ ಅಲಿಯಾಸ್ ಜ್ಯಾಕಿ ರೀಲೋಡೆಡ್’ ಮುಂತಾದ ಚಿತ್ರಗಳಲ್ಲಿ ಭಾವನಾ ಮೆನನ್ ಅಭಿನಯಿಸಿದರು.
ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ‘ಜ್ಯಾಕಿ’ ಚಿತ್ರದ ಮೂಲಕ ಭಾವನಾ ಮೆನನ್ ಸ್ಯಾಂಡಲ್ವುಡ್ಗೆ ಕಾಲಿಟ್ಟರು. ನಂತರ ‘ವಿಷ್ಣುವರ್ಧನ’, ‘ರೋಮಿಯೋ’, ‘ಯಾರೇ ಕೂಗಾಡಲಿ’, ‘ಟೋಪಿವಾಲಾ’, ‘ಬಚ್ಚನ್’, ‘ಮೈತ್ರಿ’, ‘ಮುಕುಂದ ಮುರಾರಿ’, ‘ಚೌಕ’, ‘ಟಗರು’, ‘99’, ‘ಇನ್ಸ್ಪೆಕ್ಟರ್ ವಿಕ್ರಂ’, ‘ಶ್ರೀಕೃಷ್ಣ @ ಜೀಮೇಲ್ ಡಾಟ್ ಕಾಮ್’, ‘ಭಜರಂಗಿ 2’ ಸಿನಿಮಾಗಳಲ್ಲಿ ಭಾವನಾ ಮೆನನ್ ನಟಿಸಿದ್ದಾರೆ.ನಟ ದೀಲಿಪ್ ಕ್ರೌರ್ಯದ ಪರಿಣಾಮ ಭಾವನಾ ಮೇಲೆ ಅತ್ಯಾಚಾರ ಸಂಭವಿಸಿತ್ತು. ಭಾವನಾ ಅವರು ಇದರ ಕುರಿತಾಗಿ ದ್ವನಿ ಎತ್ತದಂತೆ ಅವರನ್ನು ಹೆದರಿಸಲಾಗಿತ್ತು. ಆದರೆ ಈ ಕುರಿತು ಭಾವನಾ ಹೇಳಿಕೆ ನೀಡಿ ಕಂಪ್ಲೇಂಟ್ ಕೊಟ್ಟಿದ್ದರಿಂದ ನಟ ದಿಲೀಪ್ ಗೆ ಕೋರ್ಟ್ ಶಿಕ್ಷೆ ವಿದಿಸಿತ್ತು.
ನಂತರದಲ್ಲಿ ಅವರು ಜಾಮೀನು ಮೂಲಕ ಹೊರ ಬಂದಿದ್ದರು.ಕೆಲ ದಿನಗಳ ಹಿಂದೆ ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಮೌನ ಮುರಿದಿದ್ದ ಭಾವನಾ, "ಈ ಐದು ವರ್ಷಗಳಲ್ಲಿ ನನ್ನ ಮೇಲೆ ಆಗಿರುವ ದಾಳಿಯಿಂದಾಗಿ ನನ್ನ ಹೆಸರು ಹಾಗೂ ಗುರುತನ್ನು ಹತ್ತಿಕ್ಕಲಾಗಿದೆ. ನಾನು ಯಾವುದೇ ಅಪರಾಧ ಮಾಡಿಲ್ಲ. ಆದರೂ, ನನ್ನನ್ನು ಅವಮಾನಿಸುವ, ಮೌನಗೊಳಿಸುವ ಮತ್ತು ಪ್ರತ್ಯೇಕಿಸುವ ಪ್ರಯತ್ನಗಳು ನಡೆದಿವೆ. ಆದರೆ, ಅಂತಹ ಸಮಯದಲ್ಲಿ ನನ್ನ ಧ್ವನಿಗೆ ಬೆಂಬಲ ನೀಡಿದವರು ಇದ್ದಾರೆ.
( video credit : Third Eye )
ಈಗ ಅನೇಕರು ನನ್ನ ಪರವಾಗಿ ಮಾತನಾಡುತ್ತಾರೆ. ಈಗ ನಾನು ಒಬ್ಬಂಟಿಯಾಗಿಲ್ಲ. ನ್ಯಾಯಕ್ಕಾಗಿ, ಅಪರಾಧಿಗಳಿಗೆ ಶಿಕ್ಷೆಯಾಗಲು, ಇನ್ನೆಂದೂ ಯಾರೂ ಅಂತಹ ಅಗ್ನಿಪರೀಕ್ಷೆಗೆ ಒಳಗಾಗದಂತೆ ನೋಡಿಕೊಳ್ಳಲು ನಾನು ಈ ಪ್ರಯಾಣವನ್ನು ಮುಂದುವರಿಸುತ್ತೇನೆ" ಎಂದು ಹೇಳಿದ್ದಾರೆ.