ವಿದೇಶದಲ್ಲಿ ಟಾಯ್ಲೆಟ್ ತೊಳಿತಿದ್ದಾರೆ, ಕನ್ನಡದ ಖ್ಯಾತ ನಟ ಅಬ್ಬಾಸ್- ಅಹಂಕಾರದಿಂದ ಅವಕಾಶ ಕಳ್ಕೊಂಡ್ರಾ?
90ರ ದಶಕದಲ್ಲಿ ಹಿಟ್ ಚಿತ್ರಗಳನ್ನು ನೀಡಿದ್ದ ತಮಿಳು ನಟ ನ್ಯೂಜಿಲ್ಯಾಂಡ್ ನಲ್ಲಿ ಟಾಯ್ಲೆಟ್ ತೊಳೆಯುತ್ತಿದ್ರಂತೆ. ಕೇಳಿದ್ರೆ ಶಾಕ್ ಆಗ್ತಿದೆ, ಅಲ್ವಾ? ಅಷ್ಟಕ್ಕೂ ಅವ್ರ ಲೈಫ್‌ನಲ್ಲಿ ಆಗಿದ್ದಾದರೂ ಏನು?
90ರ ದಶಕದಲ್ಲಿ ಹಿಟ್ ಚಿತ್ರಗಳನ್ನು ನೀಡಿದ್ದ ತೆಲುಗು, ತಮಿಳು ನಟ ಅಬ್ಬಾಸ್ ಅವರು ಜೀವನ ಅಂದುಕೊಂಡಂತೆ ಸುಖಮಯವಾಗಿರಲಿಲ್ಲ. ಕಷ್ಟದಿಂದ ಗೆದ್ದು ಜೀವನ ನಡೆಸುತ್ತಿದ್ದಾರೆ. ಅಬ್ಬಾಸ್ ಅವರ ಚೊಚ್ಚಲ ಚಿತ್ರ, 1996ರ ಕಾದಲ್ ದೇಶಂ. ಮೊದಲ ಚಿತ್ರದಲ್ಲೇ ಹಿಟ್‍ನೊಂದಿಗೆ ಅಪಾರ ಅಭಿಮಾನಿಗಳನ್ನು ಪಡೆದ ಕೆಲವೇ ಕೆಲವು ನಾಯಕರಲ್ಲಿ ಅವರು ಒಬ್ಬರು. ಸಿನಿಮಾ ಸೂಪರ್ ಹಿಟ್ ಆದ ನಂತರ ಅಬ್ಬಾಸ್ ಹಿಂತಿರುಗಿ ನೋಡಲೇ ಇಲ್ಲ.
1996 ರ ಚಲನಚಿತ್ರ ಪ್ರೇಮ ದೇಶಂ ಸೇರಿದಂತೆ ಹಲವು ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಆಗ ಅಬ್ಬಾಸ್ ಹುಡುಗಿಯರು ತುಂಬಾ ಇಷ್ಟ ಪಡುವ ನಟ ಆಗಿದ್ದರು. ಅಬ್ಬಾಸ್ ಅವರ ಸಿನಿಮಾಗಳ ಹೊರತಾಗಿ, ಅವರ ಹೇರ್ ಸ್ಟೈಲ್‌ಗೆ ಸಾಕಷ್ಟು ಫಾಲೋವರ್ಸ್ ಇದ್ದಾರೆ. ಆಗ ಅವರ ರೀತಿ ಹೇರ್ ಸ್ಟೈಲ್ ಮಾಡಿಕೊಳ್ಳಬೇಕು ಎಂದ ಟ್ರೆಂಡ್ ಸೃಷ್ಟಿ ಆಗಿತ್ತು.
ಸಿನಿಮಾದಿಂದ ಸ್ವಲ್ಪ ದೂರ ಉಳಿದಿದ್ದರೂ ಜನ ಅವರನ್ನು ಪ್ರೀತಿಯಿಂದ ಸ್ಮರಿಸುತ್ತಾರೆ. ಇದೀಗ ಅಬ್ಬಾಸ್ ಸಿನಿಮಾದಿಂದ ದೂರವಾಗಿ ನ್ಯೂಜಿಲ್ಯಾಂಡ್‌ನಲ್ಲಿ ವಾಸಿಸುತ್ತಿದ್ದಾರೆ. ನಟ ನ್ಯೂಜಿಲೆಂಡ್‍ನ ಆಕ್‍ಲ್ಯಾಂಡ್‍ಗೆ ಹೋದ ಮೊದಲು ಪೆಟ್ರೋಲ್ ಬಂಕ್‍ನಲ್ಲಿ ಕೆಲಸ ಮಾಡ್ತಾ ಇದ್ರಂತೆ. ಏನು ಕೆಲಸ ಮಾಡಬೇಕು ಎಂದು ತಿಳಿಯದೇ ಟಾಯ್ಲೆಟ್ ರೂಮ್ ಸಹ ತೊಳೆದಿದ್ದೇನೆ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.
ಮೋಟರ್ ಬೈಕ್ ಮೆಕ್ಯಾನಿಕ್ ಕೆಲಸ ಸಹ ಅಬ್ಬಾಸ್ ಮಾಡಿದ್ದಾರೆ. ಸದ್ಯ ಕಾಲ್ ಸೆಂಟರ್‌ನಲ್ಲಿ ಅನಲಿಸ್ಟ್ ಆಗಿ, ಕೆಲಸಕ್ಕೆ ಸೇರುವವರಿಗೆ ಟ್ರೈನಿಂಗ್ ಕೊಡ್ತಾ ಇದ್ದಾರಂತೆ. ಅಬ್ಬಾಸ್ ನಾನು ಹೀರೋ ಆಗಿದ್ದಾಗ ಅಹಂಕಾರ ಇತ್ತು. ಈಗ ಜೀವನದಲ್ಲಿ ಪಾಠ ಕಲಿತಿದ್ದೇನೆ ಎಂದು ಹೇಳಿದ್ದಾರೆ.
ಅಬ್ಬಾಸ್ ತಮ್ಮ ವೃತ್ತಿಜೀವನದಲ್ಲಿ 10 ಕ್ಕೂ ಹೆಚ್ಚು ತೆಲುಗು ಚಲನಚಿತ್ರಗಳಲ್ಲಿ ಮತ್ತು 50 ಕ್ಕೂ ಹೆಚ್ಚು ತಮಿಳು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲೂ ಕೂಡ ನಟಿಸಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ವೀಡಿಯೊ ವೀಕ್ಷಿಸಿ