ಟಿಕೆಟ್ ಟು ಫಿನಾಲೆ ಗೆ ಆಯ್ಕೆ ಆದ ಇಬ್ಬರು ಸ್ಪರ್ಧಿಗಳು ಯಾರು ಗೊತ್ತಾ?
'ಬಿಗ್ ಬಾಸ್ ಕನ್ನಡ ಸೀಸನ್ 11' ಫಿನಾಲೆ ಜನವರಿ 26, 2025 ರಂದು ನಡೆಯಲಿದೆ. ಈ ದಿನ ಗಣರಾಜ್ಯೋತ್ಸವದ ದಿನವಾಗಿದ್ದು, ಭಾನುವಾರವೂ ಆಗಿದೆ. ಈ ವಿಶೇಷ ದಿನದಲ್ಲಿ ಫಿನಾಲೆ ನಡೆಯುವ ಸಾಧ್ಯತೆ ದಟ್ಟವಾಗಿದೆ. ಸದ್ಯ, ಬಿಗ್ ಬಾಸ್ ಮನೆಯಲ್ಲಿ ಒಂಬತ್ತು ಸ್ಪರ್ಧಿಗಳು ಇದ್ದಾರೆ, ಮತ್ತು ಫಿನಾಲೆಗೆ ಐವರು ಸ್ಪರ್ಧಿಗಳು ತಲುಪುವ ನಿರೀಕ್ಷೆಯಿದೆ. ಉಳಿದ ನಾಲ್ವರಲ್ಲಿ ಡಬಲ್ ಎಲಿಮಿನೇಷನ್ ಸೇರಿದಂತೆ, ಪ್ರತೀ ವಾರ ಎಲಿಮಿನೇಷನ್ ನಡೆಯುವ ಸಾಧ್ಯತೆ ಇದೆ. ಒಂದು ವೇಳೆ ಬಿಗ್ ಬಾಸ್ 112 ದಿನಕ್ಕೆ ಪೂರ್ಣಗೊಳ್ಳುವುದಾದರೆ, ಫಿನಾಲೆ ಡಿಸೆಂಬರ್ 19, 2024 ರಂದು ನಡೆಯಲಿದೆ. ಆದರೆ, ಈ ಬಾರಿ ಒಂದು ವಾರ ಹೆಚ್ಚುವರಿಯಾಗಿ ಬಿಗ್ ಬಾಸ್ ನಡೆಯಲಿದೆ ಎನ್ನಲಾಗುತ್ತಿದೆ.
ಇದೀಗ ಬಿಗ್ ಬಾಸ್ ಮನೆಯಲ್ಲಿ ಫಿನಾಲೆಗೆ ಕಂಟೆಂಡರ್ ಟಾಸ್ಕ್ ಮೂಲಕ ಮನೆಯು ರಣರಂಗ ಆಗಿ ಬದಲಾಗಿದೆ ಎಂದು ಹೇಳಬಹುದು. ಒಂದೊಂದು ಟಾಸ್ಕ್ ನಲ್ಲಿ ಸ್ಪರ್ಧಿಗಳ ನಡುವೆ ಬಿರುಕು ಹೆಚ್ಚಾಗುತ್ತಿದ್ದು ಕೊನೆಗೆ ಏನಾಗಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.'ಬಿಗ್ ಬಾಸ್ ಕನ್ನಡ ಸೀಸನ್ 11' ನಲ್ಲಿ ಫಿನಾಲೆ ಟಿಕೆಟ್ ಗೆಲ್ಲುವ ಟಾಸ್ಕ್‌ಗಳು ಸ್ಪರ್ಧಿಗಳ ನಡುವೆ ತೀವ್ರ ಪೈಪೋಟಿ ಮತ್ತು ಸಂಘರ್ಷಕ್ಕೆ ಕಾರಣವಾಗಿವೆ. ಈ ಟಾಸ್ಕ್‌ಗಳಲ್ಲಿ ಸ್ಪರ್ಧಿಗಳು ಮಿತಿಮೀರಿದ ವರ್ತನೆ ತೋರಿಸುತ್ತಿದ್ದು, ಮನೆಯಲ್ಲಿ ವಾಗ್ವಾದಗಳು ಮತ್ತು ಜಟಾಪಟಿಗಳು ನಡೆಯುತ್ತಿವೆ.
ಈ ಟಾಸ್ಕ್‌ಗಳಲ್ಲಿ, ಸ್ಪರ್ಧಿಗಳು ಎರಡು ತಂಡಗಳಾಗಿ ವಿಭಜಿತರಾಗಿ ಆಟದಲ್ಲಿ ತೊಡಗಿದ್ದಾರೆ. ಟಾಸ್ಕ್‌ಗಳ ನಡುವೆ ನಿಯಮ ಉಲ್ಲಂಘನೆಗಳು ಸಂಭವಿಸುತ್ತಿದ್ದು, ಆಟದ ರೋಚಕತೆ ಹೆಚ್ಚಾಗಿದೆ. ಫಿನಾಲೆ ಟಿಕೆಟ್‌ಗಾಗಿ ಉಗ್ರಂ ಮಂಜು ಅವರ ತೀವ್ರ ಆಟ ಮತ್ತು ತ್ರಿವಿಕ್ರಮ್ ಅವರೊಂದಿಗೆ ನಡೆದ ಬಿಗ್ ಫೈಟಿಂಗ್ ಮನೆಯಲ್ಲಿ ಗಮನ ಸೆಳೆದಿದೆ. ಈ ಟಾಸ್ಕ್‌ಗಳ ಪರಿಣಾಮವಾಗಿ, ಮನೆಯಲ್ಲಿ ಸ್ನೇಹ ಮತ್ತು ಸಂಬಂಧಗಳು ಪರೀಕ್ಷೆಗೆ ಒಳಗಾಗುತ್ತಿವೆ. ಸ್ಪರ್ಧಿಗಳ ತೀವ್ರ ಪೈಪೋಟಿ ಮತ್ತು ಸಂಘರ್ಷಗಳು ಮನೆಯಲ್ಲಿ ಉದ್ವಿಗ್ನ ವಾತಾವರಣವನ್ನು ಸೃಷ್ಟಿಸಿವೆ. ಈ ವರೆಗೂ ಆಗಿರುವ ಟಾಸ್ಕ್ ಮೂಲಕ ನೆನ್ನೆ ಎಪಿಸೋಡ್ ನಲ್ಲಿ ತ್ರಿವಿಕ್ರಮ ಫೈನಾಲೆ ಕಂಟೇಂಡರ್ ಟಾಸ್ಕ್ ಗೆ ಆಯ್ಕೆ ಆಗಿದ್ದಾರೆ ಇನ್ನೂ ಈಗ ಹನುಮಂತು ಕೊಡ ಗೆದ್ದು ಫೈನಾಲೆ ಕಂಟೇಂಡರ್ ಆಗಿ ಆಯ್ಕೆ ಆಗಿದ್ದಾರೆ.