ಹೌದು, ಕಳೆದ ಕೆಲವು ದಿನಗಳ ಹಿಂದೆ ಕನ್ನಡದ ನಟಿ ಕಿರುತೆರೆಯಲ್ಲಿ ಸದ್ದು ಮಾಡಿದ್ದ ಆಕಾಶ ದೀಪ ದಾರಾವಾಹಿ ಮೂಲಕ ಮನೆ ಮಾತಾದ ನಟಿ ದಿವ್ಯ ಶ್ರೀಧರ್ ಹಾಗೂ ಅವರ ಪತಿ ಅಮ್ಜಾದ್ ಖಾನ್ ಅವರ ಗಲಾಟೆ ವಿಚಾರ ದೊಡ್ಡದಾಗಿ ಸದ್ದು ಮಾಡಿತ್ತು. ತನ್ನ ಗಂಡ ತನಗೆ ದೈಹಿಕ ಹಿಂಸೆ ಕೊಡುತ್ತಿದ್ದಾರೆ, ಮತ್ತು ನಾನು ಪ್ರಗ್ನೆಂಟ್ ಎಂಬದು ಗೊತ್ತಾದ ಕೊಡಲೇ ಹೊಟ್ಟೆಗೆ ಒದ್ದು, ನನ್ನನ್ನು ದೂರ ತಳ್ಳುವುದಕ್ಕೆ ಪ್ರಯತ್ನಪಡುತ್ತಿದ್ದಾರೆ. ಹಿಂಸೆ ಕೊಟ್ಟಿದ್ದಾರೆ ಎಂದು ಹಲವು ಆರೋಪಗಳ ಮೂಲಕ ಹೆಣ್ಣು ಮಕ್ಕಳ ಸಂಗದವರ ಜೊತೆ ಸೇರಿ ನಟಿ ದಿವ್ಯಾ ಶ್ರೀಧರ್ ಅಮ್ಜದ್ ಖಾನ್ ಮೇಲೆ ದೂರ ನೀಡಿ ಆತನ ಜೈಲಿಗೆ ಹೋಗುವಂತೆ ಮಾಡಿದ್ದರು ಎನ್ನಲಾಗಿತ್ತು. ಹೌದು ಇದೇ ವಿಚಾರವಾಗಿ ಇದೀಗ ಅವರ ಪತಿ ಅಮ್ಜದ್ ಖಾನ್ ಜೈಲಿನಲ್ಲಿರುವಾಗಲೇ ಇವರ ಕುರಿತು ಇನ್ನೊಂದು ದೊಡ್ಡದಾದ ಸುದ್ದಿ ಹೊರಗಡೆ ಬಂದಿದೆ.

ದಿವ್ಯ ಶ್ರೀಧರ್ ಪತಿ ಅಮ್ಜದ್ ಖಾನ್ ಈ ಮುಂಚೆಯೇ ಒಬ್ಬ ಮಂಗಳಮುಖಿ ಜತೆ ಸಂಬಂಧವನ್ನ ಹೊಂದಿರುವುದಾಗಿ ಒಂದು ಆಡಿಯೋ ಮೂಲಕ ತಿಳಿದು ಬಂದಿದೆಯಂತೆ.ಹೌದು ಮಂಗಳಮುಖಿ ಅವರ ಆಡಿಯೋದಲ್ಲಿ ಕೇಳಿ ಬಂದಿರುವ ಪ್ರಕಾರ ಪ್ರಿಯದರ್ಶಿನಿ ಎಂಬ ಹೆಸರಿನ ಈ ಮಂಗಳ ಮುಖಿ ಜೊತೆ ಅಮ್ಜದ್ ಖಾನ್ ಸ್ನೇಹವನ್ನು ಇಟ್ಟುಕೊಂಡಿದ್ದರಂತೆ. ನಂತರ ಆ ಸ್ನೇಹ ಪ್ರೀತಿಗೆ ತಿರುಗಿದ್ದು ಪ್ರಿಯದರ್ಶಿನಿಯವರ ಜೊತೆ ಮದುವೆಯಾಗಿದ್ದಾರೆ. ಹಾಗೆ ಎರಡು ವರ್ಷ ಒಟ್ಟಿಗೆ ಜೀವನವನ್ನು ಕೂಡ ನಾವು ಚೆನ್ನೈನಲ್ಲಿ ನಡೆಸಿದ್ದೆವು ಎಂದು ಈ ಮಂಗಳಮುಖಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಹೌದು ಅವನೊಬ್ಬ ಹೆಣ್ಣು ಭಾಕ ನಂತರ ನನ್ನನ್ನು ದೂರ ಮಾಡಲು ಪ್ರಯತ್ನ ಪಟ್ಟ, ನಾನು ಆ ನೋವಿನಿಂದ ಹೊರಬರಲು ಮಲೇಶಿಯಾಗಿ ಬಂದೀನಿ ಎಂದು ಆಡಿಯೋ ಮೂಲಕ ಒಂದು ಬಾಂಬ್ಸಿಡಿಸಿದ್ದಾರೆ.

ಈ ಆಡಿಯೋ ವೈರಲ್ ಆಗುತ್ತಿದ್ದಂತೆ ದಿವ್ಯ ಶ್ರೀಧರ್ ಅವರು ಬೆಚ್ಚೆ ಬಿದ್ದಿದ್ದು ಆ ಮಂಗಳಮುಖಿ ಯಾರು, ಈತ ಯಾಕೆ ಸಂಬಂಧ ಆಕೆ ಜತೆ ಹೊಂದಿದ ಎಂದು ತಿಳಿದುಕೊಳ್ಳುವಲ್ಲಿ ಮುಂದೆ ಬರುತ್ತಿದ್ದಾರಂತೆ. ಹಾಗೆ ದಿವ್ಯ ಶ್ರೀಧರ್ ಮತ್ತು ಅಮ್ಜದ್ ಖಾನ್ ಅವರ ಪರಿಚಯ ಆದದ್ದು ಹೇಗೆ ಎಂದರೆ ಕನ್ನಡದಲ್ಲಿ ಗಮನ ಸೆಳೆದಿದ್ದ ಈ ನಟಿ ನಂತರದಲ್ಲಿ ತಮಿಳು ನಾಡು ಕಿರುತೆರೆಯ ಮಾಧ್ಯಮದಲ್ಲಿ ಕೆಲಸಗಳಲ್ಲಿ ಕೂಡ ಅವಕಾಶ ಪಡೆದರು. ಆಗ ಅಲ್ಲಿ ಪರಿಚಿತವಾದ ಅಮ್ಜಾದ್ ಖಾನ್ ಮೊದಲು ಇವರ ಜೊತೆ ಸ್ನೇಹ ಬೆಳೆಸಿದ್ದಾರೆ. ನಂತರ ಆ ಸ್ನೇಹ ಪ್ರೀತಿಗೆ ತಿರುಗಿ ಒಬ್ಬರನ್ನೊಬ್ಬರು ಇಷ್ಟಪಟ್ಟು ಮದುವೆಯಾಗಿದ್ದರು ಕೂಡ. ಆದರೆ ತಾನು ಗರ್ಭಿಣಿ ಆಗುತ್ತಿದ್ದಂತೆ ಅಮ್ಜಾದ್ ಖಾನ್ ನನ್ನಾ ದೂರ ಮಾಡಲು ಯತ್ನಿಸಿ ಹಲ್ಲೆ ಮಾಡಲು ಸಹ ಯತ್ನಿಸಿದ್ದಾನೆ ಎಂದು ಆ ದೂರಿನಲ್ಲಿ ತಿಳಿಸಿದ್ದು ಆರೋಪ ಮಾಡಿ ಆತನ್ನ ಜೈಲಿಗೆ ಹೋಗುವಂತೆ ಮಾಡಿದ್ದಾರೆ.

ಹೌದು ಈ ಆಡಿಯೋ ಮೂಲಕ ಇನ್ನು ಯಾವ ಯಾವ ಪ್ರಕರಣಗಳು ಅಮ್ಜಾದ್ ಖಾನ್ ಮೇಲೆ ಬರಲಿವೆ, ಯಾವ ರೀತಿ ಆತನ ಮೇಲೆ ಈ ಆಡಿಯೋ ಬಾಂಬ್ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕು…

By Kumar K